ಮಡಿಕೇರಿ, ಫೆ. ೧೯: ಕಾವೇರಿ ತವರು ಕೊಡಗು ಜಿಲ್ಲೆಯಲ್ಲಿ ಬೇಸಿಗೆ ಕಾಲ ಆರಂಭಕ್ಕೂ ಮುನ್ನವೇ ಜಲಕ್ಷಾಮ ಸೃಷ್ಟಿಯಾದ ಪರಿಣಾಮ ನೀರಿಗಾಗಿ ಹಾಹಾಕಾರ ಸೃಷ್ಟಿಯಾಗಿದೆ. ಕುಡಿಯಲು ಹಾಗೂ ನಿತ್ಯ ಬಳಕೆಗೆ ನೀರು ದೊರೆಯದೆ ಸ್ಥಳೀಯ ಆಡಳಿತ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದೆ. ಪ್ರಮುಖ ನದಿ, ತೊರೆಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಇಳಿಕೆಯಾಗಿದ್ದು, ಈ ಪರಿಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮ ಬೀರುವ ಆತಂಕ ಸೃಷ್ಟಿಯಾಗಿದೆ.

ಸಿದ್ದಾಪುರ: ಕಾಡಂಚಿನಲ್ಲಿ ಮೂಲಸೌಕರ್ಯ ವಂಚಿತರಾಗಿ ಜೀವನ ನಡೆಸುತ್ತಿರುವ ಅರಣ್ಯವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ದಾಹ ನೀಗಿಸಲು ತೋಡು ನೀರನ್ನು ಹುಡುಕಿ ಕುಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ವೀರಾಜಪೇಟೆ ತಾಲೂಕಿನ ಬಹುತೇಕ ಹಾಡಿಗಳಲ್ಲಿ ನೀರಿನ ಸಮಸ್ಯೆ ಇದ್ದರೂ ಶಾಶ್ವತ ಯೋಜನೆ ರೂಪಿಸದೆ ನಿರ್ಲಕ್ಷಿಸುತ್ತಿರುವ ಪರಿಣಾಮವೇ ಆದಿವಾಸಿಗಳು ಕಲುಷಿತ ತೋಡು ನೀರನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಬೇಸಿಗೆ ಪ್ರಾರಂಭವಾಗುತ್ತಿದ್ದAತೆ ಕಾವೇರಿ ತವರಿನಲ್ಲಿ ಕುಡಿಯುವ ನೀರಿಗೆ ಬರ ಎದುರಾಗಿದ್ದು ವೀರಾಜಪೇಟೆ ತಾಲೂಕಿನ ಬಹುತೇಕ ಗಿರಿಜನ ಹಾಡಿಗಳಲ್ಲಿ ಜೀವ ಜಲಕ್ಕೆ ಹಾಹಾಕಾರ ಎದುರಾಗಿದೆ. ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಶಾಶ್ವತ ಯೋಜನೆ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ.

ವೀರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ

(ಮೊದಲ ಪುಟದಿಂದ) ಆಸ್ಥಾನ ಹಾಡಿಯಲ್ಲಿ ಹಲವು ವರ್ಷಗಳಿಂದ ಶಾಶ್ವತ ಕುಡಿಯುವ ನೀರಿನ ಯೋಜನೆ ವ್ಯವಸ್ಥೆ ಇಲ್ಲದೆ ಇಲ್ಲಿನ ನಿವಾಸಿಗಳು ಬೇಸಿಗೆ ಸಂದರ್ಭದಲ್ಲಿ ಕೆರೆ, ತೋಡು ನೀರನ್ನು ಅವಲಂಬಿಸುವAತಾಗಿದೆ. ಕಳೆದ ಹಲವು ವರ್ಷಗಳಿಂದ ನೀರಿಗಾಗಿ ಕಿಲೋಮೀಟರ್‌ಗಟ್ಟಲೇ ಸಂಚರಿಸಬೇಕಾದ ಸ್ಥಿತಿ ಈ ಹಾಡಿಯ ನಿವಾಸಿಗಳದ್ದು.

ಆಸ್ಥಾನ ಹಾಡಿಯಲ್ಲಿ ಒಟ್ಟು ೨೯ ಕುಟುಂಬಗಳು ವಾಸಿಸುತ್ತಿವೆ. ಇದರಲ್ಲಿ ೨೦ ಕುಟುಂಬಗಳು ಪರಿಶಿಷ್ಟ ಪಂಗಡದವರಾಗಿದ್ದಾರೆ. ಉಳಿದ ೯ ಕುಟುಂಬಗಳು ಇತರ ಜನಾಂಗಕ್ಕೆ ಸೇರಿದವರು. ಇಲ್ಲಿ ನೂರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಬಹುತೇಕ ಕುಟುಂಬಗಳು ಕೂಲಿ ಕಾರ್ಮಿಕರೇ ಆಗಿದ್ದಾರೆ. ಈ ಹಾಡಿಗೆ ಇದುವರೆಗೂ ಶಾಶ್ವತ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸುವಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

ಇಂದಿಗೂ ಇಲ್ಲಿನ ನಿವಾಸಿಗಳು ಅರಣ್ಯದಂಚಿನಲ್ಲಿ ಹರಿಯುವ ತೋಡು ಹಾಗೂ ಹಳೆಯ ಬಾವಿ, ಕೆರೆ ನೀರನ್ನು ಅವಲಂಬಿಸಿದ್ದಾರೆ. ಇಲ್ಲಿನ ಬಹುತೇಕ ಮಹಿಳೆಯರಿಗೆ ಕಾಡಿನ ದಾರಿಯಲ್ಲಿ ದೂರದ ಬಾವಿಯಿಂದ ನಿತ್ಯ ನೀರು ಹೊತ್ತುಕೊಂಡು ಬರಬೇಕಾದ ಸಂಕಷ್ಟ ಎದುರಾಗಿದೆ.

ಕಳೆದ ಹಲವು ವರ್ಷಗಳ ಹಿಂದೆ ಹಾಡಿಯ ನಿವಾಸಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ೨೦೧೬-೧೭ನೇ ಸಾಲಿನ ೧೪ನೇ ಹಣಕಾಸು ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯಿತಿಯಿAದ ೫೦ ಸಾವಿರ ರೂ. ಅಂದಾಜು ವೆಚ್ಚದಲ್ಲಿ ಕುಡಿಯುವ ನೀರಿಗಾಗಿ ಟ್ಯಾಂಕ್ ನಿರ್ಮಾಣ ಮಾಡಿ ಮಾಲ್ದಾರೆ ಶಾಲೆಯ ಬೋರ್‌ನಿಂದ ೬ ಮನೆಗಳಿಗೆ ಮಾತ್ರ ನೀರಿನ ವ್ಯವಸ್ಥೆ ಕಲ್ಪಿಸಿಕೊಡಲಾಗಿತ್ತು. ಉಳಿದ ಮನೆಗಳಿಗೆ ನಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಲು ಅನುದಾನದ ಕೊರತೆಯಿಂದಾಗಿ

ಕರಿಕೆಯಲ್ಲಿ ಸಮಸ್ಯೆ

ಕರಿಕೆ: ಈ ಬಾರಿ ಬಿಸಿಲಿನ ತಾಪಮಾನ ಏರುತ್ತಿದ್ದು, ಜಿಲ್ಲೆಯ ಗಡಿ ಗ್ರಾಮ ಹಾಗೂ ಕರಾವಳಿ ತಪ್ಪಲಿನ ಕರಿಕೆಯಲ್ಲಿ ತಾಪಮಾನ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ನದಿ ಮೂಲಗಳು ಬತ್ತಲಾರಂಭಿಸಿವೆ. ಕರಿಕೆ ಹಾಗೂ ಕೇರಳದ ಜನತೆಯು ಕೃಷಿ ಹಾಗೂ ಕುಡಿಯಲು ಅವಲಂಭಿತವಾಗಿರುವ ಚಂದ್ರಗಿರಿ ನದಿಯಲ್ಲಿ ಎರಡು ತಿಂಗಳ ಮೊದಲೆ ನೀರಿನ ಮೂಲ ಬರಿದಾಗಿ ಬಂಡೆಕಲ್ಲುಗಳು ಗೋಚರಿಸುತ್ತಿವೆ.

(ಮೊದಲ ಪುಟದಿಂದ) ತಲಕಾವೇರಿ ಅಭಯಾರಣ್ಯ ಅಂಚಿನ ನದಿ ತೊರೆಗಳು ನೀರಿಲ್ಲದೆ ಖಾಲಿಯಾಗಿದೆ. ಇದರಿಂದಾಗಿ ವನ್ಯ ಪ್ರಾಣಿಗಳು ನೀರನ್ನರಸಿ ನಾಡಿಗೆ ಲಗ್ಗೆ ಇಡುವ ಸಾಧ್ಯತೆ ಇದೆ. ಬಿರುಬಿಸಿಲಿನ ವಾತಾವರಣ ಇದೇ ರೀತಿ ಮುಂದುವರಿದಲ್ಲಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗುವ ಆತಂಕ ಸೃಷ್ಟಿಯಾಗಿದೆ. -ಸುಧೀರ್ ಹೊದ್ದೆಟ್ಟಿ

ನೀರಿನ ಮಟ್ಟ ಗಣನೀಯ ಇಳಿಕೆ

ಕೂಡಿಗೆ: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಳುವಾರ, ಮತ್ತು ಸಿದ್ದಲಿಂಗಪುರ ಗ್ರಾಮಗಳಲ್ಲಿ ಅಂತರ್ಜಲದ ಮಟ್ಟ ಕುಸಿತದಿಂದಾಗಿ ನೀರಿನ ಮಟ್ಟ ಕುಸಿತ ಕಂಡಿವೆ.

ಈ ವ್ಯಾಪ್ತಿಯು ಆರೆ ಮಲೆನಾಡು ಪ್ರದೇಶವಾಗಿದ್ದು, ಈ ಭಾಗದ ರೈತರು ಮಳೆಯನ್ನೇ ನಂಬಿ ಬೇಸಾಯ ಮಾಡುತ್ತಾರೆ. ಆದರೆ ಕಳೆದ ಸಾಲಿನಲ್ಲಿ ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ

(ಮೊದಲ ಪುಟದಿಂದ) ಭೂಮಿಯ ತೇವಾಂಶ ಒಣಗಿದ ಪರಿಣಾಮವಾಗಿ ಈ ಸಾಲಿನಲ್ಲಿ ಕುಡಿಯುವ ನೀರಿಗೆ ಮತ್ತು ರೈತರ ಬೇಸಾಯಕ್ಕೂ ನೀರಿನ ಕೊರತೆ ಉಂಟಾಗಿದೆ. ಈಗಾಗಲೇ ಅನೇಕ ರೈತರು ವಾಣಿಜ್ಯ ಬೆಳೆಗಳ ಬೇಸಾಯಕ್ಕೆ ಕೊಳವೆ ಬಾವಿಯನ್ನು ಕೊರೆಸಿಕೊಂಡಿದರೂ ಸಹ ಅಂತರ್ಜಲ ಕುಸಿತದಿಂದಾಗಿ, ಬೇಸಾಯಕ್ಕೆ ನೀರಿಗಾಗಿ ಪರದಾಡುವಂತ ಪ್ರಸಂಗ ಎದುರಾಗಿದೆ. ಕುಡಿಯುವ ನೀರಿನ ವ್ಯವಸ್ಥೆಗೆ ಗ್ರಾಮ ಪಂಚಾಯಿತಿ ವತಿಯಿಂದ ಟ್ಯಾಂಕರ್‌ಗಳ ಮೂಲಕ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗುತ್ತಿದೆ, ಅಲ್ಲದೆ ನೂತನವಾಗಿ ಈ ಎರಡು ಗ್ರಾಮಗಳಲ್ಲಿ ಕೊಳವೆ ಬಾವಿಯನ್ನು ಕೊರೆಸಲು ತಾಲೂಕು ಕುಡಿಯುವ ನೀರು ಸರಬರಾಜು ಇಲಾಖೆಯ ಇಂಜಿನಿಯರ್ ತಂಡ ಸ್ಥಳಕ್ಕೆ ಭೇಟಿ ನೀಡಿ ಹೊಸ ಕೊಳವೆ ಬಾವಿಯನ್ನು ಕೊರೆಸಲು ಮುಂದಾಗಿದ್ದಾರೆ. ಅಲ್ಲದೆ ಈ ವ್ಯಾಪ್ತಿಯ ಕೆರೆಕಟ್ಟೆಗಳು ಬತ್ತುತ್ತಿರುವ ದೃಶ್ಯ ಕಂಡುಬರುತ್ತಿದೆ.