ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಮತ್ತಿಬ್ಬರು ಶಂಕಿತರು ಎನ್‌ಐಎ ವಶಕ್ಕೆ

ಬೆಂಗಳೂರು, ಮಾ. ೨೮: ಉದ್ಯಾನನಗರಿ ಬೆಂಗಳೂರಿನ ಪ್ರಖ್ಯಾತ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬAಧಿಸಿದAತೆ ರಾಷ್ಟಿçÃಯ ತನಿಖಾ ಸಂಸ್ಥೆ (ಎನ್‌ಐಎ) ಗುರುವಾರ ಮತ್ತಿಬ್ಬರು ಶಂಕಿತರನ್ನು ಬಂಧಿಸಿದೆ. ಇಬ್ಬರು ಶಂಕಿತರು ಶಂಕಿತ ಬಾಂಬರ್‌ನೊAದಿಗೆ ನೇರ ಸಂಪರ್ಕದಲ್ಲಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಎನ್‌ಐಎ ಅಧಿಕಾರಿಗಳು ಶಂಕಿತರನ್ನು ರಾಜ್ಯ ರಾಜಧಾನಿಯ ಪ್ರದೇಶದಿಂದ ಕರೆದೊಯ್ದಿದ್ದಾರೆ. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬAಧಿಸಿ ನಿನ್ನೆ ಬುಧವಾರ ಹಲವೆಡೆ ದಾಳಿ ನಡೆಸಿ ಶೋಧ ನಡೆಸಿದ್ದ ಎನ್‌ಐಎ ಇಂದು ಕೂಡ ದಾಳಿ ಮುಂದುವರಿಸಿತು. ರಾಮೇಶ್ವರಂ ಕೆಫೆ ಸ್ಫೋಟ ಸಂಬAಧ ಎನ್‌ಐಎ ಅಧಿಕಾರಿಗಳು ನಿನ್ನೆ ಬೆಂಗಳೂರಿನ ಐದು ಕಡೆ, ಶಿವಮೊಗ್ಗ ಜಿಲ್ಲೆಯ ೧೫ ಸ್ಥಳಗಳಲ್ಲಿ ಹಾಗೂ ತಮಿಳುನಾಡಿನ ಚೆನ್ನೆöÊಯ ಆರು ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದರು. ಮಾರ್ಚ್ ೧ ರಂದು ಬ್ರೂಕ್ ಫೀಲ್ಡ್ ಪ್ರದೇಶದ ಇಂಟರ್ ನ್ಯಾಷನಲ್ ಟೆಕ್ನಾಲಜಿ ಪಾರ್ಕ್ ಲಿಮಿಟೆಡ್ ರಸ್ತೆಯಲ್ಲಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಸಂಭವಿಸಿತ್ತು. ಸ್ಫೋಟವನ್ನು ನಡೆಸಲು ಕಡಿಮೆ-ತೀವ್ರತೆಯ ಸುಧಾರಿತ ಸ್ಫೋಟಕ ಸಾಧನವನ್ನು ಬಳಸಲಾಗಿತ್ತು. ಘಟನೆಯಲ್ಲಿ ಒಂಬತ್ತು ಜನರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ.

ಸುಮಲತಾ ತಾಳ್ಮೆಯಿಂದಿದ್ದರೆ ಸೂಕ್ತ ಸ್ಥಾನಮಾನ : ಬಿ.ಎಸ್.ವೈ.

ಬೆಳಗಾವಿ, ಮಾ. ೨೮: ಮಂಡ್ಯದಿAದ ಕುಮಾರಸ್ವಾಮಿಗೆ ಟಿಕೆಟ್ ಸಿಕ್ಕ ಹಿನ್ನೆಲೆ ಸಹಜವಾಗಿ ಸಂಸದೆ ಸುಮಲತಾಗೆ ಬೇಸರ ಆಗಿರುತ್ತೆ, ಆದರೆ, ಸುಮಲತಾ ಅವರು ಸಮಾಧಾನದಿಂದ ಇದ್ದರೆ ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗುವ ಭರವಸೆಯನ್ನು ಹೈಕಮಾಂಡ್ ಕೊಟ್ಟಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಗೆಲ್ಲಿಸುವ ಸಂಬAಧ ಸಭೆ ಮಾಡಿದ್ದೇವೆ. ಎಲ್ಲರೂ ಸೇರಿ ಶೆಟ್ಟರ್ ಅವರನ್ನು ಹೆಚ್ಚಿನ ಅಂತರದಲ್ಲಿ ಗೆಲ್ಲಿಸಬೇಕು. ರಾಜ್ಯದ ೨೮ಕ್ಷೇತ್ರಗಳನ್ನು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಗೆಲ್ಲುತ್ತದೆ. ಎಲ್ಲಿಯೂ ಅಸಮಾಧಾನ ಆತಂಕ ಏನೂ ಇಲ್ಲ. ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ಪ್ರಚಾರಕ್ಕಾಗಿ ಎಲ್ಲಾ ಸ್ಥಳಗಳಿಗೆ ತೆರಳಲು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು. ಜಗದೀಶ್ ಶೆಟ್ಟರ್ ಅವರು ತುಂಬಾ ಒಳ್ಳೆಯ ನಾಯಕರಾಗಿದ್ದರಿಂದ ಅವರನ್ನು ನಾವು ಒತ್ತಾಯಿಸಿ ವಾಪಸ್ ಬಿಜೆಪಿಗೆ ಕರೆಸಿಕೊಂಡಿದ್ದೇವೆ. ಇದೀಗ ಅವರು ತುಂಬಾ ಉತ್ಸಕತೆಯಿಂದ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ಎಲ್ಲರೂ ಒಗ್ಗಟ್ಟಾಗಿಯೇ ಕೆಲಸ ಮಾಡುತ್ತಿದ್ದೇವೆ ಎಂದರು.

ರಾಯಚೂರು ಬಿಜೆಪಿಯಲ್ಲಿ ಅಸಮಾಧಾನ: ಕಾರ್ಯಕರ್ತರ ಆಕ್ರೋಶ

ರಾಯಚೂರು, ಮಾ. ೨೮: ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಘೋಷಣೆಯಾದ ಬೆನ್ನಲ್ಲಿಯೇ ಕಾರ್ಯಕರ್ತರಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಟಿಕೆಟ್ ನೀಡಿದ್ದರಿಂದ ಬಿ.ವಿ. ನಾಯಕ್ ಆಕ್ರೋಶಗೊಂಡಿದ್ದು, ಮತ್ತೊಮ್ಮೆ ಸಮೀಕ್ಷೆ ಮಾಡಿ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ. ರಾಯಚೂರು ಎಸ್‌ಟಿ ಮೀಸಲು ಕ್ಷೇತ್ರದಲ್ಲಿ ಸಂಸದರ ವಿರುದ್ಧ ಗೋ ಬ್ಯಾಕ್ ಅಮರೇಶ್ವರ ನಾಯಕ ಕೂಗು ಕೇಳಿ ಬಂದಿದೆ. ಬಿಜೆಪಿ ಟೆಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ನಗರದ ಖಾಸಗಿ ಹೊಟೇಲ್‌ನಲ್ಲಿ ಬಿ.ವಿ. ನಾಯಕ ಬೆಂಬಲಿಗರ ಚಿಂತನಾ ಸಭೆಯನ್ನು ನಡೆಸಲಾಗಿದೆ. ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಅವರಿಗೆ ಬಿಜೆಪಿ ಮತ್ತೆ ಟಿಕೆಟ್ ನೀಡಿರುವುದಕ್ಕೆ ಬಿ.ವಿ. ನಾಯಕ್ ಪಕ್ಷದ ನಾಯಕರು ಟಿಕೆಟ್ ವಿಚಾರದಲ್ಲಿ ಮರು ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಐದು ವರ್ಷಗಳ ಹಿಂದೆ ಲೋಕಸಭೆ ಚುನಾವಣೆಯಲ್ಲಿ ಚುನಾಯಿತರಾಗಿ ನಾಪತ್ತೆಯಾಗಿದ್ದ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯ್ಕ್ ಅವರನ್ನು ಪತ್ತೆ ಹಚ್ಚಿದ ಬಿಜೆಪಿ ಹೈಕಮಾಂಡ್‌ಗೆ ಧನ್ಯವಾದಗಳು ಎಂಬ ಬ್ಯಾನರ್ ಹಿಡಿದು ನಾಯ್ಕ್ ಅವರ ಇತರ ಕೆಲವು ಅನುಯಾಯಿಗಳು ಸಭೆಗೆ ಬಂದರು. ಬಿ.ವಿ. ನಾಯಕ್ ಬೆಂಬಲಿಗರು ‘ಗೋ ಬ್ಯಾಕ್ ಅಮರೇಶ್ವರ ನಾಯ್ಕ್’ ಘೋಷಣೆಗಳನ್ನು ಕೂಗಿದರು.

ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅನಾಹುತ!

ದಕ್ಷಿಣ ಕನ್ನಡ, ಮಾ. ೨೮: ಮಂಗಳೂರು ಹೊರವಲಯದ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಭಾರಿ ಅಗ್ನಿ ಅನಾಹುತ ಸಂಭವಿಸಿದ್ದು, ಕಾರ್ಖಾನೆಯೊಂದು ಅಗ್ನಿಗಾಹುತಿಯಾಗಿದೆ. ಕೋಳಿ ಆಹಾರಕ್ಕೆ ಬೇಕಾಗಿರುವ ಮೀನು ಪದಾರ್ಥಗಳನ್ನು ಉತ್ಪಾದಿಸುವ ಶಿಹಾರ ಎಂಟರ್ಪ್ರೈಸ್‌ನಲ್ಲಿ ಈ ಅಗ್ನಿ ದುರಂತ ಸಂಭವಿಸಿದ್ದು, ತಡ ರಾತ್ರಿ ಗೋದಾಮಿನಲ್ಲಿ ಕಾಣಿಸಿಕೊಂಡ ಬೆಂಕಿ ಬಳಿಕ ಕಾರ್ಖಾನೆಗೂ ವ್ಯಾಪಿಸಿದ್ದು ಮಾಹಿತಿ ಪಡೆದ ಅಗ್ನಿ ಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದೆ. ಅಗ್ನಿ ಅನಾಹುತ ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಎಂಆರ್ ಪಿಎಲ್, ಎನ್ ಎಂಪಿಟಿನಿAದ ಸುಮಾರು ೮ ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟವು. ನಿರಂತರ ಮೂರೂವರೆ ಗಂಟೆಗಳ ಕಾರ್ಯಾಚರಣೆಯ ಬಳಿಕ ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಆದರೆ ಅಷ್ಟರಲ್ಲಿ ಫ್ಯಾಕ್ಟರಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಘಟನೆಯಲ್ಲಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ. ಶಾರ್ಟ್ ಸರ್ಕಿಟ್ ದುರಂತಕ್ಕೆ ಕಾರಣವೆಂದು ಶಂಕಿಸಲಾಗಿದ್ದು ಕೋಟ್ಯಾಂತರ ರೂಪಾಯಿಗಳ ನಷ್ಟ ಸಂಭವಸಿದೆ ಎಂದು ಮಾಲಿಕ ಮೊಹಮ್ಮದ್ ತಿಳಿಸಿದ್ದಾರೆ.

ಮಾಜಿ ಐಪಿಎಸ್ ಅಧಿಕಾರಿಗೆ ೨೦ ವರ್ಷ ಜೈಲು ಶಿಕ್ಷೆ

ಪಾಲನ್‌ಪುರ, ಮಾ. ೨೮: ವಕೀಲರೊಬ್ಬರನ್ನು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸಿದ ೧೯೯೬ರ ಪ್ರಕರಣವೊಂದರಲ್ಲಿ ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಪಾಲನ್‌ಪುರದ ಸೆಷನ್ಸ್ ನ್ಯಾಯಾಲಯವು ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್‌ಗೆ ೨೦ ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈಗಾಗಲೇ ಕಸ್ಟಡಿ ಸಾವಿನ ಪ್ರಕರಣದಲ್ಲಿ ಜೈಲು ಸೇರಿರುವ ಭಟ್, ೧೯೯೬ ರಲ್ಲಿ ವಕೀಲರೊಬ್ಬರು ತಂಗಿದ್ದ ಪಾಲನ್‌ಪುರದ ಹೊಟೇಲ್ ಕೊಠಡಿಯಿಂದ ಪೊಲೀಸರು ಡ್ರಗ್ಸ್ ವಶಕ್ಕೆ ಪಡೆದಿರುವುದಾಗಿ ಸುಳ್ಳು ಆರೋಪ ಮಾಡಿದ್ದ ಪ್ರಕರಣದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜೆ.ಎನ್. ಠಕ್ಕರ್ ಅವರು ಬುಧವಾರ ಎನ್‌ಡಿಪಿಎಸ್ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸಂಬAಧಿತ ಸೆಕ್ಷನ್‌ಗಳ ಅಡಿಯಲ್ಲಿ ಭಟ್ ಅವರನ್ನು ದೋಷಿ ಎಂದು ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ಗುರುವಾರ ಪ್ರಕಟಿಸಲಾಗಿದೆ.

ಎಂಡಿಎAಕೆ ಸಂಸದ ಗಣೇಶಮೂರ್ತಿ ನಿಧನ

ಚೆನ್ನೆöÊ, ಮಾ. ೨೮: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದ್ದ ಎಂಡಿಎAಕೆ ಪಕ್ಷದ ಹಿರಿಯ ನಾಯಕ ಈರೋಡ್ ಸಂಸದ ಗಣೇಶ ಮೂರ್ತಿ ಸಾವನ್ನಪ್ಪಿದ್ದಾರೆ. ಕೊಯಮತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಣೇಶ ಮೂರ್ತಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಗಣೇಶ್ ಮೂರ್ತಿ ಅವರು ಎಂಡಿಎAಕೆ ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದು, ೨೦೧೯ರ ಲೋಕಸಭೆ ಚುನಾವಣೆಯಲ್ಲಿ ಈರೋಡ್ ಕ್ಷೇತ್ರದಿಂದ ಡಿಎಂಕೆ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಂಸದರಾಗಿದ್ದರು. ಈ ಬಾರಿಯೂ ಸಹ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವಿನ ನಿರೀಕ್ಷೆಯಲ್ಲಿದ್ದರು. ಗಣೇಶ್ ಮೂರ್ತಿ ಅವರಿಗೆ ೭೭ ವರ್ಷ ವಯಸ್ಸಾಗಿತ್ತು. ಪೊಲೀಸರ ಪ್ರಕಾರ, ಎಂಡಿಎAಕೆ ಪಕ್ಷದ ಗಣೇಶಮೂರ್ತಿ ಅವರು ಮಾರ್ಚ್ ೨೪ ರಂದು ತಮ್ಮ ನಿವಾಸದಲ್ಲಿ ವಿಷಯುಕ್ತ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಈ ಸಂಬAಧ ಈರೋಡ್ ಟೌನ್ ಪೊಲೀಸರು ಆತ್ಮಹತ್ಯೆ ಯತ್ನ ಪ್ರಕರಣ ದಾಖಲಿಸಿದ್ದರು.