ಮಡಿಕೇರಿ, ಫೆ. ೧೯: ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಅಂಗವಾಗಿ ಕೊಡಗು ಜಿಲ್ಲಾಡಳಿತವು ಕೊಡಗು ಜಿಲ್ಲೆಯ ಸಾರ್ವಜನಿಕರಿಗೆ ಮುಕ್ತ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿದೆ.

‘ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ’ ನಮ್ಮ ಸಂವಿಧಾನ ನಮ್ಮ ಹೆಮ್ಮೆ (ಭಾರತ ಸಂವಿಧಾನದಲ್ಲಿ ಕಲ್ಪಿಸಿರುವ ಹಕ್ಕು ಮತ್ತು ಕರ್ತವ್ಯಗಳ ಹಿನ್ನೆಲೆಯಲ್ಲಿ); ಸ್ಪರ್ಧೆಯು ಕೊಡಗು ಜಿಲ್ಲೆಯ ಸಾರ್ವಜನಿಕರಿಗೆ ಮುಕ್ತವಾಗಿ ನಡೆಯಲಿದೆ. ಪ್ರಬಂಧ ಸ್ಪರ್ಧೆಗೆ ನೀಡಿರುವ ವಿಷಯಗಳಲ್ಲಿ ಯಾವುದಾದರು ಒಂದು ವಿಷಯವನ್ನು ಆಯ್ಕೆ ಮಾಡಿ ಸ್ಪುಟವಾದ ಕೈ ಬರಹಗಳಲ್ಲಿ ‘ಎ೪’ ಅಳತೆಯ ಕಾಗದಗಳಲ್ಲಿ ೧,೫೦೦ ಪದಗಳಿಗೆ ಮೀರದಂತೆ ಬರೆದು ಕಳುಹಿಸಬೇಕು. ಚಿತ್ರಕಲಾ ಸ್ಪರ್ಧೆಗೆ ಸಂಬAಧಿಸಿದAತೆ ನೀಡಿರುವ ವಿಷಯಗಳ ಬಗ್ಗೆ ‘ಎ೩’ ಅಳತೆಯ ಡ್ರಾಯಿಂಗ್ ಶೀಟ್‌ನಲ್ಲಿ ಚಿತ್ರ ರಚನೆ ಮಾಡಿ ಸಲ್ಲಿಸಬೇಕು.

ಪ್ರಬಂಧ ಸ್ಪರ್ಧೆಯ ಪ್ರಬಂಧಗಳನ್ನು ಹಾಗೂ ಚಿತ್ರಕಲಾ ಸ್ಪರ್ಧೆಯ ಚಿತ್ರಗಳನ್ನು ಫೆ.೨೫ ರಂದು ಸಂಜೆ ೪.೩೦ ರ ಒಳಗೆ ‘ಉಪ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ ಹತ್ತಿರ ಎಸ್.ಜಿ.ಎಸ್.ವೈ ಕಟ್ಟಡ, ಕೊಡಗು ಜಿಲ್ಲೆ, ಮಡಿಕೇರಿ ದೂ : ೦೮೨೭೨-೨೨೫೫೩೧ ಗೆ ಖುದ್ದಾಗಿ ಅಥವಾ ನೋಂದಾಯಿತ ಅಂಚೆಯ ಮೂಲಕ ತಲುಪಿಸಬೇಕು. ಕೊನೆಯ ದಿನಾಂಕದ ನಂತರ ಬರುವ ಪ್ರಬಂಧಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಗಳ ವಿಜೇತರಿಗೆ ಪ್ರಥಮ ರೂ. ೫ ಸಾವಿರ, ದ್ವಿತೀಯ ರೂ. ೩ ಸಾವಿರ ಹಾಗೂ ತೃತೀಯ ರೂ. ೨ ಸಾವಿರ ನಗದು ಬಹುಮಾನ ನೀಡಲಾಗುವುದು. ಸಮಿತಿಯ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.

ಆನ್ ಲೈನ್ ರಸಪ್ರಶ್ನೆ: ‘ಸಂವಿಧಾನ ಜಾಗೃತಿ ಜಾಥಾ’ ಅಭಿಯಾನದ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆನ್‌ಲೈನ್ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದ ಅಂಗವಾಗಿ ಭಾರತ ಸಂವಿಧಾನದ ಕುರಿತಂತೆ ಪ್ರಶ್ನಾವಳಿ ಸಿದ್ಧಪಡಿಸಲಾಗಿದೆ. ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಗೂಗಲ್ ಫಾರ್ಮ್ನಲ್ಲಿ ಕೋರಿರುವ ಮಾಹಿತಿಯನ್ನು ಭರ್ತಿ ಮಾಡಿ ನೀಡಿರುವ ಬಹು ಆಯ್ಕೆ ಮಾದರಿಯ ಪ್ರಶ್ನಾವಳಿಗಳಿಗೆ ಉತ್ತರಿಸಬಹುದು. ಕೊಡಗು ಜಿಲ್ಲಾ ಆಡಳಿತ ವತಿಯಿಂದ ಆಯೋಜಿಸಲಾಗಿರುವ ಈ ವಿಶೇಷ ಅಭಿಯಾನ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿನ ಎಲ್ಲಾ ವಿದ್ಯಾರ್ಥಿಗಳು, ಸಾರ್ವಜನಿಕರು, ವಿವಿಧ ಸಂಘ-ಸAಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಎಲ್ಲರೂ ಪಾಲ್ಗೊಳ್ಳಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್ ಅವರು ತಿಳಿಸಿದ್ದಾರೆ. ಗೂಗಲ್ ಫಾರ್ಮ್ : hಣಣಠಿs://ಜoಛಿs. googಟe. ಛಿom/ ಜಿoಡಿms/ಜ/e/೧ಈಂIಠಿಕಿಐSತಿಒತಿಃb೪x೨ ಕಿqಛಿಈI೮ಖಿ೨ g೬bಠಿg ೧ o_ಡಿoಟbeಙ೪ಠಿuಜಿ೫ಚಿ೮WIq೦ಆIಜಿqಜಿಒಕಿ/vieತಿಜಿoಡಿm? usಠಿ=sಜಿ_ಟiಟಿಞ ತಾ.೨೧ ರಂದು ಮಡಿಕೇರಿಗೆ ಜಾಥಾ: ಜಿಲ್ಲಾಡಳಿತದ ವತಿಯಿಂದ ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿರುವ ‘ಸಂವಿಧಾನ ಜಾಗೃತಿ ಜಾಥಾ’ ಫೆಬ್ರವರಿ ೨೧ ರಂದು ಮಡಿಕೇರಿಗೆ ಆಗಮಿಸಲಿದೆ. ಜಾಥಾದಲ್ಲಿ ಭಾಗಿಯಾಗಿರುವ ಸ್ತಬ್ಧಚಿತ್ರಕ್ಕೆ ಸ್ವಾಗತ ಕೋರಿ, ಕಾವೇರಿ ಕಲಾಕ್ಷೇತ್ರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ನಗರಸಭೆ ಪೌರಾಯುಕ್ತರಾದ ವಿಜಯ್ ಅವರು ತಿಳಿಸಿದ್ದಾರೆ.