ಗೋಣಿಕೊಪ್ಪಲು, ಫೆ. ೧೯: ಸಂವಿಧಾನ ಜಾಗೃತಿ ಜಾಥಾವು ಮಾಯಮುಡಿಗೆ ಆಗಮಿಸಿತು. ಗ್ರಾ.ಪಂ. ಕಚೇರಿಯ ಮುಂದೆ ನೆರೆದಿದ್ದ ಸಾರ್ವಜನಿಕರು, ಸಂಘ ಸಂಸ್ಥೆಯ ಪ್ರಮುಖರು, ಶಾಲಾ ವಿದ್ಯಾರ್ಥಿಗಳು ಹಾಗೂ ಮಾಯಮುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಶಿಕ್ಷಕವೃಂದ ಮತ್ತು ಪಿಡಿಒ ಸಿಬ್ಬಂದಿ ವರ್ಗ ಜಾಥಾವನ್ನು ಬರಮಾಡಿಕೊಂಡರು.

ಮಾಯಮುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಪಟ್ಟಿರ ಟಾಟು ಮೊಣ್ಣಪ್ಪ, ಉಪಾಧ್ಯಕ್ಷೆ ಶಾಂತ ಪಿ.ಎಸ್.ಪಿ. ಡಿಒ ರವಿ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಪ್ರೀತಿ ಚಿಕ್ಕಮಾದಯ್ಯ, ನೋಡಲ್ ಅಧಿಕಾರಿ ನವೀನ್ ಸೇರಿದಂತೆ ಪಂಚಾಯಿತಿ ಸದಸ್ಯರು ಬಲೂನ್ ಹಾರಿ ಬಿಡುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ಶಾಲಾ ವಿದ್ಯಾರ್ಥಿಗಳ ಬ್ಯಾಂಡ್‌ಸೆಟ್ ಹಾಗೂ ನಾಗರಹೊಳೆ ಜೇನು ಕುರುಬರ ಜಾನಪದ ನೃತ್ಯಗಳು ಗಮನ ಸೆಳೆದವು. ಮೆರವಣಿಗೆಯ ಮುಂಭಾಗದಲ್ಲಿ ಬೈಕ್‌ಗಳಲ್ಲಿ ಬಾವುಟಗಳನ್ನು ಹಿಡಿದ ಯುವಕ ಯುವತಿಯರು ಬೈಕ್ ಜಾಥಾದೊಂದಿಗೆ ಆಗಮಿಸಿದರು. ನಂತರ ಪಂಚಾಯಿತಿ ಮುಂಭಾಗ ಸಂವಿಧಾನದ ಕುರಿತು ಕಿರು ಚಿತ್ರ ಪ್ರದರ್ಶನ ಮಾಡಲಾಯಿತು.

ಕರ್ನಾಟಕ ಸರ್ಕಾರ ಕೊಡಗು ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಜಂಟಿ ಆಶ್ರಯದಲ್ಲಿ ಸ್ಥಳೀಯ ಮಹಿಳಾ ಸಮಾಜ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಗ್ರಾ.ಪಂ. ಅಧ್ಯಕ್ಷ ಆಪಟ್ಟಿರ ಟಾಟು ಮೊಣ್ಣಪ್ಪ ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ, ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಸಂವಿಧಾನದ ಬಗ್ಗೆ ಹಮ್ಮಿಕೊಳ್ಳಲಾಗಿದ್ದ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದರು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಪ್ರೀತಿ ಚಿಕ್ಕಮಾದು ಪ್ರಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದ ಮಾಯಮುಡಿ ಪ್ರೌಢಶಾಲೆಯ ಶಿಕ್ಷಕ ಮಹೇಶ್ ಪಿಳ್ಳೆ ಅಂಬೇಡ್ಕರ್ ಸಾಧನೆಯ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಗಿರಿಜನ ತಾಲೂಕು ಕಲ್ಯಾಣಾಧಿಕಾರಿ, ನೋಡಲ್ ಅಧಿಕಾರಿಗಳಾದ ನವೀನ್ ಗ್ರಾ.ಪಂ. ಉಪಾಧ್ಯಕ್ಷರಾದ ಶಾಂತ ಪಿ.ಎಸ್. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ರಾಗಿಣಿ, ಸವಿತ ಕುಮಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ರವಿ, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಗಳಾದ ನವೀನ್, ಸ್ವಪ್ನ, ಪದ್ಮಶ್ರೀ,ನಾಣಯ್ಯ,ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಸುಶೀಲ ಹೆಚ್.ಆರ್. ಸರಸ್ವತಿ.ಪಿ.ಯು. ನಾಚಯ್ಯ, ಎ.ಎಸ್.ಸುಮಿತ್ರ ಕೆ.ವಿ. ನಾರಾಯಣ ಪಿ.ಸಿ.ಸಿದ್ದಪ್ಪ,ಸುಮಿತ್ರ ಕೆ.ಕೆ, ಮೀನಾ ಎಂ.ಪಿ.ನಾಜೀರ, ಶಭರೀಶ್, ವಿನೋದ್ ಕುಮಾರ್, ಸಿ.ಕೆ.ಪೂವಯ್ಯ, ಮುತ್ತಪ್ಪ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಸಂವಿಧಾನ ಪೀಠಿಕೆಯನ್ನು ಶಿಕ್ಷಕಿ ಎಂ.ಟಿ. ಸುಮ ಓದಿದರು. ಗ್ರಾಮ ಪಂಚಾಯಿತಿ ಪಿಡಿಒ ರವಿ ಸ್ವಾಗತಿಸಿ, ಸಹ ಶಿಕ್ಷಕಿ ಸಹನಾ ನಿರೂಪಿಸಿ, ವಂದಿಸಿದರು.