ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ

*ಗೋಣಿಕೊಪ್ಪ, ಫೆ. ೧೯: ಕೊಡಗಿನಲ್ಲಿ ಕಾರ್ಮಿಕ ಮತ್ತು ಮಾಲೀಕರ ನಡುವೆ ಅವಿನಾಭಾವ ಸಂಬAಧ ಬೆಸೆದುಕೊಂಡಿದ್ದು, ಈ ನೆಲದಲ್ಲಿ ಜೀತಪದ್ಧತಿ ಇಂದಿಗೂ ಜೀವಂತವಾಗಿದೆ ಎಂದು ಆರೋಪಿಸುತ್ತಿರುವುದು ಸತ್ಯಕ್ಕೆ ದೂರವಾದ ವಿಚಾರವಾಗಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ನೆಲ್ಲಿರ ಚಲನ್‌ಕುಮಾರ್ ಹೇಳಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿದ ಅವರು, ಹೊರಗಿನಿಂದ ಬಂದ ಎನ್‌ಜಿಒ ಸಂಸ್ಥೆಗಳು ಈ ಬಗ್ಗೆ ವಿನಾಕಾರಣ ಗೊಂದಲವನ್ನು ಸೃಷ್ಟಿಸಿ ಸತ್ಯಕ್ಕೆ ದೂರವಾದ ವಿಚಾರಗಳನ್ನು ಪ್ರಚಾರ ಪಡಿಸುವ ಮೂಲಕ ಕಾರ್ಮಿಕ ಮತ್ತು ಮಾಲೀಕರ ನಡುವೆ ಘರ್ಷಣೆಯನ್ನು ಉಂಟುಮಾಡುತ್ತಿವೆ. ಇಂತಹÀ ವ್ಯವಸ್ಥೆ ಮುಂದುವರೆಯುವುದು ಅಪಾಯಕಾರಿಯಾದ ನಡೆಯಾಗಿದೆ ಎಂದು ಹೇಳಿದ್ದಾರೆ.

ಈ ನೆಲದ ಆಚಾರ, ವಿಚಾರಗಳು, ಸಂಪ್ರದಾಯಗಳು, ಕಾರ್ಮಿಕ ಮಾಲೀಕರ ಬಾಂಧವ್ಯದ ಒಗ್ಗಟ್ಟುಗಳನ್ನು ತಿಳಿಯದ ಕೆಲವರು ವ್ಯವಸ್ಥೆಯನ್ನು ಪ್ರಚೋದನÀಕಾರಿಯಾಗಿ ಮಾಡುತ್ತಿದ್ದಾರೆ. ಇದರಿಂದ ವಿನಾಕಾರಣ ಮಾಲೀಕರ ಮೇಲೆ ಜೀತಪದ್ಧತಿಯಡಿಯಲ್ಲಿ ದೂರುಗಳು ದಾಖಲಾಗುತ್ತಿರುವುದರ ವಿಷಾದದ ಬೆಳವಣಿಗೆಯನ್ನು ಕಾಣಬೇಕಾಗಿದೆ. ಇದರಿಂದ ಕೊಡಗಿನಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಲು ಕಾರಣವಾಗಬಲ್ಲದು ಎಂಬುವುದನ್ನು ಜೀತಪದ್ಧತಿ ಜೀವಂತ ಎಂದು ಹುಸಿ ಆರೋಪವನ್ನು ಮಾಡುತ್ತಿರುವವರು ಗಮನಿಸಬೇಕಾಗಿದೆ ಎಂದರು. ಸುಳ್ಳು ಆರೋಪದಲ್ಲಿ ದೂರು ದಾಖಲಿಸುತ್ತಿರುವ ಬಗ್ಗೆ ಪೊಲೀಸ್ ಇಲಾಖೆ ಪರಾಮರ್ಶಿಸಿ ದೂರನ್ನು ಸ್ವೀಕರಿಸಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.