ಮಡಿಕೇರಿ, ಮಾ. ೨೯: ಶುಭ ಶುಕ್ರವಾರದ ಪ್ರಯುಕ್ತ ನಗರದ ಸಂತ ಮೈಕಲರ ದೇವಾಲಯದಲ್ಲಿ ವಿವಿಧ ಕಾರ್ಯಕ್ರಮಗಳು ನಡೆದವು. ಧರ್ಮ ಗುರುಗಳಾದ ಜಾರ್ಜ್ ದೀಪಕ್ ಪೂಜಾ ವಿಧಿಗಳನ್ನು ನೆರವೇರಿಸಿದರು.
ಸುಂಟಿಕೊಪ್ಪ: ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದಲ್ಲಿ ಶುಭ ಶುಕ್ರವಾರ (ಗುಡ್‌ಫ್ರೆöÊಡೆ)ದ ಅಂಗವಾಗಿ ವಿಶೇಷ ಬಲಿ ಪೂಜೆಯನ್ನು ಸಂತ ಮೇರಿ ಶಾಲಾವರಣದಲ್ಲಿ ಪ್ರಾರ್ಥನಾ ಕೂಟವನ್ನು ದೇವಾಲಯದ ಧರ್ಮಗುರುಗಳಾದ ಫಾಧರ್ ಅರುಳ್ ಸೆಲ್ವಕುಮಾರ್ ಹಾಗೂ ಸಹಾಯಕ ಗುರುಗಳಾದ ನವೀನ್ ಕುಮಾರ್ ಅವರುಗಳು ನೇರವೇರಿಸಿದರು.
ದೇವಾಲಯದಲ್ಲಿ ಶುಭಶುಕ್ರವಾರದ ಅಂಗವಾಗಿ ಬೆಳಗ್ಗಿನಿಂದಲೇ ವಿಶೇಷ ಪ್ರಾರ್ಥನೆ ಹಾಗೂ ಸುತ್ತು ಆರಾಧನೆಗಳನ್ನು ದೇವಾಲಯದ ಧರ್ಮಗುರುಗಳು ಹಾಗೂ ಕನ್ಯಾಸ್ತಿçಯರು ನೇರವೇರಿಸಿದರು.
ಸೋಮವಾರಪೇಟೆ: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿರುವ ಕ್ರಿಶ್ಚಿಯನ್ ಸಮುದಾಯದವರು ಗುಡ್ ಫ್ರೆöÊಡೇ ದಿನವನ್ನು ಶ್ರದ್ಧೆಯಿಂದ ಆಚರಿಸಿದರು.
ಪಟ್ಟಣದ ಜಯವೀರ ಮಾತೆ ದೇವಾಲಯದಲ್ಲಿ ದಿನದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಫಾ. ರಾಯಪ್ಪ
(ಮೊದಲ ಪುಟದಿಂದ) ಅವರು ಪ್ರಾರ್ಥನೆಯ ನೇತೃತ್ವ ವಹಿಸಿ, ದಿನದ ಮಹತ್ವದ ಬಗ್ಗೆ ಭಕ್ತಾದಿಗಳಿಗೆ ವಿವರಿಸಿದರು.
ಪಟ್ಟಣದ ಜೇಸೀ ವೇದಿಕೆಯಲ್ಲಿ ಸಮುದಾಯದ ಯುವಕರಿಂದ ಮೂಡಿಬಂದ, ಏಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದೃಷ್ಟಾಂತವನ್ನು ಹೊಂದಿದ್ದ ನಾಟಕ ಎಲ್ಲರ ಮನ ಕಲಕಿತು. ನಂತರ ಪಟ್ಟಣದಿಂದ ಜಯವೀರ ಮಾತೆ ದೇವಾಲಯದವರೆಗೆ ಶಿಲುಬೆಗಳನ್ನಿಡಿದು ಏಸು ಕ್ರಿಸ್ತರ ಸ್ಮರಣೆಯೊಂದಿಗೆ ಮೆರವಣಿಗೆ ತೆರಳಲಾಯಿತು. ಚರ್ಚ್ನ ಆವರಣದಲ್ಲಿ ಏಸ್ತು ಕ್ರಿಸ್ತರ ಅಂತಿಮ ಕ್ಷಣಗಳನ್ನು ಬಿಂಬಿಸುವ ಅಭಿನಯ ಮನಮುಟ್ಟಿತು. ಚರ್ಚ್ನ ಒಳಗೆ ಏಸು ಕ್ರಿಸ್ತರ ಆರಾಧನ ವಿಧಿ ವಿಧಾನಗಳು ಜರುಗಿದವು. ಭಕ್ತಾದಿಗಳಿಗೆ ಪರಮ ಪ್ರಸಾದ ವಿತರಿಸಲಾಯಿತು.
ಈ ಸಂದರ್ಭ ಜಯವೀರ ಮಾತೆ ದೇವಾಲಯದ ಸಹಾಯಕ ಗುರುಗಳಾದ ಜಾನ್ ಫರ್ನಾಂಡೀಸ್, ಆಡಳಿತ ಮಂಡಳಿಯ ಕಾರ್ಯದರ್ಶಿ ಶೀಲಾ ಡಿಸೋಜ, ಉಪಾಧ್ಯಕ್ಷ ಮಾರ್ಷಲ್ ಲೋಬೋ, ಉಪ ಕಾರ್ಯದರ್ಶಿ ಕೆ.ಜೆ. ಸುನಿಲ್, ಕಾರ್ಯಕಾರಿ ಸಮಿತಿಯ ವಿನ್ಸಿ ಡಿಸೋಜ, ವಿ.ಎ. ಲಾರೆನ್ಸ್, ಪ್ರಿನ್ಸ್, ಮರ್ವಿನ್ ಫರ್ನಾಂಡೀಸ್, ಸಿಸ್ಟರ್‌ಗಳಾದ ರಕ್ಷಿತ, ಜೋಶ್ನಾ ಸೇರಿದಂತೆ ಇತರರು ಉಪಸ್ಥಿತರಿದ್ದರು. ಗೋಪಾಲಪುರ ಗ್ರಾಮದ ಸಂತ ಅಂತೋಣಿ ಚರ್ಚ್ನಲ್ಲಿ ಕ್ಯಾಥೊಲಿಕ್ ಕ್ರೆöÊಸ್ತ ಸಮುದಾಯದವರು ಶುಭ ಶುಕ್ರವಾರವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಧರ್ಮಗುರು ಜೇಕಬ್ ಕೊಳನೂರು ಅವರ ನೇತೃತ್ವದಲ್ಲಿ ಆರಾಧನೆ, ಪೂಜೆ ಪ್ರಾರ್ಥನೆ ನೆರವೇರಿತು.ಕೊಡ್ಲಿಪೇಟೆಯ ಐಪಿಸಿ ಚರ್ಚ್ನಲ್ಲಿ ಪ್ರೊಟೆಸ್ಟಂಟ್ ಕ್ರೆöÊಸ್ತ ಸಮುದಾಯದವರು ಶುಭಶುಕ್ರವಾರವನ್ನು ಆಚರಿಸಿದರು. ಚರ್ಚ್ನ ಸಭಾಪಾಲಕ ಪಿ.ಸಿ.ಫ್ರೆಡ್ಡಿ ಅವರು ಧರ್ಮೋಪದೇಶ ನೀಡಿದರು. ಕೊಡ್ಲಿಪೇಟೆ ಪಟ್ಟಣ ಹಾಗೂ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತಾದಿಗಳು ಸಾಮೂಹಿಕವಾಗಿ ಏಸುಕ್ರಿಸ್ತನನ್ನು ಸ್ಮರಿಸಿದರು. ನಂತರ ಮಳೆಗಾಗಿ ವರುಣದೇವನನ್ನು ಪ್ರಾರ್ಥಿಸಿದರು.ಚೆಟ್ಟಳ್ಳಿ: ಚೆಟ್ಟಳ್ಳಿಯ ಸೆಂಟ್ ಸಭಾಸ್ಟಿನ್ ಚರ್ಚ್ನಲ್ಲಿ ಗುಡ್ ಫ್ರೆöÊಡೆ ಫಾದರ್ ಜೆರಾಲ್ಡ್ ಸಿಕ್ಲೇರ್ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಪವಿತ್ರ ಶುಕ್ರವಾರದ ದಿನದಂದು ಕ್ರೆöÊಸ್ತ ಸಮುದಾಯವರು ಒಂಟಿಯAಗಡಿ ಯಿಂದ ಚೆಟ್ಟಳ್ಳಿ ಸೆಂಟ್ ಸಭಾಸ್ಟಿನ್ ಚರ್ಚ್ವರೆಗೆ ಶಿಲುಬೆ ಹಿಡಿದು ಮೆರವಣಿಗೆ ನಡೆಸಿದರು.