ನಾಪೋಕ್ಲು, ಫೆ. ೧೮: ಸಮೀಪದ ಕಕ್ಕಬೆಯ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ``ಕಾಲತ್‌ರ ಕಳಿ” ಎಂಬ ನೂತನ ಕೊಡವ ಚಲನಚಿತ್ರಕ್ಕೆ ಮುಹೂರ್ತ ಪೂಜೆ ಸಲ್ಲಿಸಲಾಯಿತು. ಪಿ ಅಂಡ್ ಜಿ (P & ಉ) ಕ್ರಿಯೇಶನ್ಸ್ ಅಡಿಯಲ್ಲಿ ಬಾಳೆಯಡ ಪ್ರತೀಶ್ ಪೂವಯ್ಯ ಹಾಗೂ ಆಚೆಯಡ ಗಗನ್ ಗಣಪತಿ ನಿರ್ದೇಶನದ ನಾಲ್ಕನೇ ಕೊಡವ ಚಲನಚಿತ್ರ ಇದಾಗಿದ್ದು ಸೋಮೆಯಂಡ ಬೋಸ್ ಬೆಳ್ಳಿಯಪ್ಪ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ನಿನ್ನೆಯಿಂದ ಚಿತ್ರೀಕರಣ ಪ್ರಾರಂಭಗೊAಡಿತು.

ದೇವಾಲಯದ ಪಾರು ಪತ್ತೆಗಾರ ಪರದಂಡ ಪ್ರಿನ್ಸ್ ತಮ್ಮಯ್ಯ ಚಿತ್ರತಂಡದ ಪರವಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು.

ಚಲನಚಿತ್ರದ ನಿರ್ದೇಶಕ ಆಚೆಯಡ ಗಗನ್ ಗಣಪತಿ ಮಾತನಾಡಿ, ಕೊಡವ ಭಾಷೆ ನೂತನ ಸಿನಿಮಾ ಉತ್ತಮ ಚಿತ್ರಕಥೆಯನ್ನು ಹೊಂದಿದೆ ಈಗಿನ ಕಾಲಘಟ್ಟದಲ್ಲಿ ನಡೆಯುವ ಸಾಮಾಜಿಕ ದುಷ್ಪರಿಣಾಮಗಳ ಕುರಿತ ಸಿನಿಮಾ ಇದಾಗಿದ್ದು ಸಾಮಾಜಿಕ ಕಳಕಳಿಯನ್ನು ಹೊಂದಿದೆ ಎಲ್ಲರೂ ವೀಕ್ಷಿಸಿ, ಪ್ರೋತ್ಸಾಹಿಸಬೇಕು ಎಂದರು.

ಸೋಮೆಯAಡ ಬೋಸ್ ಬೆಳ್ಳಿಯಪ್ಪ ಮಾತನಾಡಿ ಹಲವು ಕಿರು ಚಿತ್ರಗಳನ್ನು ಈಗಾಗಲೇ ನಿರ್ಮಿಸಿದ್ದು ನೂತನ ಸಿನಿಮಾ ಉತ್ತಮ ಚಿತ್ರಕಥೆಯನ್ನು ಹೊಂದಿದೆ ಎಂದರು.

ಕಾಲತ್‌ರ ಕಳಿ ಚಿತ್ರ ತಾರಾಗಣದಲ್ಲಿ ತಾತಂಡ ಪ್ರಭ, ಗೋಪುಡ ದೇಸ್ನ ದೇಚಮ್ಮ, ಮಾಚೇಟಿರ ವಿಕಾಸ್, ಚೇನಂಡ ಗಿರೀಶ್, ಸಪ್ನಾ, ಪಾಲೆಯಡ ಸುಚಿತ್ರ ಸುಬ್ಬಯ್ಯ, ಸುಮಿತ್ರ, ಶ್ಯಾಮಲ ಸೇರಿದಂತೆ ೫೦ಕ್ಕೂ ಹೆಚ್ಚು ಕಲಾವಿದರನ್ನು ಒಳಗೊಂಡಿದೆ ಛಾಯಾಗ್ರಹಣ ಮತ್ತು ಸಂಕಲನವನ್ನು ಚಂದ್ರಶೇಖರ್ (ಪಾಪ) ನಿರ್ವಹಿಸುತ್ತಿದ್ದಾರೆ ಎಂದು ಬಾಳೆಯಡ ಪ್ರತೀಷ್ ಪೂವಯ್ಯ ಮಾಹಿತಿ ನೀಡಿದರು.

ಈ ಸಂದರ್ಭ ಅಖಿಲ ಕೊಡವ ಸಮಾಜದ ಅಧ್ಯಕ್ಷ, ದೇವ ತಕ್ಕರಾದ ಪರದಂಡ ಸುಬ್ರಮಣಿ, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡAಡ ನಾಣಯ್ಯ, ಲೆಫ್ಟಿನಲ್ ಬಿದ್ದಂಡ ನಾಣಯ್ಯ, ಅಲ್ಲಾರಂಡ ವಿಠಲ ಹಾಗೂ ಚಿತ್ರ ತಂಡದವರು ಉಪಸ್ಥಿತರಿದ್ದರು.