ಐಗೂರು: ಈಗಾಗಲೇ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಗೆ ಆಗುತ್ತಿದ್ದು, ಎಲ್ಲಾ ನದಿ ಮೂಲಗಳು ಬತ್ತಿ ಹೋಗಿದ್ದು, ಐಗೂರು ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಅಭಾವ ಉಂಟಾಗುವ ಸ್ಥಿತಿ ಗೋಚರಿಸುತ್ತಿದೆ. ವಿಜಯನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅಭಾವದಿಂದ ಈಗಾಗಲೇ ಟ್ಯಾಂಕರ್ ಮೂಲಕ ಗ್ರಾಮ ಪಂಚಾಯಿತಿಯಿAದ ಮನೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ.

ಗ್ರಾಮಗಳಲ್ಲಿರುವ ಹಳೆಯ ಬಾವಿಗಳನ್ನು ಜನರು ನೀರಿದೆಯೇ ಎಂದು ಇಣುಕಿ ನೋಡುವ ಸ್ಥಿತಿ ನಿರ್ಮಾಣವಾಗಿದ್ದು ಇಲ್ಲಿಯ ಕೃಷಿ ಪತ್ತಿನ ಸಂಘದ ಕಟ್ಟಡದ ಮುಂಭಾಗದಲ್ಲಿರುವ ಬಾವಿಯೊಂದು ಇದಕ್ಕೆ ಸಾಕ್ಷಿಯಾಗಿದೆ. ಈ ಬಾವಿಯ ಮೇಲ್ಭಾಗದಲ್ಲಿ ಕಸ ಬೀಳದಂತೆ ಕಬ್ಬಿಣದ ರಿಂಗ್‌ಗಳನ್ನು ಅಳವಡಿಸಲಾಗಿದ್ದು, ಬಾವಿಯ ಕಟ್ಟೆಯ ಮೇಲೆ ೮ .೪. ೬೧ ಎಂದು ದಿನಾಂಕವನ್ನು ಮುದ್ರಿಸಲಾಗಿದೆ. ಈ ಬಾವಿಯು ಮುಂದಿನ ತಿಂಗಳು ತನ್ನ ೬೩ನೇ ಹುಟ್ಟುಹಬ್ಬವನ್ನು ಆಚರಿಸುವ ಸಂಭ್ರಮದಲ್ಲಿದೆ. ಬಹಳ ವರ್ಷಗಳ ಹಿಂದೆ ಈಗಿನಂತೆ ನಲ್ಲಿ ನೀರಿನ ವ್ಯವಸ್ಥೆ ಇಲ್ಲದಿದ್ದಾಗ ಎಲ್ಲಾ ಜನರು ಈ ಬಾವಿಯ ನೀರನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದರು. ಈಗಲೂ ಈ ಬಾವಿಯ ತಳಭಾಗದಲ್ಲಿ ನೀರು ಶೇಖರಣೆಯಾಗಿದ್ದು, ಸರಿಯಾದ ಶುಚಿಗೊಳಿಸುವ ನಿರ್ವಹಣೆಯನ್ನು ಮಾಡಿಕೊಂಡು ಬಂದಿದ್ದರೆ ಇನ್ನೂ ಹೆಚ್ಚಿಗೆ ನೀರು ಬಾವಿಯಲ್ಲಿ ತುಂಬುತ್ತಿತ್ತು. ಕಳೆದ ೨೦೨೩ ನೇ ಸಾಲಿನ ಕೃಷಿ ಪತ್ತಿನ ಸಂಘದ ವಾರ್ಷಿಕ ಸಭೆಯಲ್ಲಿ ಕೆಲವು ಸದಸ್ಯರು ಈ ಬಾವಿಯನ್ನು ಮುಚ್ಚಿ ನೆಲಸಮ ಮಾಡಬೇಕೆಂದು ಸಲಹೆಗಳನ್ನು ನೀಡಿದ್ದರು. ಆದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗಾಗಿ ಜಲ ಕಂಟಕ ಉಂಟಾದರೆ ಇಂತಹ ಹಳೆಯ ಬಾವಿಗಳ ಸಹಾಯ ಬೇಕಾಗಬಹುದೆಂದು ಕೆಲವು ಹಿರಿಯ ಗ್ರಾಮಸ್ಥರ ಅಭಿಪ್ರಾಯವಾಗಿದೆ.

- ಸುಕುಮಾರ

ಅಂತರ್ಜಲದ ಕೊರತೆ... ಕೆಟ್ಟು ನಿಂತ ಕೊಳವೆ ಬಾವಿಗಳು...

ಕಣಿವೆ: ಕಳೆದ ವರ್ಷದಂತೆ ಈ ಬಾರಿಯೂ ತೀವ್ರವಾದ ಮಳೆಯ ಕೊರತೆಯಿಂದಾಗಿ ಅಂತರ್ಜಲದ ಮಟ್ಟ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆ. ಇದರಿಂದಾಗಿ ಬಹಳಷ್ಟು ಮಂದಿ ರೈತರು ನೀರನ್ನು ಪಡೆದೇ ತೀರಬೇಕೆಂಬ ಹಂಬಲದಿAದ ಮತ್ತಷ್ಟು ಆಳಕ್ಕೆ ಕೊಳವೆ ಬಾವಿಗಳನ್ನು ಕೊರೆಸುವ ಪ್ರಯತ್ನಕ್ಕೆ ಮುಂದಾಗಿ ದ್ದಾರೆ. ಮತ್ತೆ ಹಲವು ಕೃಷಿಕರ ಕೊಳವೆ ಬಾವಿಗಳ ಒಳಗೆ ಅಳವಡಿಸಿರುವ ವಿದ್ಯುತ್ ಮೋಟಾರ್‌ಗಳು ದುರಸ್ತಿ ಗೀಡಾಗಿವೆ. ಇದರಿಂದಾಗಿ ನುರಿತ ಕೊಳವೆ ಬಾವಿಗಳ ತಂತ್ರಜ್ಞರಿಗೆ ಈಗ ಎಲ್ಲಿಲ್ಲದ ಬೇಡಿಕೆ ಶುರುವಾಗಿದೆ.

ಕುಶಾಲನಗರ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ರೈತರು ಕೈಗೊಂಡಿರುವ ಪ್ರಮುಖ ವಾಣಿಜ್ಯ ಬೆಳೆ ಶುಂಠಿಗೆ ನೀರುಣಿಸಿ ಬೆಳೆಯನ್ನು ಬಿಸಿಲಿನಿಂದ ರಕ್ಷಿಸಿಕೊಳ್ಳಲೇಬೇಕಿರುವ ಕಾರಣ ರಾತ್ರಿ-ಹಗಲು ಎನ್ನದೇ ಈಗಾಗಲೇ ರೈತರ ಹೊಲ ಗದ್ದೆಗಳಲ್ಲಿ ಕೊಳವೆ ಬಾವಿಗಳ ದುರಸ್ತಿ ಕೆಲಸ ಎಗ್ಗಿಲ್ಲದೇ ನಡೆಯುತ್ತಿದೆ.

ಈ ಕೆಲಸಕ್ಕೆ ಬೇಡಿಕೆ ಹಾಗೂ ಕೊಳವೆ ಬಾವಿಗಳ ದುರಸ್ತಿ ಕಾರ್ಯ ತ್ವರಿತವಾಗಿ ಸಾಗುತ್ತಿದ್ದು, ಇದು ಒಂದು ರೀತಿಯಲ್ಲಿ ಕೊರೊನಾ ಕಾಲದಲ್ಲಿ ಓಡಾಡುತ್ತಿದ್ದ ಆ್ಯಂಬುಲೆನ್ಸ್ ವಾಹನಗಳ ಮಾದರಿಯಲ್ಲಿ ಕೊಳವೆ ಬಾವಿಗಳ ದುರಸ್ತಿ ವಾಹನಗಳು ಅತ್ತಿಂದಿತ್ತ ಸಂಚರಿಸುತ್ತಿವೆ.

ಕುಶಾಲನಗರ ವ್ಯಾಪ್ತಿಯಲ್ಲಿ ೩೫೦೦ಕ್ಕೂ ಅಧಿಕ ಕೊಳವೆ ಬಾವಿಗಳಿದ್ದು ೨೦೦೦ಕ್ಕೂ ಹೆಚ್ಚು ಕೊಳವೆ ಬಾವಿಗಳು ಕೆಲಸ ನಿಲ್ಲಿಸಿ ವಿರಮಿಸಿವೆ. ೫೦೦ಕ್ಕೂ ಹೆಚ್ಚು ಕೊಳವೆ ಬಾವಿಗಳಲ್ಲಿ ಅಂತರ್ಜಲ ಕೊರತೆ ಬಾಧಿಸಿದ್ದರೆ, ಉಳಿದ ಕೆಲವೇ ಕೆಲವು ಕೊಳವೆ ಬಾವಿಗಳು ಉಸಿರುಗಟ್ಟಿದ ವಾತಾ ವರಣದಲ್ಲಿ ನೀರನ್ನು ಭೂಮಿಯ ಮೇಲ್ಮೆöÊಗೆ ಚೆಲ್ಲುತ್ತಿವೆ.

ಮುಂದಿನ ಒಂದು ವಾರದಲ್ಲಿ ಮಳೆ ಬರದಿದ್ದರೆ ಬಹುತೇಕ ಕೊಳವೆ ಬಾವಿಗಳು ಕೈಚೆಲ್ಲುವುದರಲ್ಲಿ ಸಂದೇಹವೇ ಇಲ್ಲ ಎಂಬAತಾಗಿದ್ದು, ಇದು ಕೃಷಿಕರ ನೆಮ್ಮದಿಗೆಡಿಸಿದೆ.

ಬಾರದ ಮಳೆಯಿಂದಾಗಿ ಒಣಗಿದ ಇಳೆ... ಆಹಾರಕ್ಕಾಗಿ ಜಾನುವಾರುಗಳ ಗುಳೆ...!vಕಣಿವೆ: ಬೇಸಗೆಯ ಈ ದಿನಗಳ ನೇಸರನ ಪ್ರತಾಪಕ್ಕೆ ಭೂಮಿ ಒಣಗಲಾರಂಭಿಸಿದೆ. ಹಾಗಾಗಿ ಜಾನುವಾರುಗಳ ಮೇವಿಗು ತತ್ವಾರ ಉಂಟಾಗಿದೆ.

ಎಲ್ಲಿಯೂ ಹಸಿರ ಹೊದಿಕೆ ಸಿಗದ ಕಾರಣ ಜಾನುವಾರುಗಳು ಆಹಾರ ಅರಸಿ ರಸ್ತೆಯುದ್ದಕ್ಕೂ ಗುಳೆ ಹೋದಂತೆ ಕಂಡು ಬರುತ್ತಿದೆ. ರಸ್ತೆಯ ಬದಿಯಲ್ಲಿ ಕಬ್ಬಿನ ಹಾಲಿನ ಮಾರಾಟದ ಸ್ಥಳ, ಕಲ್ಲಂಗಡಿ ಹಣ್ಣು ಮಾರಾಟದ ಸ್ಥಳ ಹೀಗೆ ತಮಗೆ ತಿನ್ನಲು ಏನಾದರೂ ಸಿಕ್ಕಿತಾ ಎಂದು ಸಾಲು ಸಾಲಾಗಿ ಜಾನುವಾರುಗಳು ಸಂಚಾರ ಮಾಡುತ್ತಾ ಏನಾದರೂ ಕಂಡಲ್ಲಿ ಒಂದಷ್ಟು ತಿಂದು ಸಮಾಧಾನಪಟ್ಟು ಅಲ್ಲೇ ಕೆಲವು ಹೊತ್ತು ಮೆಲುಕು ಹಾಕಿ ತೆರಳುತ್ತಿವೆ.

ಈ ಹಿಂದೆ ಮೂರ್ನಾಲ್ಕು ದಶಕಗಳ ಮೊದಲು ಜಾನುವಾರುಗಳ ಮೇವಿಗೆಂದೇ ಗೋಮಾಳ ಗಳಿರುತ್ತಿದ್ದವು. ಅಷ್ಟೇ ಅಲ್ಲ, ನದಿಯ ತೀರದ ಉದ್ದಕ್ಕೂ ಜನ ಜಾನುವಾರು ಸಂಚಾರಕ್ಕೆ ಪೂರಕವಾದ ರಸ್ತೆಗಳಿದ್ದವು.

ಆದರೆ ಈಗ ಎಲ್ಲಾ ಕಡೆ ಜಮೀನು ಮಾಲೀಕರು ಕಾವೇರಿ ನದಿ ನೀರಿನಿಂದ ತಾವು ಬೆಳೆಯುವ ಬೆಳೆಗಳನ್ನು ಜಾನುವಾರುಗಳು ತಿನ್ನುತ್ತವೆ ಎಂಬ ಕಾರಣಕ್ಕೆ ಅಲ್ಲಲ್ಲಿ ಉದ್ದಕ್ಕೂ ಬೇಲಿಗಳನ್ನು ಹಾಕಿಕೊಂಡಿದ್ದಾರೆ.

ಕಾವೇರಿ ನದಿಯ ನೀರು ಹಾಗೂ ನದಿಯ ತೀರ ಇರುವುದು ಈ ಸ್ವಾರ್ಥದ ಜನರಿಗಾಗಿ ಎಂಬAತಾಗಿದ್ದು, ಕುಡಿವ ನೀರಿಗೆ ಜಾನುವಾರುಗಳು ಕಾವೇರಿ ನದಿಗೆ ಸರಾಗವಾಗಿ ತೆರಳಲು ಸಾಧ್ಯವಾಗದ ಪರಿಸ್ಥಿತಿಯನ್ನು ಕೆಲವರು ಮಾಡಿದ್ದಾರೆ.

ಹಾಗಾಗಿ ಬೀಡಾಡಿ ದನಗಳು ಕುಡಿಯುವ ನೀರು ಹಾಗೂ ಮೇವಿಗೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.