ಗೋಣಿಕೊಪ್ಪ ವರದಿ, ಮಾ. ೨೯: ಪೊನ್ನಂಪೇಟೆ ತಾಲೂಕು ಸವಿತಾ ಸಮಾಜ ವತಿಯಿಂದ ಸವಿತಾ ಸಮಾಜಕ್ಕೆ ಒಳಪಡುವವರಿಗೆ ಏಪ್ರಿಲ್ ೧ ಮತ್ತು ೨ ರಂದು ಹಾತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಸವಿತಾ ಸಮಾಜ ಸಲಹೆಗಾರ ಜಿಮ್ಮ ಸುಬ್ಬಯ್ಯ ತಿಳಿಸಿದ್ದಾರೆ.

ಪುರುಷರ ಕ್ರಿಕೆಟ್, ಮಹಿಳೆಯರಿಗೆ ಮತ್ತು ಪುರುಷರಿಗೆ ಹಗ್ಗಜಗ್ಗಾಟ, ಮಕ್ಕಳಿಗೆ ಕ್ರೀಡಾ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪಾಲ್ಗೊಳ್ಳುವ ಪ್ರತೀ ಆಟಗಾರರು ಕೊಡಗು ಜಿಲ್ಲೆಯಲ್ಲಿ ನೆಲೆಸಿರುವ ಬಗ್ಗೆ ದೃಢೀಕರಣ ಅವಶ್ಯ. ಇದರಿಂದಾಗಿ ಆಧಾರ್ ನಕಲಿ ಪ್ರತಿ ಕಡ್ಡಾಯಗೊಳಿಸಲಾಗಿದೆ ಎಂದರು. ಕ್ರಿಕೆಟ್ ಕ್ರೀಡೆಯಲ್ಲಿ ಸುಮಾರು ೧೨ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಬೆಸ್ಟ್ ಬೌಲರ್, ಬೆಸ್ಟ್ ಬ್ಯಾಟ್ಸ್ಮನ್, ಮ್ಯಾನ್ ಆಫ್ ದ ಸಿರೀಸ್ ಬಹುಮಾನ ಕೂಡ ನೀಡಲಾಗುವುದು ಎಂದರು.

ಪೊನ್ನAಪೇಟೆ ತಾಲೂಕು ಸವಿತಾ ಸಮಾಜ ಅಧ್ಯಕ್ಷ ಪೂಣಚ್ಚೀರ ಎಸ್. ಮನೋಜ್, ಜಿಲ್ಲಾ ಸಮಿತಿ ಉಪಾಧ್ಯಕ್ಷ ನಾಯಂದರ ಆರ್. ಶಿವಾಜಿ, ಪ್ರಧಾನ ಕಾರ್ಯದರ್ಶಿ ಹರೀಶ್, ಸಲಹೆಗಾರ ಸಿ.ಆರ್. ಬೇಬಿ ಇದ್ದರು.