ಭಾಗಮಂಡಲ, ಮಾ. ೨೯: ಸಮೀಪದ ಅಯ್ಯಂಗೇರಿಯ ಶ್ರೀ ಕೃಷ್ಣ ಯುವಕ ಸಂಘದ ವತಿಯಿಂದ ಆಯೋಜಿಸಲಾಗಿದ್ದ ನಾಲ್ಕನೇ ವರ್ಷದ ಗೊಲ್ಲ ಜನಾಂಗದವರ ನಡುವಿನ ಕ್ರಿಕೆಟ್ ಕ್ರೀಡಾಕೂಟದಲ್ಲಿ ಶ್ರೀ ಕೃಷ್ಣ ಯೂತ್ ಕ್ಲಬ್ ಚಾಂಪಿಯನ್ ಪಟ್ಟ ಅಲಂಕರಿಸಿತು. ಭಾಗಮಂಡಲದ ಶ್ರೀ ಕಾವೇರಿ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದ್ದ ಪಂದ್ಯಾವಳಿ ಯಲ್ಲಿ ಅಂತಿಮ ಪಂದ್ಯದಲ್ಲಿ ಆತಿಥೇಯ ಶ್ರೀ ಕೃಷ್ಣ ಯೂತ್ ಕ್ಲಬ್ ತಂಡ ಹಾಗೂ ಎಲೈಟ್ ಬೇಂಗ್ನಾಡ್ ತಂಡ ಅಂತಿಮ ಸುತ್ತು ಪ್ರವೇಶಿಸಿತು. ಅಂತಿಮ ಪಂದ್ಯದಲ್ಲಿ ಶ್ರೀ ಕೃಷ್ಣ ಯೂತ್ ಕ್ಲಬ್ ಅಯ್ಯಂಗೇರಿ ತಂಡ ಜಯ ಗಳಿಸಿತು. ಎಲೈಟ್ ಬೆಂಗ್ ನಾಡು ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡಿತು.
ಪAದ್ಯಾವಳಿಯನ್ನು ಜನಾಂಗದ ಪ್ರಮುಖ ಆಚೀರ ಭೀಮಯ್ಯ ಉದ್ಘಾಟಿಸಿದರು .೧೦ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು. ಕ್ರಿಕೆಟ್ ಪಂದ್ಯದೊAದಿಗೆ ಜನಾಂಗದ ಪ್ರಾಥಮಿಕ ಶಾಲಾ ಮಕ್ಕಳಿಗೆ ಆಟೊಟ ಸ್ಪರ್ಧೆ, ಮಹಿಳೆಯರಿಗೆ ಮ್ಯಾಜಿಕ್ ಬಾಕ್ಸ್ ಹಾಗೂ ಪುರುಷರಿಗೆ ಹಗ್ಗ ಜಗ್ಗಾಟ ಆಯೋಜಿಸಲಾಗಿತ್ತು. ಸಮಾರೋಪ ಸಮಾರಂಭದಲ್ಲಿ ಆಚೀರ ಭೀಮಯ್ಯ ಮಾತನಾಡಿ ಜನಾಂಗದ ಒಗ್ಗೂಡುವಿಕೆಗೆ ಕ್ರೀಡಾಕೂಟ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸ ಜೊತೆಗೆ ಒಳ್ಳೆಯ ಗುಣ ಮತ್ತು ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು. ತೊತ್ತಿಯಂಡ ಜೀವನ್ ಕುಮಾರ್ ಮಾತನಾಡಿ ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿ ಗಳು ಹಾಗೂ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲಾಗುವುದು ಎಂದರು. ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜನಾಂಗದ ಸಾಧಕರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬಿದ್ದಿಯಂಡ ಮಂಜು, ಪಳಂಗಪ್ಪ, ಚಿಂಗಡ ಪ್ರತಿನ್, ಬಿದ್ಧಿಯಂಡ ಗೀತಾ ಉದ್ದುಮಾಡಂಡ ಪ್ರತಿಶ್, ಅಯ್ಯಂಗೇರಿ ಶ್ರೀ ಕೃಷ್ಣ ದೇವಸ್ಥಾನದ ದೇವತಕ್ಕ ಬಿದ್ದಿಯಂಡ ಸುಭಾಷ್, ಕೊಡಗು ಜಿಲ್ಲಾ ಗೊಲ್ಲ ಸಮಾಜ ಸದಸ್ಯ ಚೋಕಿರ ಭೀಮಯ್ಯ, ಆಚೀರ ಲವ ಚಂಗಪ್ಪ, ಕಡವಡಿರ ಸಂತೋಷ್, ಬಿದ್ದಿಯಂಡ ಪಳಂಗಪ್ಪ, ಅರೆಯಂಡ ಕಾಳಪ್ಪ, ಬಿದ್ದಿಯಂಡ ಅಭಿಷೇಕ್, ಬಿದ್ದಿಯಂಡ ದೀಕ್ಷಿತ್ ಉಪಸ್ಥಿತರಿದ್ದರು.
-ಸುನಿಲ್