ಮಡಿಕೇರಿ, ಫೆ. ೧೯ : ಬಹಳ ವರ್ಷಗಳಿಂದ ದುರಸ್ತಿಗೊಳಗಾಗಿದ್ದ ಅಪ್ಪಂಗಳ-ಜ್ಯೋತಿ ಕಾಲೋನಿ-ಅರವತ್ತೋಕ್ಲು ರಸ್ತೆ ದುರಸ್ತಿಗೆ ಸಂಬAಧಿಸಿ ದಂತೆ ಗ್ರಾಮಸ್ಥರ ಮನವಿಗೆ ರಾಜ್ಯ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಸ್ಪಂದಿಸಿದ್ದಾರೆ.

ಅಪ್ಪAಗಳದ ಸಾಂಬಾರ ಮಂಡಳಿ ಕಚೇರಿಯಿಂದ ಜ್ಯೋತಿ ಕಾಲೋನಿಗಾಗಿ ಅರವತ್ತೋಕ್ಲು ಗ್ರಾಮಕ್ಕೆ ತೆರಳುವ ೧.೫೦ ಕಿ.ಮೀ. ಅಂತರದ ರಸ್ತೆ ೨೫ ವರ್ಷಗಳಿಂದ ಹಾಳಾಗಿದೆ. ಇದರಿಂದಾಗಿ ಈ ವ್ಯಾಪ್ತಿಯ ಗ್ರಾಮಸ್ಥರು, ವಿದ್ಯಾರ್ಥಿಗಳು, ವಯೋವೃದ್ಧರು, ರೋಗಿಗಳಿಗೆ ಸಾಕಷ್ಟು ಸಮಸ್ಯೆಯಾಗಿತ್ತು. ಪರಿಶಿಷ್ಟ ಜಾತಿ ಮತ್ತು ಪಂಗಡದವರ ಜ್ಯೋತಿ ಕಾಲೋನಿಗಾಗಿ ಸಾಗುವ ರಸ್ತೆ ಹಾಳಾಗಿ ನೂರಾರು ಮಂದಿಗೆ ಸಮಸ್ಯೆಯಾಗಿತ್ತು. ಈ ನಿಟ್ಟಿನಲ್ಲಿ ಗ್ರಾಮಸ್ಥರಾದ ವಾಯುಪಡೆಯ ನಿವೃತ್ತ ಅಧಿಕಾರಿ ಮುಂಜಾAದೀರ ಅಪ್ಪಯ್ಯ ರಾಜಾ ಅವರು ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ಕೊಡಗಿನ ಶಾಸಕರಾದ ಎ.ಎಸ್. ಪೊನ್ನಣ್ಣ, ಡಾ.ಮಂಥರ್ ಗೌಡ ಸಹಕಾರದಲ್ಲಿ ಭೇಟಿಯಾಗಿ ರಸ್ತೆ ದುರಸ್ಥಿಗೆ ಮನವಿ ಸಲ್ಲಿಸಿದರು. ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸುವ ಮೂಲಕ ಸರ್ವಋತು ರಸ್ತೆಯನ್ನು ನೀಡುವಂತೆ ಕೋರಿದರು.

ಈ ಸಂದರ್ಭ ಗ್ರಾಮೀಣ ಭಾಗದ ಈ ರಸ್ತೆಯನ್ನು ಕೂಡಲೇ ದುರಸ್ತಿಪಡಿಸಲು ಕ್ರಮಕೈಗೊಳ್ಳುವುದಾಗಿ ಸಚಿವ ಪ್ರಿಯಾಂಕ ಖರ್ಗೆ ಭರವಸೆ ನೀಡಿದರು ಎಂದು ಅಪ್ಪಯ್ಯ ರಾಜಾ ಮಾಹಿತಿ ನೀಡಿದ್ದಾರೆ. ಈ ಸಂದರ್ಭ ಬಿದ್ದಾಟಂಡ ಕಾವೇರಪ್ಪ ಹಾಜರಿದ್ದರು.