ಮಡಿಕೇರಿ, ಫೆ. ೧೯: ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ೨೦೨೩-೨೪ನೇ ಸಾಲಿನ ಜಿಲ್ಲಾ ಮಟ್ಟದ ನೋಂದಾಯಿತ ಕ್ಲಬ್ ನಡುವಿನ ಲೀಗ್ ಫುಟ್ಬಾಲ್ ಪಂದ್ಯವಾಳಿಯು ಮಾರ್ಚ್ ೨೬ ರಿಂದ ೩೧ರವರೆಗೆ ಅಮ್ಮತ್ತಿಯ ಫ್ರೌಡಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಪಂದಿಕAಡ ನಾಗೇಶ್ ತಿಳಿಸಿದ್ದಾರೆ.

ಈ ಬಾರಿಯ ೧೬ ತಂಡಗಳ ನಡುವೆ ಲೀಗ್ ಪಂದ್ಯಾವಳಿ ನಡೆಯಲಿದ್ದು, ಸಿ.ಆರ್.ಎಸ್ ನಲ್ಲಿ ಆಟಗಾರರನ್ನು ನೋಂದಾಯಿಸಿದ ತಂಡಗಳಿಗೆ ಮಾತ್ರ ಲೀಗ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.