ಸೋಮವಾರಪೇಟೆ, ಫೆ. ೧೮: ಶ್ರೀ ರವಿಶಂಕರ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ಪಟ್ಟಣ ಸಮೀಪದ ದೊಡ್ಡಮಳ್ತೆ ಗ್ರಾಮದಲ್ಲಿರುವ ಶ್ರೀ ಹೊನ್ನಮ್ಮ ಕೆರೆ ದಡದಲ್ಲಿ ರಥಸಪ್ತಮಿ ಅಂಗವಾಗಿ ೧೦೮ ಸೂರ್ಯ ನಮಸ್ಕಾರ ನಡೆಯಿತು.

ಸಂಸ್ಥೆಯ ಶಿಕ್ಷಕಿ ರಾಗಿಣಿ ಅವರ ನೇತೃತ್ವದಲ್ಲಿ ಸಾರ್ವಜನಿಕರು ಸೂರ್ಯನಿಗೆ ೧೦೮ ಸೂರ್ಯ ನಮಸ್ಕಾರ ಮಾಡಿದರು.

ನಂತರ ಶ್ರೀ ಕ್ಷೇತ್ರ ಹೊನ್ನಮ್ಮನ ದೇವಾಲಯದಲ್ಲಿ ಲಲಿತ ಸಹಸ್ರನಾಮ ನಡೆಯಿತು.

ಈ ಸಂದರ್ಭ ಮಾತನಾಡಿದ ರಾಗಿಣಿ ಅವರು, ಯೋಗ ಮತ್ತು ಧ್ಯಾನದಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ.

ಪ್ರತಿಯೋರ್ವರು ನಿರಂತರವಾಗಿ ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಆರ್ಟ್ ಆಫ್ ಲಿವಿಂಗ್‌ನ ಮೃತ್ಯುಂಜಯ, ಜಿ.ಪಂ. ಮಾಜೀ ಸದಸ್ಯ ಬಿ.ಜೆ. ದೀಪಕ್, ಡಾ. ಸುಪರ್ಣ ಕೃಷ್ಣಾನಂದ್, ಪ್ರಮುಖರಾದ ಕೊಮಾರಪ್ಪ, ಗೌಡಳ್ಳಿ ಗ್ರಾ.ಪಂ. ಅಧ್ಯಕ್ಷ ಅಜ್ಜಳ್ಳಿ ನವೀನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ನಿರಂತರ ಯೋಗ ಕೇಂದ್ರದಿAದ: ಇಲ್ಲಿನ ನಿರಂತರ ಯೋಗ ಕೇಂದ್ರ ಮತ್ತು ಯೋಗ ಕರ್ಮಸ್ಯ ಕೌಶಲ ವತಿಯಿಂದ ಪಟ್ಟಣದ ಟರ್ಫ್ ಮೈದಾನದಲ್ಲಿ ರಥ ಸಪ್ತಮಿ ಆಚರಿಸಲಾಯಿತು. ಸಂಸ್ಥೆಯ ಶಿಕ್ಷಕ ಕಿಬ್ಬೆಟ್ಟ ಗಣೇಶ್ ನೇತೃತ್ವದಲ್ಲಿ ಸಾರ್ವಜನಿಕರು ಸೂರ್ಯ ನಮಸ್ಕಾರ ಮಾಡಿದರು.

ನಂತರ ಮಾತನಾಡಿದ ಗಣೇಶ್ ಅವರು, ಆಧುನಿಕ ಜಗತ್ತಿನಲ್ಲಿ ಯೋಗಾಭ್ಯಾಸದಿಂದ ಮಾತ್ರ ನಮ್ಮ ಆರೋಗ್ಯ ಮತ್ತು ಜೀವನವನ್ನು ಉತ್ತಮಗೊಳಿಸಿಕೊಳ್ಳಲು ಸಾಧ್ಯ. ರಥಸಪ್ತಮಿಯಂದು ಸೂರ್ಯಾರಾಧನೆಯನ್ನು ಮಾಡಿದರೆ ಅನೇಕ ರೋಗಗಳಿಂದ ಗುಣಮುಖರಾಗಬಹುದು. ರಥಸಪ್ತಮಿಯನ್ನು ಆರೋಗ್ಯ ಸಪ್ತಮಿ ಎಂದೂ ಕರೆಯುತ್ತಾರೆ ಎಂದರು.

ರಾಷ್ಟಿçÃಯ ಸ್ವಯಂಸೇವಕ ಸಂಘದ ಪ್ರಮುಖರಾದ ಕೆ.ಎಸ್. ಪದ್ಮನಾಭ ಮಾತನಾಡಿ, ಯೋಗವು ಶಿಸ್ತನ್ನು ಕಲಿಸುತ್ತದೆ. ಮನಸ್ಸು ಮತ್ತು ದೇಹಗಳ ಮೇಲೆ ಸಂಪೂರ್ಣ ಪ್ರಭುತ್ವ ಪಡೆಯುವುದೇ ಯೋಗ ಎಂದು ಅಭಿಪ್ರಾಯಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕ ಗಣೇಶ್ ಅವರನ್ನು ಸನ್ಮಾನಿಸಲಾಯಿತು. ಯೋಗ ಕರ್ಮಸ್ಯ ಕೌಶಲ ಕೇಂದ್ರದ ಪ್ರಶಾಂತ್, ಉಪನ್ಯಾಸಕಿ ಜ್ಯೋತಿ, ಶಿಕ್ಷಕಿಯರಾದ ಬೀನಾ ಮೋಹನ್, ಕುದುಕುಳಿ ಚಂದ್ರಕಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.