ಸಿದ್ದಾಪುರ, ಫೆ. ೧೯ : ಬಿಜೆಪಿ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಜಿಲ್ಲೆಯ ಕಾಫಿ ಬೆಳೆಗಾರರ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ಪ್ರಕರಣ ದಾಖಲಿಸುವ ಷಡ್ಯಂತರ ಕಾಂಗ್ರೆಸ್ ಸರ್ಕಾರದಿಂದ ನಡೆಯುತ್ತಿದ್ದು ಇದಕ್ಕೆ ಭಾಜಪ ತಕ್ಕ ಉತ್ತರ ನೀಡಲಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ ಕೆ ಲೋಕೇಶ್ ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದಾಪುರದ ಎಸ್ ಎನ್ ಡಿ ಪಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಒಂದು ವಾರದಲ್ಲಿ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಕುಟ್ಟ, ಪೊನ್ನಂಪೇಟೆ, ಪಾಲಿಬೆಟ್ಟ ವ್ಯಾಪ್ತಿಯ ಕಾಫಿ ಬೆಳೆಗಾರರ ಮೇಲೆ ಜೀತ ಪದ್ಧತಿ ನಡೆಸುತ್ತಿದ್ದಾರೆ ಎಂಬ ಸುಳ್ಳು ಆರೋಪಗಳನ್ನು ಮಾಡಿ ಪ್ರಕರಣ ದಾಖಲಿಸುವ ಕೆಲಸದಲ್ಲಿ ಸರಕಾರ ತೊಡಗಿದೆ. ಕಾಂಗ್ರೆಸ್ ಸರಕಾರ ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ಅಧಿಕಾರ ದುರುಪಯೋಗ ಮಾಡುತ್ತಿದೆ. ಕಾಂಗ್ರೆಸ್ ಸರಕಾರದ ಪಿತೂರಿಗೆ ಪೊಲೀಸ್ ಇಲಾಖೆ ಒಳಗಾಗದೆ, ಸೂಕ್ತ ತನಿಖೆ ನಡೆಸಿ ಪ್ರಕರಣ ದಾಖಲಿಸಬೇಕು, ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷದ ಬೆಂಬಲದೊAದಿಗೆ ಜಿಲ್ಲೆಯ ನೊಂದ ಕಾಫಿ ಬೆಳೆಗಾರರು ಪೊಲೀಸ್ ಇಲಾಖೆ ವಿರುದ್ಧ ಪ್ರತಿಭಟನೆಗೆ ಮುಂದಾಗಲಿದೆ ಎಂದು ಎಚ್ಚರಿಕೆ ನೀಡಿದರು.

ವನ್ಯಜೀವಿ ಉತ್ಪನ್ನಗಳನ್ನು ಏಪ್ರಿಲ್ ೯ ರ ಒಳಗೆ ಅರಣ್ಯ ಇಲಾಖೆಗೆ ಹಿಂತಿರುಗಿಸಬೇಕೆAಬ ಆದೇಶ ನೀಡಿರುವುದು ಕೊಡಗಿನ ಸಂಸ್ಕೃತಿಯನ್ನು ನಾಶಮಾಡುವ ಷಡ್ಯಂತರವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ತಮ್ಮದೇ ಸರಕಾರ ನೀಡಿದ ಆದೇಶವನ್ನು ಹಿಂಪಡೆಯುವAತೆ ಮನವಿ ಮಾಡಬೇಕಾದ ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಒಂದೆಡೆ ವನ್ಯ ಜೀವಿ ಉತ್ಪನ್ನಗಳ ಹಿಂತಿರುಗಿಸುವಿಕೆ ಕುರಿತು ರಾಜ್ಯ ಸರಕಾರದ ಆದೇಶವನ್ನು ಜನಪರ ಎಂದು ಹೇಳುತ್ತಾರೆ. ಮತ್ತೊಂದೆಡೆ ಈ ಕುರಿತು ನ್ಯಾಯಾಲಯದ ಮೊರೆ ಹೋಗಿ ಸರಿಪಡಿಸಲಾಗುವುದು ಎಂಬ ಗೊಂದಲದ ಹೇಳಿಕೆಗಳನ್ನು ನೀಡುವ ಮೂಲಕ ಕೊಡಗಿನ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ಸಿದ್ದಾಪುರ ಗ್ರಾ.ಪಂ ಮಾಜಿ ಅಧ್ಯಕ್ಷೆ ರೀನಾ ತುಳಸಿ, ಸದಸ್ಯರಾದ ಆನಂದ, ಬಿಜೆಪಿ ಪಕ್ಷದ ಮುಖಂಡ ಅನಿಲ್ ಶೆಟ್ಟಿ ಹಾಜರಿದ್ದರು.