ಶನಿವಾರಸಂತೆ: ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಿ ಕೊಳ್ಳುವ ಸಲುವಾಗಿ ಪ್ರತಿದಿನ ಬೆಳಿಗ್ಗೆ ಮನೆಮನೆಗೆ ತೆರಳಿ ಸರ್ಕಾರಿ ಶಾಲೆಯಲ್ಲಿ ಲಭಿಸುತ್ತಿರುವ ಗುಣಮಟ್ಟದ ಶಿಕ್ಷಣದ ಜತೆಯಲ್ಲಿ ಮಕ್ಕಳು ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಸರ್ಕಾರಿ ಶಾಲಾ ದಾಖಲಾತಿ ಆಂದೋಲನ ಕರಪತ್ರ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೊಡ್ಲಿಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸಮೀಪದ ಕೊಡ್ಲಿಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಸರ್ಕಾರಿ ಶಾಲಾ ದಾಖಲಾತಿ ಆಂದೋಲನ ಕರಪತ್ರ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಸರ್ಕಾರಿ ಶಾಲೆ ೧೫೫ ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ್ದು ಸಾವಿರಾರು ಶಿಷ್ಯ ಬಳಗಕ್ಕೆ ಜ್ಞಾನಸುಧೆಯನ್ನು ನೀಡಿರುವ ಸ್ಮರಣಾರ್ಥ ದಾಖಲಾತಿ ಆಂದೋಲನ ಆರಂಭಿಸಲಾಗಿದೆ ಎಂದರು.

ಮುಖ್ಯಶಿಕ್ಷಕಿ ಆಶಾ ಮಾತನಾಡಿ, ಪ್ರಸ್ತುತ ೨೦೨೪-೨೫ನೇ ಸಾಲಿನಲ್ಲಿ ಶಾಲೆ ಗುಣಾತ್ಮಕ ಹಾಗೂ ಸೃಜನಾತ್ಮಕ ಶಿಕ್ಷಣದತ್ತ ವಿಶಾಲ ಮುನ್ನೋಟ ಹೊಂದಿದೆ. ಪೂರ್ವ ಪ್ರಾಥಮಿಕ ಹಾಗೂ ಆಂಗ್ಲ ಮಾಧ್ಯಮದ ೧ ರಿಂದ ೩ನೇ ತರಗತಿ ಮತ್ತು ೧ ರಿಂದ ೮ನೇ ತರಗತಿವರೆಗೆ ಉಚಿತ ಶಿಕ್ಷಣದ ಸೌಲಭ್ಯವಿದ್ದು, ಡಿಜಿಟಲ್ ಶಿಕ್ಷಣದ ವಿಶೇಷತೆ ಗಳೊಂದಿಗೆ ಶಾಲೆ ಆರಂಭ ವಾಗುತ್ತಿದೆ.

ಮಕ್ಕಳು ಶೈಕ್ಷಣಿಕ ಮತ್ತು ಸಾಮಾಜಿಕವಾಗಿಯೂ ಪ್ರಗತಿ ಹೊಂದಲು ಇದೊಂದು ಸುವರ್ಣ ವಕಾಶವಾಗಿದ್ದು ಪೋಷಕರು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಮುಖ್ಯ ಅತಿಥಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನಿಧಿಕ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಪೋಷಕರು ಹಾಗೂ ಶಿಕ್ಷಕಿಯರಿಗೆ ಜಾನಪದ ಗೀತೆ ಗಾಯನ, ರಂಗೋಲಿ ಸ್ಪರ್ಧೆ ಹಾಗೂ ಬೆಂಕಿ ರಹಿತ ಅಡುಗೆ ಸ್ಪರ್ಧೆಯನ್ನು ಏರ್ಪಡಿಸಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಮಮತಾ ರಮೇಶ್, ನೂರ್ಜಾನ್, ಯಶೋದಾ, ಲೋಲಾಕ್ಷಿ ಇತರರು ಉಪಸ್ಥಿತರಿದ್ದರು. ಶಿಕ್ಷಕಿಯರಾದ ಕವಿತಾ ನಿರೂಪಿಸಿ, ಗೌರಮ್ಮ ವಂದಿಸಿದರು.vವೀರಾಜಪೇಟೆ: ಭಾರತದ ಪ್ರಜಾಪ್ರಭುತ್ವದ ಯಶಸ್ಸಿಗೆ ಯುವಜನತೆಯ ಪಾತ್ರ ಬಹುಮುಖ್ಯವಾಗಿದೆ ಎಂದು ವೀರಾಜಪೇಟೆಯ ಸರ್ಕಾರಿ ಪದವಿಪೂರ್ವ ಕಾಲೇಜಿನ ರಾಜ್ಯಶಾಸ್ತç ಉಪನ್ಯಾಸಕಿ ಪವಿತ್ರ ರೈ ಅಭಿಪ್ರಾಯಪಟ್ಟರು.

ವೀರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಕಾಲೇಜಿನ ಐಕ್ಯೂಎಸಿ, ಎನ್.ಎಸ್.ಎಸ್. ಹಾಗೂ ಮತದಾರರ ಸಾಕ್ಷರತಾ ಘಟಕಗಳ ವತಿಯಿಂದ ಜರುಗಿದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಭಾರತವು ವಿಶ್ವದಲ್ಲಿಯೇ ಬೃಹತ್ ಪ್ರಜಾಪ್ರಭುತ್ವ ರಾಷ್ಟçವಾಗಿದ್ದು, ನಮ್ಮ ಸರ್ಕಾರ ಹಾಗೂ ಮತದಾನದ ಪದ್ಧತಿಗಳು ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದರು.

ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ, ಇಡೀ ವಿಶ್ವವೇ ಭಾರತದ ಚುನಾವಣೆಯನ್ನು ಬಹಳ ಕುತೂಹಲದಿಂದ ನೋಡುತಿದ್ದು, ಭಾರತದ ಪ್ರಜಾಪ್ರಭುತ್ವ ವಿಶ್ವಕ್ಕೆ ಮಾದರಿಯಾಗಿದೆ. ಚುನಾವಣೆಯು ಎಲ್ಲರ ಹಕ್ಕಾಗಿದ್ದು ನಮ್ಮ ಹಕ್ಕನ್ನು ನಾವು ಚಲಾಯಿಸುವುದು ಮುಖ್ಯವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಐಸಾಕ್ ರತ್ನಾಕರ್ ವಿದ್ಯಾರ್ಥಿಗಳಿಗೆ ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಮಾತನಾಡಿ, ನಮ್ಮ ಸಂವಿಧಾನವು ನಮಗೆ ಸರ್ಕಾರದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮತದಾನದ ಹಕ್ಕನ್ನು ಕೊಟ್ಟಿದ್ದು, ಪ್ರಜಾಪ್ರಭುತ್ವದ ಕಲ್ಪನೆ ಸಾಕಾರಗೊಳ್ಳಲು ಪ್ರತಿಯೊಬ್ಬರು ಮತದಾನವನ್ನು ಮಾಡಬೇಕು ಎಂದರು. ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ಬಿ.ಎನ್. ಶಾಂತಿಭೂಷಣ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಉಪನ್ಯಾಸಕರಾದ ಹೇಮ ಬಿ.ಡಿ., ಶಶಿಕಲಾ ಉಪಸ್ಥಿತರಿದ್ದರು. ಈ ಸಂದರ್ಭ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕೊಡವ ಮುಸ್ಲಿಂ ಕುಟುಂಬಗಳ ಕ್ರಿಕೆಟ್‌ಪೊನ್ನಂಪೇಟೆ: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ೧೯೭೯ನೇ ಸಾಲಿನ ಬಿಎ ವಿಭಾಗದ ವಿದ್ಯಾರ್ಥಿಗಳ ೪ನೇ ವರ್ಷದ ಸ್ನೇಹ ಸಮ್ಮಿಲನ ಸಂತೋಷಕೂಟ ಕಾರ್ಯಕ್ರಮ ಗೋಣಿಕೊಪ್ಪಲು ಪ್ಲಾಂಟರ್ಸ್ ಕ್ಲಬ್‌ನ ಸಭಾಂಗಣದಲ್ಲಿ ನಡೆಯಿತು.

ಪಳಂಗAಡ ವಾಣಿ ಚಂಗಪ್ಪ ಮತ್ತು ಅಮ್ಮಂಡ ಜ್ಯೋತಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಕಳೆದ ಒಂದು ವರ್ಷದ ಅವಧಿಯಲ್ಲಿ ಮೃತಪಟ್ಟ ಸದಸ್ಯರಿಗೆ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಸದಸ್ಯರು ತಮ್ಮ ಕಾಲೇಜು ದಿನಗಳ ಸಹಪಾಠಿ ಗಳನ್ನು ಕಂಡು ಹಳೆಯ ನೆನಪುಗಳನ್ನು ಮೆಲಕು ಹಾಕುತ್ತಾ ಖುಷಿಪಟ್ಟರು.

ಈ ಸಂದರ್ಭ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಗೀತ ಕುರ್ಚಿಯಲ್ಲಿ ಅಮ್ಮಂಡ ಜ್ಯೋತಿ ಪ್ರಥಮ, ಮಣವಟ್ಟಿರ ಉತ್ತರ ದ್ವಿತೀಯ ಸ್ಥಾನ ಪಡೆದುಕೊಂಡರು. ಪಾಸಿಂಗ್ ದ ಬಾಲ್ ಸ್ಪರ್ಧೆಯಲ್ಲಿ ಮೇಚಂಡ ಮಲ್ಲಿಗೆ ಪ್ರಥಮ, ಆಲೆಮಾಡ ಉಷಾ ದ್ವಿತೀಯ, ಮಿಸ್ಸಿಂಗ್ ದ ನಂಬರ್ ಗೇಮ್‌ನಲ್ಲಿ ಪ್ರೊ. ತಿರುನೆಲ್ಲಿಮಾಡ ದೇವಯ್ಯ ಪ್ರಥಮ, ತೀತಿರ ಬಾನು ದ್ವಿತೀಯ, ಬಕೆಟ್‌ಗೆ ಬಾಲ್ ಹಾಕುವ ಸ್ಪರ್ಧೆಯಲ್ಲಿ ಬೊಳಂದAಡ ಸುಶೀಲ ಪ್ರಥಮ, ಬೊಳ್ಳಂಡ ಕಿಶೋರಿ ದ್ವಿತೀಯ ಸ್ಥಾನ ಪಡೆದುಕೊಂಡರು.

ನಾಮೆರ ರವಿ ದೇವಯ್ಯ, ಪಳಂಗAಡ ವಾಣಿ ಚಂಗಪ್ಪ, ಪ್ರೊ. ತಿರುನೆಲ್ಲಿಮಾಡ ದೇವಯ್ಯ, ಆಲೆಮಾಡ ಉಷಾ, ಚೋನಿರ ದಿನಕರ್ ಮಾದಪ್ಪ, ಆಲೆಮಾಡ ಮನು, ಕಳ್ಳಿಚಂಡ ವಿಜು ಕಾವೇರಮ್ಮ ಅವರು ತಮ್ಮ ಸಂಘ ನಡೆದುಬಂದ ಬಗೆ ಮತ್ತು ಮುಂದಿನ ದಿನಗಳಲ್ಲಿ ಸಂಘವನ್ನು ಯಾವ ರೀತಿ ಮುನ್ನಡೆಸಿಕೊಂಡು ಹೋಗಬೇಕು ಎಂಬ ಬಗ್ಗೆ ಸಲಹೆ ಸೂಚನೆ ನೀಡಿದರು.

ಪಳಂಗAಡ ವಾಣಿ ಚಂಗಪ್ಪ, ಆಲೆಮಾಡ ಉಷಾ ಚಿತ್ರಗೀತೆ ಹಾಡಿದರು. ಮಲ್ಲೇಂಗಡ ಮಧು ಕುಶಾಲಪ್ಪ ಕ್ವಿಜ್ ನಡೆಸಿಕೊಟ್ಟರು. ಮಣವಟ್ಟಿರ ಉತ್ತರ ಪೊನ್ನಣ್ಣ ಹಾಗೂ ಕುಪ್ಪಂಡ ಗೀತಾ ಮೊಣ್ಣಪ್ಪ ತಾಂಬೂಲ ಆಟ ನಡೆಸಿಕೊಟ್ಟರು.

ಈ ಸಂದರ್ಭ ತಾವು ವಿದ್ಯೆ ಕಲಿತ ಕಾವೇರಿ ಕಾಲೇಜಿಗೆ ಕೊಡುಗೆ ನೀಡುವ ಬಗ್ಗೆ ಚಿಂತನೆ ನಡೆಸಿದ ಸದಸ್ಯರು ಗೋಣಿಕೊಪ್ಪಲು ಕಾವೇರಿ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಕಟ್ಟಡ ನಿಧಿಗೆ ಮುಂದಿನ ದಿನಗಳಲ್ಲಿ ರೂ. ೧ ಲಕ್ಷ ನೀಡುವ ಮೂಲಕ ಕಾಲೇಜಿನ ಅಭಿವೃದ್ಧಿಗೆ ಕೈಜೋಡಿಸಲು ತೀರ್ಮಾನಿಸ ಲಾಯಿತು. ನಾಮೇರ ರವಿ ದೇವಯ್ಯ, ಪಳಂಗAಡ ವಾಣಿ ಚಂಗಪ್ಪ ಹಾಗೂ ಮಲ್ಲೇಂಗಡ ಮಧು ಕುಶಾಲಪ್ಪ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಲೆಮಾಡ ಉಷಾ ಪ್ರಾರ್ಥಿಸಿ, ಕಳ್ಳಿಚಂಡ ವಿಜು ಕಾವೇರಮ್ಮ ಸ್ವಾಗತಿಸಿ, ಬೊಳ್ಳಂಡ ಕಿಶೋರಿ ವಂದಿಸಿ, ಮಲ್ಲೇಂಗಡ ಮಧು ಕುಶಾಲಪ್ಪ ಕಾರ್ಯಕ್ರಮ ನಿರೂಪಿಸಿದರು.ಐಗೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಜೂರಿನಲ್ಲಿ ಆಂಗ್ಲ ಮಾಧ್ಯಮದ ಎಲ್.ಕೆ.ಜಿ. ತರಗತಿಗಳನ್ನು ಪ್ರಾರಂಭಿಸುವ ಹಿನ್ನೆಲೆ ಎಸ್.ಡಿ.ಎಂ.ಸಿ ಸದಸ್ಯರು, ಪೋಷಕ ವರ್ಗದವರು ಸೇರಿ ಶಾರದಾ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯ ಶಿಕ್ಷಕಿ ಸರಳ ಕುಮಾರಿ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಕಾಜೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾರದಾ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಅರ್ಚಕ ಚಂದ್ರಶೇಖರ್ ಅವರು ಗಣಪತಿ, ಸರಸ್ವತಿ ಮತ್ತು ಲಕ್ಷಿö್ಮÃದೇವಿಗೆ ಪೂಜೆಯನ್ನು ಸಲ್ಲಿಸಿ ಎಲ್.ಕೆ.ಜಿ. ಮತ್ತು ಒಂದನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಅಕ್ಕಿ ಕಾಳಿನಲ್ಲಿ ಅಕ್ಷರಾಭ್ಯಾಸ ನಡೆಸಿದರು.

ಶಿಕ್ಷಕರಾದ ಅಜಿತ್ ಕುಮಾರ್ ಕಲಿಕಾ ಕೇಂದ್ರದ ವಿದ್ಯಾರ್ಥಿಗಳಿಂದ ಭಕ್ತಿಗೀತೆ ಮತ್ತು ಶ್ಲೋಕಗಳನ್ನು ಹಾಡಿಸಿದರು. ನೆರೆದಿದ್ದ ಪೋಷಕ ವರ್ಗದವರಿಗೂ ವಿದ್ಯಾರ್ಥಿಗಳಿಗೆ ಪ್ರಸಾದ ವಿನಿಯೋಗವನ್ನು ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ್, ಸದಸ್ಯರಾದ ಆಶಾ, ಸುಜಾತ, ಮಂಜು, ಮುಖ್ಯ ಶಿಕ್ಷಕಿ ಸರಳ ಕುಮಾರಿ, ಶಿಕ್ಷಕರಾದ ಅಜಿತ್ ಕುಮಾರ್, ಶಿಕ್ಷಕಿಯರಾದ ಅನುಸೂಯ, ಭಾರತಿ, ಇಂದಿರಾ, ವೇದಾವತಿ ಮತ್ತು ಪೋಷಕರು ಹಾಜರಿದ್ದರು.ವೀರಾಜಪೇಟೆ: ಕೊಡವ ಮುಸ್ಲಿಂ ಕುಟುಂಬಗಳ ನಡುವಿನ ಕ್ರಿಕೆಟ್ ಪಂದ್ಯಾವಳಿ ಏಪ್ರಿಲ್ ೧೫ ರಿಂದ ೨೧ ರವರೆಗೆ ನಡೆಯಲಿದೆ ಎಂದು ಕುವೇಲೆರ ಅನಿಸ್ ಉಸ್ಮಾನ್ ತಿಳಿಸಿದ್ದಾರೆ.

ಕುವೇಲೆರ ಕುಟುಂಬದ ಆಶ್ರಯದಲ್ಲಿ ಪ್ರಥಮ ವರ್ಷದ ಕ್ರಿಕೆಟ್ ಪಂದ್ಯಾವಳಿ ಚಾಮಿಯಾಲದಲ್ಲಿ ದಿ. ಕುವೇಲೆರ ಉಸ್ಮಾನ್ ಹಾಜಿ ಮೈದಾನದಲ್ಲಿ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಕುವೇಲೆರ ಅನಿಸ್ ಉಸ್ಮಾನ್ ಮಾಹಿತಿ ನೀಡಿದರು.

ಒಟ್ಟು ೭ ದಿನಗಳ ಕಾಲ ನಡೆಯಲಿರುವ ಪಂದ್ಯಾಟದಲ್ಲಿ ೬೪ ತಂಡಗಳು ಭಾಗವಹಿಸಲಿದ್ದು, ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ರೂ. ೧ ಲಕ್ಷ ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನಕ್ಕೆ ರೂ. ೫೦ ಸಾವಿರ ನಗದು ಹಾಗೂ ಟ್ರೋಫಿ, ಮೂರನೇ ಮತ್ತು ನಾಲ್ಕನೇ ಸ್ಥಾನದ ತಂಡಗಳಿಗೆ ಟ್ರೋಫಿ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಕ್ರಿಕೆಟ್ ಪಂದ್ಯಾವಳಿಯ ಲೋಗೋ ಹಾಗೂ ಕುವೇಲೆರ ಕುಟುಂಬದ ಲೋಗೋವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಬಿಡುಗಡೆಗೊಳಿಸಿದರು.

ಈ ಸಂದರ್ಭ ಸಮಿತಿಯ ಪ್ರಮುಖರಾದ ಕುವೇಲೆರ ಅರ್ಶಾದ್, ಕುವೇಲೆರ ಅಸ್ಫಾಕ್, ಆಲೀರ ಪವಿಲ್ ಉಸ್ಮಾನ್, ಆಲೀರಾ ಶಜೀರ್, ಆಲೀರಾ ರಶೀದ್, ಪುದಿಯತ್ ಮುನೀರ್, ಪರವಂಡ ಸಿರಾಜ್, ಕೋಲುಮಂಡ ರಫೀಕ್ ಮತ್ತು ಕನ್ನಡಿಯಂಡ ಹನೀಫ್ ಇದ್ದರು.ಚೆಯ್ಯಂಡಾಣೆ: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ೭ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಪ್ರೇಮಾಕುಮಾರಿ ಮಾತನಾಡಿ, ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸ ಉಜ್ವಲವಾಗಲಿ. ನೀವು ವಿದ್ಯಾರ್ಜನೆಗೈದ ಪ್ರಾಥಮಿಕ ಶಾಲೆಯ ನೆನಪು ಸದಾ ಇರಬೇಕೆಂದು ಕಿವಿಮಾತು ಹೇಳಿದರು.

ಈ ಸಂದರ್ಭ ಶಿಕ್ಷಕರಾದ ಪೂರ್ಣೇಶ್ ಬಿ.ಟಿ., ಜಯಪ್ರದ, ದಮಯಂತಿ, ಸತ್ಯಮ್ಮ, ಪೋಷಕರು, ಎಸ್‌ಡಿಎಂಸಿ ಸದಸ್ಯರು ಇದ್ದರು.