ಮಡಿಕೇರಿ, ಫೆ. ೧೯: ಬಾಡಗರಕೇರಿ ಗ್ರಾಮದಲ್ಲಿರುವ ಶ್ರೀ ಮೃತ್ಯುಂಜಯ ದೇವಸ್ಥಾನದ ವಾರ್ಷಿಕ ಉತ್ಸವಕ್ಕೆ ಇಂದು ಚಾಲನೆ ದೊರೆತಿದ್ದು, ತಾ. ೨೯ರ ತನಕ ಜರುಗಲಿದೆ. ಇಂದು ಬೆಳಿಗ್ಗೆ ೬ ಗಂಟೆಗೆ ತಕ್ಕ ಮುಖ್ಯಸ್ಥರು ಆಡಳಿತ ಮಂಡಳಿ, ಊರಿನವರು ಸೇರಿ ತಳಿಯತಕ್ಕಿ ಬೊಳ್‌ಚ, ದುಡಿಕೊಟ್ಟ್ಪಾಟ್ ಸಹಿತವಾಗಿ ಹಬ್ಬಕ್ಕೆ ಚಾಲನೆ ನೀಡುವ ಕಾರ್ಯ ಬಳಿಕ ಊರಿನ ಪರವಾಗಿ ಶತರುದ್ರಾಭಿಷೇಕ, ಪ್ರಸಾದ ವಿತರಣೆ ಜರುಗಿತು. ರಾತ್ರಿ ೮ ಗಂಟೆಗೆ ಆರಿದ್ರ ನಕ್ಷತ್ರದ ಮುಹೂರ್ತದಲ್ಲಿ ಕೊಡಿಮರ ನಿಲ್ಲಿಸುವ ಕಾರ್ಯ, ನಂತರ ಶುದ್ಧ ಕಲಶ, ಉತ್ಸವ ಮೂರ್ತಿ ದರ್ಶನ ಪ್ರಸಾದ ವಿತರಣೆಯೊಂದಿಗೆ ವಾರ್ಷಿಕ ಉತ್ಸವ ಆರಂಭಗೊAಡಿತು. ತಾ.೨೯ರ ತನಕ ವಿವಿಧ ಕೈಂಕರ್ಯಗಳು ನಡೆಯಲಿವೆ.