ರೂ. ೨೦.೮೫ ಕೋಟಿ ಹಣ, ೨೭ ಕೋಟಿ ಮೌಲ್ಯದ ಮದ್ಯ ವಶ!

ಬೆಂಗಳೂರು, ಮಾ. ೨೯: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾರ್ಚ್ ೧೬ ರಂದು ಮಾದರಿ ನೀತಿ ಸಂಹಿತೆ ಜಾರಿಗೆ ಬಂದಾಗಿನಿAದ ಕರ್ನಾಟಕದಲ್ಲಿ ೨೦.೮೫ ಕೋಟಿ ರೂಪಾಯಿ ಹಣ ಮತ್ತು ೨೭ ಕೋಟಿ ರೂಪಾಯಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಶುಕ್ರವಾರ ತಿಳಿಸಿದೆ. ಕರ್ನಾಟಕದಲ್ಲಿ ಏಪ್ರಿಲ್ ೨೬ ಮತ್ತು ಮೇ ೭ ರಂದು ಎರಡು ಹಂತಗಳಲ್ಲಿ ೨೮ ಕ್ಷೇತ್ರಗಳಿಗೆ ಲೋಕಸಭೆ ಚುನಾವಣೆ ನಡೆಯಲಿದೆ. ಇಲ್ಲಿಯವರೆಗೆ ವಶಕ್ಕೆ ಪಡೆಯಲಾದ ಒಟ್ಟು ಮೌಲ್ಯ ರೂ. ೬೨.೪೨ ಕೋಟಿ ಆಗಿದೆ. ಕರ್ನಾಟಕ ಮುಖ್ಯ ಚುನಾವಣಾಧಿ ಕಾರಿಗಳ ಕಚೇರಿ ಬಿಡುಗಡೆ ಮಾಡಿರುವ ಹೇಳಿಕೆ ಪ್ರಕಾರ, ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಫ್ಲೆöÊ್ಲಯಿಂಗ್ ಸ್ಕಾ÷್ವಡ್, ನಿಗಾವಣೆ ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು ೨೦.೮೫ ಕೋಟಿ ನಗದು, ೭೦.೮೬ ಲಕ್ಷ ಮೌಲ್ಯದ ಉಚಿತ ಉಡುಗೊರೆಗಳು, ೨೭ ಕೋಟಿಗೂ ಅಧಿಕ ಮೌಲ್ಯದ ರೂ. ೮.೬೩ ಲಕ್ಷ ಲೀಟರ್ ಮದ್ಯ ಮತ್ತು ೧.೪೭ ಕೋಟಿ ರೂ.ಗೂ ಅಧಿಕ ಮೌಲ್ಯದ ೨೧೧.೨೩ ಕೆಜಿ ಮಾದಕ ವಸ್ತುಗಳು, ೯ ಕೋಟಿ ರೂ.ಗೂ ಅಧಿಕ ಮೌಲ್ಯದ ೧೫ ಕೆಜಿಗಿಂತ ಹೆಚ್ಚಿನ ಚಿನ್ನ, ೨೭ ಲಕ್ಷ ರೂ.ಗೂ ಅಧಿಕ ಮೌಲ್ಯದ ೫೯.೦೪ ಕೆಜಿ ಬೆಳ್ಳಿ ಹಾಗೂ ೯ ಲಕ್ಷ ರೂ. ಮೌಲ್ಯದ ೨೧.೧೭ ಕ್ಯಾರೆಟ್ ವಜ್ರ ಮತ್ತಿತರ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಹಣ, ಮದ್ಯ, ಡ್ರಗ್ಸ್, ಚಿನ್ನಾಭರಣ ಉಚಿತ ವಸ್ತುಗಳ ವಶಕ್ಕೆ ಸಂಬAಧಿಸಿದAತೆ ೯೬೯ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಸ್ಕೂಟರ್ ಮೇಲೆ ಅಶ್ಲೀಲ ವೀಡಿಯೋ ರೀಲ್ಸ್; ಮೂವರ ಬಂಧನ

ನವದೆಹಲಿ, ಮಾ. ೨೯: ಸಾಮಾಜಿಕ ಮಾಧ್ಯಮದಲ್ಲಿ ಅಸಭ್ಯ ವೀಡಿಯೋ ವೈರಲ್ ಆದ ನಂತರ, ನೋಯ್ಡಾ ಪೊಲೀಸರು ಗುರುವಾರ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ ಮತ್ತು ಸಾರ್ವಜನಿಕ ಸ್ಥಳದಲ್ಲಿ ಉಪದ್ರವ ಮತ್ತು ಅಶ್ಲೀಲ ಕೃತ್ಯಗಳನ್ನು ಸೃಷ್ಟಿಸಿದ್ದಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಶ್ಲೀಲ ವೀಡಿಯೋ ಮಾಡಿ ಅಜಾಗರೂಕತೆಯಿಂದ ಸ್ಕೂಟರ್ ಓಡಿಸಿದ ಆರೋಪಿ ಜಮುನಾ ಪ್ರಸಾದ್ ಅಲಿಯಾಸ್ ಪಿಯೂಷ್ ಮತ್ತು ಅಶ್ಲೀಲ ಕೃತ್ಯವೆಸಗುತ್ತಿದ್ದ ವಿನೀತಾ ಮತ್ತು ಪ್ರೀತಿಯನ್ನು ಇಲ್ಲಿನ ವೇದವನ್ ಪಾರ್ಕ್ ಬಳಿ ಬಂಧಿಸಲಾಗಿದೆ. ಮಾರ್ಚ್ ೨೬ರಂದು ವೇದವನ್ ಪಾರ್ಕ್ ಎದುರು ಆರೋಪಿಗಳು ಅಜಾಗರೂಕತೆಯಿಂದ ಸ್ಕೂಟರ್ ಚಾಲನೆ ಮಾಡುತ್ತಿದ್ದು, ಹಿಂದೆ ಕುಳಿತಿದ್ದ ಮಹಿಳೆಯರು ಬಹಿರಂಗವಾಗಿ ಅಶ್ಲೀಲ ಕೃತ್ಯ ಎಸಗುತ್ತಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ವಯಂ ಪ್ರೇರಿತವಾಗಿ ಎಫ್‌ಐಆರ್ ದಾಖಲಿಸಲಾಗಿದೆ. ಗ್ರೇಟರ್ ನೋಯ್ಡಾದ ಕುಲೇಸರ ಗ್ರಾಮದ ಬಳಿ ವಾಸಿಸುವ ವಿನೀತಾ ಹೆಸರಿನಲ್ಲಿ ಸ್ಕೂಟರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಂಬರ್ ಮುಸ್ಸಾವೀರ್, ಉಗ್ರ ಮತೀನ್ ಫೋಟೋ ಬಿಡುಗಡೆ : ರೂ. ೧೦ ಲಕ್ಷ ಬಹುಮಾನ

ಬೆಂಗಳೂರು, ಮಾ. ೨೯: ರಾಮೇಶ್ವರಂ ಕೆಫೆ ಸ್ಫೋಟದ ಬಾಂಬರ್ ಮುಸ್ಸಾವೀರ್ ಹುಸೈನ್ ಶಾಜೀಬ್ ಹಾಗೂ ಉಗ್ರ ಅಬ್ದುಲ್ ಮತೀನ್ ಅಹ್ಮದ್ ತಾಹನ ಫೋಟೋ ಬಿಡುಗಡೆ ಮಾಡಿರುವ ಎನ್‌ಐಎ ಇವರ ಸುಳಿವು ನೀಡುವವರಿಗೆ ತಲಾ ೧೦ ಲಕ್ಷ ರೂಪಾಯಿ ಬಹುಮಾನ ನೀಡುವು ದಾಗಿ ಘೋಷಿಸಿದೆ. ರಾಮೇಶ್ವರಂ ಕೆಫ್ ಸ್ಫೋಟ ಪ್ರಕರಣ ಸಂಬAಧ ಬಾಂಬ್ ತಯಾರಿಕೆಯ ಪ್ರಮುಖ ಆರೋಪಿ ಮುಜಾಮುಲ್ ಶರೀಫ್ ಎಂಬಾತನನ್ನು ನಿನ್ನೆ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತಿಬ್ಬರ ಪ್ರಮುಖ ಆರೋಪಗಳ ಪತ್ತೆಗೆ ಬಲೆ ಬೀಸಿದ್ದಾರೆ. ಬಾಂಬರ್ ಮುಸಾವೀರ್ ಹುಸೇನ್ ಶಾಜಿಬ್ ಹಾಗೂ ಉಗ್ರ ಅಬ್ದುಲ್ ಮತೀನ್ ಅಹ್ಮದ್ ತಾಹಾನ ಫೋಟೋವನ್ನು ಬಿಡುಗಡೆ ಮಾಡಲಾಗಿದ್ದು, ಈ ಆರೋಪಿ ಗಳ ಸುಳಿವು ನೀಡಿದವರಿಗೆ ೧೦ ಲಕ್ಷ ಬಹುಮಾನ ನೀಡುವುದಾಗಿ ಎನ್‌ಐಎ ಘೋಷಣೆ ಮಾಡಿದೆ. ಬಾಂಬ್ ತಯಾರಿಕೆ ಮಾಡಿದ ಆರೋಪಿ ಮುಜಾಮಿಲ್ ಶರೀಫ್‌ನನ್ನು ೭ ದಿನಗಳ ಕಾಲ ಎನ್‌ಐಎ ವಶಕ್ಕೆ ಒಪ್ಪಿಸಿ ಕೋರ್ಟ್ ಆದೇಶ ಹೊರಡಿಸಿದೆ. ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಆರೋಪಿ ಮುಜಾಮಿಲ್ ಷರೀಫ್ ಬಾಂಬ್ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದನು. ಅಲ್ಲದೆ ಉಳಿದ ಆರೋಪಿಗಳ ಜೊತೆ ಸಂಪರ್ಕದ ಹೊಂದಿದ್ದ ಬಗ್ಗೆಯೂ ಎನ್‌ಐಎ ಮಾಹಿತಿ ಸಂಗ್ರಹ ಮಾಡಿತ್ತು. ಪ್ರಕರಣದಲ್ಲಿ ಗುರುತಿಸಲಾದ ಇತರ ಇಬ್ಬರು ಆರೋಪಿಗಳಿಗೆ ಷರೀಫ್ ಲಾಜಿಸ್ಟಿಕ್ ಬೆಂಬಲವನ್ನು ನೀಡಿದ್ದ ಎಂದು ಈ ವರೆಗಿನ ಎನ್‌ಐಎ ತನಿಖೆಗಳು ಬಹಿರಂಗಪಡಿಸಿವೆ.

ಎಲ್ಲಾ ೨೮ ಸ್ಥಾನಗಳಲ್ಲಿ ಗೆಲ್ಲುತ್ತೇವೆ-ಹೆಚ್.ಡಿ. ದೇವೇಗೌಡ

ಬೆಂಗಳೂರು, ಮಾ. ೨೯: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸಮನ್ವಯ ಸಭೆ ಬೆಂಗಳೂರಿನಲ್ಲಿAದು ನಡೆಯಿತು. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಹೆಚ್.ಡಿ. ಕುಮಾರಸ್ವಾಮಿ, ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು. ಸಭೆಯಲ್ಲಿ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, ೨೮ ಕ್ಷೇತ್ರ ಗೆಲ್ಲೋದು ನಮ್ಮ ಗುರಿಯಾಗಿದೆ. ಪರಸ್ಪರ ಮಾತನಾಡಿಕೊಂಡು ಕೆಲಸ ಮಾಡಬೇಕು ಎಂದು ಮೈತ್ರಿ ಪಕ್ಷಗಳ ನಾಯಕರಿಗೆ ಕರೆ ನೀಡಿದರು. ಸಭೆ ಬಳಿಕ ಮಾತನಾಡಿದ ಹೆಚ್.ಡಿ. ದೇವೇಗೌಡ, ಮೊದಲ ಬಾರಿಗೆ ಬಿಜೆಪಿ ಮತ್ತು ಜೆಡಿಎಸ್ ಸಮನ್ವಯ ಸಮಿತಿ ಸಭೆ ನಡೆಯಿತು. ಎಲ್ಲಾ ನಾಯಕರು ಹಾಜರಿದ್ದರು. ನಾವು ಕರ್ನಾಟಕದ ಜನತೆಗೆ ಒಂದು ಉತ್ತಮ ಸಂದೇಶವನ್ನು ನೀಡಿದ್ದೇವೆ - ಕಾಂಗ್ರೆಸ್ ವಿರುದ್ಧ ಹೋರಾಡಿ, ಅದನ್ನು ಸೋಲಿಸುತ್ತೇವೆ ಮತ್ತು ಎಲ್ಲಾ ೨೮ ಸ್ಥಾನಗಳಲ್ಲಿ ನಾವು ಗೆಲ್ಲುತ್ತೇವೆ ಎಂದರು. ಬಿ.ವೈ. ವಿಜಯೇಂದ್ರ ಮಾತನಾಡಿ, ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಆಶೀರ್ವಾದ ನಮಗೆ ಆನೆ ಬಲ ತಂದಿದೆ. ಈ ಸಭೆ ಬಹಳ ಹಿಂದೆಯೇ ಆಗಬೇಕಾಗಿತ್ತು. ಈ ಸಮ್ಮಿಲನ ಸುವರ್ಣಾಕ್ಷರದಲ್ಲಿ ಬರೆದಿಡುವ ಫಲಿತಾಂಶ ಆಗಲಿದೆ ಎಂದರು.