ಮಡಿಕೇರಿ, ಫೆ. ೧೯: ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನಗರದ ಚೈನ್‌ಗೇಟ್ ಬಳಿ ಅಳವಡಿಸಿರುವ ಮಾಹಿತಿ ಫಲಕವನ್ನು ರೋಟರಿ ಜಿಲ್ಲಾ ಗವರ್ನರ್ ಹೆಚ್.ಆರ್. ಕೇಶವ್ ಅನಾವರಣಗೊಳಿಸಿದರು.

ಮೊಬೈಲ್ ಗಮನಿಸುತ್ತಾ ಸಂಚರಿಸಬೇಡಿ, ಅಪಾಯಕ್ಕೆ ಆಸ್ಪದ ಮಾಡಬೇಡಿ, ಮಂಜು ಮುಸುಕಿದ ರಸ್ತೆಯಲ್ಲಿ ಸಂಚರಿಸುವಾಗ ಎಚ್ಚರವಿರಲಿ, ಮುಂದಿನ ವಾಹನವನ್ನು ಹಿಂದೆ ಹಾಕುವ ಸಂದರ್ಭ ಹುಷಾರಾಗಿರಿ ಎಂಬ ಎಚ್ಚರಿಕೆಯ ಸಂದೇಶವುಳ್ಳ ಫಲಕವು ಉತ್ತಮ ಜಾಗೃತಿ ಸಂದೇಶವಾಗಿದೆ ಎಂದು ಕೇಶವ್ ಶ್ಲಾಘಿಸಿದರು.

ಈ ಸಂದರ್ಭ ನಗರಸಭೆಯ ಅಧ್ಯಕ್ಷೆ ಅನಿತಾ ಪೂವಯ್ಯ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾರ್ಯದರ್ಶಿ ರತ್ನಾಕರ್ ರೈ, ಸಹಾಯಕ ಗವರ್ನರ್ ದೇವಣಿರ ತಿಲಕ್, ವಲಯ ಸೇನಾನಿ ಎಸ್.ಎಸ್. ಸಂಪತ್ ಕುಮಾರ್, ಪ್ರಮುಖರಾದ ಬಿ.ಜಿ. ಅನಂತಶಯನ, ಅನಿಲ್ ಎಚ್.ಟಿ. ಬಿ.ಕೆ. ರವೀಂದ್ರರೈ, ಪ್ರಸಾದ್ ಗೌಡ ಸೇರಿದಂತೆ ಮಿಸ್ಟಿ ಹಿಲ್ಸ್ ನಿರ್ದೇಶಕರು ಹಾಜರಿದ್ದರು.