ಮಡಿಕೇರಿ, ಮಾ. ೨೯: ಮಂಗಳಾದೇವಿ ನಗರ ಗೆಳೆಯರ ಬಳಗದ ವತಿಯಿಂದ ಬಳಗದ ಸದಸ್ಯ ಸಮೀರ್ ಜ್ಞಾಪಕಾರ್ಥ ಫೋರ್‌ಲೈನ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿತ್ತು. ಅಲ್ಲಿನ ಸಮುದಾಯ ಭವನದ ಆವರಣದಲ್ಲಿ ಮಂಗಳಾದೇವಿನಗರದ ಯುವಕರಿಗಾಗಿ ಆಯೋಜಿಸಲಾಗಿದ್ದ ಲೀಗ್ ಮಾದರಿಯ ಪಂದ್ಯಾಟದಲ್ಲಿ ಎಂಟು ತಂಡಗಳು ಭಾಗಹಿಸಿದ್ದವು. ಈ ಪೈಕಿ ಮನ್ವಿತ್ ಫ್ರೆಂಡ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಬಾಂಗ್‌ಬಾಯ್ಸ್ ರನ್ನರ್ಸ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿತು. ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯೆ ಸಬಿತಾ, ಕಾಂಗ್ರೆಸ್ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಮಿನಾಜ್ ಪ್ರವೀಣ್, ಆದಿಪರಾಶಕ್ತಿ ಯುವಕ ಸಂಘದ ಅಧ್ಯಕ್ಷ ಸುಂದರ್ ರಾಜ್ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಸAಜೆ ನಡೆದ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಆದಿಪರಾಶಕ್ತಿ ದೇವಾಲಯ ಸಮಿತಿ ಅಧ್ಯಕ್ಷ ರಾಮು, ಕಾರ್ಯದರ್ಶಿ ಮೋಹನ್‌ಕುಮಾರ್, ಆದಿಪರಾಶಕ್ತಿ ಯುವಕ ಸಂಘದ ಮಾಜಿ ಅಧ್ಯಕ್ಷ ಹೆಚ್.ಜೆ. ರಾಚಯ್ಯ, ನಿವೃತ್ತ ಯೋಧ ಸುರೇಶ್, ಸಮೀರ್ ಅವರ ತಾಯಿ ಫಾತಿಮಾ ಮತ್ತಿತರರು ಅತಿಥಿಗಳಾಗಿ ಪಾಲ್ಗೊಂಡು ಬಹುಮಾನ ವಿತರಿಸಿದರು. ವಿಜೇತ, ರನ್ನರ್ಸ್ ಸ್ಥಾನ ಪಡೆದ ತಂಡಗಳಿಗೆ ಆಕರ್ಷಕ ಟ್ರೋಫಿ ನೀಡಲಾಯಿತು. ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಮನ್ವಿತ್ ಫ್ರೆಂಡ್ಸ್ ತಂಡದ ರೋಷನ್, ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಮನ್ವಿತ್ ಫ್ರೆಂಡ್ಸ್ನ ಚೇತನ್, ಬೆಸ್ಟ್ ಬ್ಯಾಟ್ಸ್ಮನ್ ಪ್ರಶಸ್ತಿಯನ್ನು ಬಾಂಗ್‌ಬಾಯ್ಸ್ ತಂಡದ ಕಿರಣ್ ಪಡೆದುಕೊಂಡರು. ಗೆಳೆಯರ ಬಳಗದ ರಾಜೇಶ್, ಶಿವು ಮತ್ತು ತಂಡ ಪಂದ್ಯಾವಳಿಯ ನಿರ್ವಹಣೆ ಮಾಡಿತು. ಆದಿಪರಾಶಕ್ತಿ ಯುವಕ ಸಂಘದ ಮಾಜಿ ಅಧ್ಯಕ್ಷ ಉಜ್ವಲ್ ರಂಜಿತ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.