ಮಡಿಕೇರಿ, ಫೆ. ೨೦: ಹಾರಂಗಿಯಿAದ ಯಡವನಾಡು ಹುದುಗೂರು ನಾಲೆ ದುರಸ್ತಿಗೆ ಸಂಬAಧಿಸಿದAತೆ ೩೬೯ ಮರಗಳನ್ನು ಮಾತ್ರ ತೆರವು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ಸ್ಪಷ್ಟನೆ ನೀಡಿದೆ. ಈ ನಾಲೆ ದುರಸ್ತಿ ವಿಚಾರದಲ್ಲಿ ೪೮೦ ಮರಗಳನ್ನು ಅರಣ್ಯ ಇಲಾಖೆ ಹನನ ಮಾಡಿದೆ ಎಂಬುದಾಗಿ ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು. ಆದರೆ ಸಾರ್ವಜನಿಕವಾಗಿ ಆಕ್ಷೇಪಣೆಯನ್ನು ಆಹ್ವಾನಿಸಿ ನಿಯಾಮನುಸಾರ ಅಗತ್ಯವಾಗಿ ಬೇಕಿದ್ದ ೩೬೯ ಮರಗಳನ್ನು ಮಾತ್ರ ತೆರವು ಮಾಡಲು ಕ್ರಮ ಕೈಗೊಂಡಿರುವುದಾಗಿ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.