ಕೂಡಿಗೆ , ಫೆ. ೨೦: ಕಣಿವೆಯಲ್ಲಿರುವ ಹುಲುಸೆ ಹಾಲು ಉತ್ಪಾದಕರ ಸಹಕಾರ ಸಂಘದ ಡೈರಿಯಲ್ಲಿ ಹೊರ ಆವರಣದಲ್ಲಿ ಇಟ್ಟಿದ್ದ ಹಾಲಿನ ಕ್ಯಾನ್‌ಗಳನ್ನು ಕಳ್ಳತನ ಮಾಡಲಾಗಿದೆ.

ತಡರಾತ್ರಿಯಲ್ಲಿ ಡೈರಿ ಮುಂಭಾಗದಲ್ಲಿ ಇರಿಸಿದ್ದ ೪೦ ಲೀಟರ್ ಸಂಗ್ರಹ ಸಾಮರ್ಥ್ಯದ ೮ ಕ್ಯಾನ್‌ಗಳನ್ನು ವಾಹನಕ್ಕೆ ತುಂಬಿಸಿ ಕೊಂಡೊಯ್ದಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬAಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.