ಕಣಿವೆ, ಮಾ. ೨೯: ತಾಲೂಕು ಯೋಗಿನಾರೇಯಣ ಬಲಿಜ ಸಂಘದ ವತಿಯಿಂದ ಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮವನ್ನು ಕುಶಾಲನಗರದಲ್ಲಿ ಆಚರಿಸಲಾಯಿತು.
ಈ ಸಂದರ್ಭ ಮಾತನಾಡಿದ ಸಂಘದ ಅಧ್ಯಕ್ಷ ಆರ್.ಬಾಬಣ್ಣ ಕುಶಾಲನಗರ ಹಾಗೂ ಸೋಮವಾರ ಪೇಟೆ ತಾಲೂಕಿನಲ್ಲಿ ೯೦೦ಕ್ಕೂ ಹೆಚ್ಚು ಬಲಿಜ ಕುಟುಂಬಗಳಿದ್ದು, ಪ್ರತೀ ವರ್ಷವೂ ಕುಲಗುರುಗಳ ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಸಂಘದ ಸದಸ್ಯರ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯ ನೆರವು ನೀಡುವುದರೊಂದಿಗೆ, ಸಮಾಜದ ಕಡುಬಡ ಕುಟುಂಬಗಳಿಗೆ ನೆರವು ನೀಡುವ ಕೆಲಸ ಸಮಾಜದಿಂದ ಆಗಬೇಕಿದೆ ಎಂದರು.
ಸAಘದ ಸದಸ್ಯರಾದ ಕವಿತಾ ದಯಾನಂದ್ ಮಾತನಾಡಿದರು. ಜಯಂತಿ ಅಂಗವಾಗಿ ಕೈವಾರ ತಾತಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಭಾವಚಿತ್ರಗಳನ್ನು ಸಂಘದ ಸದಸ್ಯ ಕುಟುಂಬಗಳಿಗೆ ವಿತರಿಸಲಾಯಿತು. ಸಂಘದ ಗೌರವಾಧ್ಯಕ್ಷ ಬಾಲು ದಯಾನಂದ, ಉಪಾಧ್ಯಕ್ಷ ಬೈಲಕುಪ್ಪೆ ಗಣೇಶ್ ಸ್ವಾಮಿ, ಕಾರ್ಯದರ್ಶಿ ನಿರಂಜನ್, ಖಜಾಂಚಿ ಸತೀಶ್, ನಿರ್ದೇಶಕರಾದ ಜಯರಾಂ, ಜಗದೀಶ್, ಕವಿತಾ, ಮದನ್, ಧರ್ಮಣ್ಣ, ಕಿರಣ್, ತುಳಸಿ ಮೊದಲಾದವರಿದ್ದರು. ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಿಗೆ ತಂಪು ಪಾನೀಯವನ್ನು ವಿತರಿಸಲಾಯಿತು.