ಮಡಿಕೇರಿ, ಫೆ. ೨೦ : ಪಿ.ಎಂ. ಪೋಷಣ್ ಶಕ್ತಿ ನಿರ್ಮಾಣ್ ಕಾರ್ಯಕ್ರಮದಡಿ ೨೦೨೩-೨೪ ನೇ ಸಾಲಿನ ಮಾರ್ಚ್ ಮಾಹೆಯಲ್ಲಿ ೧೨ ದಿನಗಳಿಗೆ ೧-೧೦ ನೇ ತರಗತಿ ವಿದ್ಯಾರ್ಥಿಗಳಿಗೆ ‘ಸಾಯಿ ಶ್ಯೂರ್ ರಾಗಿ ಹೆಲ್ತ್ ಮಿಕ್ಸ್’ ವಿತರಣೆ ಮಾಡಿ ಚಾಲನೆಗೊಳಿಸುವ ಜಿಲ್ಲಾ ಹಾಗೂ ತಾಲೂಕು ಮಟ್ಟದ ಚಾಲನಾ ಕಾರ್ಯಕ್ರಮವು ತಾ. ೨೨ ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ ಎಂದು ಪಿಎಂ ಪೋಷಣ್ ಶಕ್ತಿ ನಿರ್ಮಾಣ್ ವಿಭಾಗದ ಶಿಕ್ಷಣಾಧಿಕಾರಿ ಶಶಿಕಲಾ ತಿಳಿಸಿದ್ದಾರೆ.