ಸೋಮವಾರಪೇಟೆ, ಫೆ. ೧೯: ತಾಲೂಕಿನ ನೀರುಗುಂದ ಗ್ರಾಮದಲ್ಲಿ ಕಾಫಿ ಮಂಡಳಿ ಸಂಶೋಧನೆ ಮತ್ತು ವಿಸ್ತರಣಾ ಇಲಾಖೆಗಳ ಜಂಟಿ ಆಶ್ರಯದಲ್ಲಿ ಮಣ್ಣು ಪರೀಕ್ಷೆ ಕಾರ್ಯಕ್ರಮ ನಡೆಯಿತು.

ಚೆಟ್ಟಳ್ಳಿಯ ಕಾಫಿ ಸಂಶೋಧನಾ ಕೇಂದ್ರದ ಮಣ್ಣು ವಿಜ್ಞಾನಿ ಡಾ. ಎಸ್.ಎ. ನದಾಫ್ ಅವರು ಕಾಫಿ ಬೆಳೆಗಾರರಿಗೆ ಮಣ್ಣಿನ ಪರೀಕ್ಷೆಯ ಮಹತ್ವದ ಕುರಿತು ತಿಳಿಸಿದರು. ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಂಡು ಹೆಚ್ಚಿನ ಇಳುವರಿ ಗಳಿಸುವ ಬಗ್ಗೆ ಮಾಹಿತಿ ನೀಡಿದರು.

ಸೋಮವಾರಪೇಟೆಯ ಕಿರಿಯ ಸಂಪರ್ಕಾಧಿಕಾರಿ ಬಿ.ವಿ. ರಂಜಿತ್ ಕುಮಾರ್ ಕಾಫಿಯಲ್ಲಿನ ಕೀಟ ನಿರ್ವಹಣೆಯ ಬಗ್ಗೆ ಬೆಳೆಗಾರರಿಗೆ ಮಾರ್ಗದರ್ಶನ ನೀಡಿದರು. ನೀರುಗುಂದ ಗ್ರಾಮದ ಪ್ರಗತಿಪರ ಕೃಷಿಕ ರಾಜೇಂದ್ರ ಸೇರಿದಂತೆ ೫೦ಕ್ಕೂ ಅಧಿಕ ಬೆಳೆಗಾರರು ಸ್ಥಳದಲ್ಲೇ ಮಣ್ಣು ಪರೀಕ್ಷಾ ಕಾರ್ಯಕ್ರಮದ ಪ್ರಯೋಜನ ಪಡೆದರು. ಕಾಫಿ ತೋಟದ ಮಣ್ಣು ಮತ್ತು ನೀರಿನ ಮಾದರಿಗಳನ್ನು ಪರೀಕ್ಷಿಸಿಕೊಂಡರು. ಈ ಸಂದರ್ಭ ಕಾಫಿ ಮಂಡಳಿಯ ಲಕ್ಷಿö್ಮÃಕಾಂತ್, ಸುಚಿತ್ರಾ, ಪ್ರದೀಪ್ ಉಪಸ್ಥಿತರಿದ್ದರು.