ಚೆಯ್ಯಂಡಾಣೆ, ಫೆ. ೧೯: ನರಿಯಂದಡ ಗ್ರಾಮದಲ್ಲಿ ಕಾಡಾನೆ ದಾಳಿ ಮರುಕಳಿಸಿದ್ದು, ಬೆಳೆ ನಾಶವಾಗಿದೆ.

ಪೊಕ್ಕುಳಂಡ್ರ, ಮಂಞಪುರ, ತೋಟಂಬೈಲು, ಮಕ್ಕಿಮನೆ ಕುಟುಂಬಸ್ಥರ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆ ಕಾಫಿ, ಬಾಳೆ ಮತ್ತಿತರ ಗಿಡಗಳನ್ನು ತುಳಿದು ನಾಶ ಪಡಿಸಿದೆ. ಮಂಞಪುರ ರಕ್ಷಿತ್ ಎಂಬವರ ಕಾಫಿ ಕೊಯ್ದು ಚೀಲದಲ್ಲಿ ತುಂಬಿಸಿಟ್ಟಿದ್ದ ಚೀಲವನ್ನೇ ತುಳಿದು ನಾಶಪಡಿಸಿದೆ.

ಕಾಫಿ ಬೀಜವನ್ನು ಕೂಡ ಕಾಡಾನೆ ತಿನ್ನುತ್ತಿದೆ. ಈ ಭಾಗದಲ್ಲಿ ನಿರಂತರ ಕಾಡಾನೆ ಹಾವಳಿ ವಿತಿಮೀರಿದ್ದು ಕಾಫಿ ಕುಯ್ಯುವ ಸಮಯ ಹಾಗೂ ತೋಟಕ್ಕೆ ನೀರು ಹಾಯಿಸುವ ಸಮಯ ಕಾರ್ಮಿಕರು ತೋಟಕ್ಕೆ ತೆರಳಲು ಹಿಂದೇಟು ಹಾಕ್ಕುತ್ತಿದ್ದಾರೆ. ಕೂಡಲೇ ಸಂಬAಧಪಟ್ಟ ಅರಣ್ಯ ಇಲಾಖೆ ಕಾಡಾನೆ ತೋಟಕ್ಕೆ ನುಸುಳದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.