ಮಡಿಕೇರಿ, ಫೆ. ೨೦: ರಾಮನಗರದಲ್ಲಿ ವಕೀಲರ ಮೇಲೆ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿದ ಮಡಿಕೇರಿ ವಕೀಲರ ಸಂಘ ನ್ಯಾಯಾಲಯ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಕ್ಷುಲ್ಲಕ ವಿಚಾರಕ್ಕೆ ಸಂಬA ಧಿಸಿದಂತೆ ರಾಮನಗರದಲ್ಲಿ ನಡೆದ ಪ್ರಕರಣ ಹಿನ್ನೆಲೆಯಲ್ಲಿ ೩೨ ವಕೀಲರ ಮೇಲೆ ರಾಮನಗರ ಪೊಲೀಸರು ಮೊಕ ದ್ದಮೆ ದಾಖಲಿಸಿರುವುದನ್ನು ರಾಜ್ಯ ವ್ಯಾಪಿ ವಕೀಲರು ಖಂಡಿಸಿದ್ದಾರೆ.

ರಾಮನಗರದ ವಕೀಲ ಸಮು ದಾಯಕ್ಕೆ ಬೆಂಬಲ ವ್ಯಕ್ತಪಡಿಸಿ, ಪೊಲೀಸರ ನಿಲವು ಖಂಡಿಸಿ ಮಡಿ ಕೇರಿ ವಕೀಲರ ಸಂಘವು ಕೂಡ ನಿರ್ಣಯ ಕೈಗೊಂಡಿದೆ.

ರಾಜ್ಯದ ವಕೀಲರ ಸಂಘಟನೆ ಗಳಿಂದ ನಡೆಯವ ವಿಧಾನಸೌಧ ಚಲೋ ಸಂದರ್ಭ ಮಡಿಕೇರಿ ವಕೀ ಲರ ಸಂಘದಿAದ ಕೂಡ ಸದಸ್ಯರು ತೆರಳಿದ್ದಾರೆ ಎಂದು ವಕೀಲರ ಸಂಘದ ಉಪಾಧ್ಯಕ್ಷ ಎಂ.ಪಿ. ನಾಗರಾಜ್ ಮಾಹಿತಿ ನೀಡಿದರು.

ವಕೀಲರ ವಿರುದ್ಧದ ಮೊಕದ್ದ ಮೆಯನ್ನು ಕೂಡಲೇ ಕೈಬಿಡಬೇಕು. ಪೊಲೀಸ್ ದೌರ್ಜನ್ಯಕ್ಕೆ ಕಡಿವಾಣ ಬೀಳಬೇಕೆಂದು ಒತ್ತಾಯಿಸಿದ್ದಾರೆ.

ಈ ಸಂದರ್ಭ ಕಾರ್ಯದರ್ಶಿ ಡಿ.ಎಂ. ಕೇಶವ, ಖಜಾಂಚಿ ರವಿ ಶಂಕರ್, ಜಂಟಿ ಕಾರ್ಯದರ್ಶಿ ಪವನ್ ಪೆಮ್ಮಯ್ಯ, ನಿರ್ದೇಶಕರಾದ ಕಪಿಲ್ ಕುಮಾರ್, ಚಂದ್ರಶೇಖರ್, ಡಾಮ್ನಿಕ್, ಪ್ರಿಯಾಂಕ, ಯಾಸಿನ್, ವಿಶಾಲಕ್ಷಿ, ಜಿತೇಂದ್ರ ಸೇರಿದಂತೆ ಇನ್ನಿತರರು ಹಾಜರಿದ್ದರು.