(ಕಾಯಪಂಡ ಶಶಿ ಸೋಮಯ್ಯ)
ಮಡಿಕೇರಿ, ಮಾ. ೨೯: ಕೊಡಗು ಜಿಲ್ಲೆಯಲ್ಲಿ ತಾ. ೩೦ರ ಶನಿವಾರದಿಂದ (ಇಂದಿನಿAದ) ಒಂದು ತಿಂಗಳ ಕಾಲ ದೇಶೀಯ ಕ್ರೀಡೆ ಹಾಕಿಯ ಕಲರವ ಆರಂಭಗೊಳ್ಳುತ್ತಿದೆ. ಕೊಡವ ಕೌಟುಂಬಿಕ ಹಾಕಿ ಕೇವಲ ಒಂದು ಕ್ರೀಡಾಸ್ಪರ್ಧೆ ಮಾತ್ರವಲ್ಲ, ಇದೊಂದು ರೀತಿಯ ಹಬ್ಬವೂ ಹೌದು. ಪುಟಾಣಿಗಳಿಂದ ಹಿಡಿದು ಇಳಿವಯಸ್ಸಿನವರ ಕೈಯ್ಯಲ್ಲೂ ಹಾಕಿ ಸ್ಟಿಕ್ ಕಂಡುಬರುತ್ತದೆ. ಬಾಲಕ - ಬಾಲಕಿಯರು, ಪುರುಷರು - ಮಹಿಳೆಯರು, ಕಿರಿಯರು-ಹಿರಿಯರು ಎಂಬ ಭೇದ-ಭಾವ ಇಲ್ಲಿರದು... ಒಟ್ಟಿನಲ್ಲಿ ಒಂದು ಕುಟುಂಬದ ತಂಡದ ಪರವಾಗಿ ಆಯಾ ಕುಟುಂಬಕ್ಕೆ ಸಂಬAಧಿಸಿದ ಯಾರೇ ಆದರೂ ಮೈದಾನಕ್ಕೆ ಇಳಿಯಬಹುದು ಆದರೆ ಕಲರ್ ಶೂಸ್, ಸ್ಟಾಕಿನ್ಸ್, ಚಿನ್‌ಪ್ಯಾಡ್, ಗೋಲ್‌ಕೀಪರ್‌ನ ಫುಲ್ ಕಿಟ್‌ನೊಂದಿಗೆ ಶಿಸ್ತು ಬದ್ಧವಾಗಿರಬೇಕಷ್ಟೇ...
ಬರೋಬ್ಬರಿ ೩೬೦ ಕುಟುಂಬ ತಂಡಗಳು. ಈ ತಂಡಗಳಲ್ಲಿ ತಲಾ ೧೬ ಆಟಗಾರರಂತೆ ಒಟ್ಟು ೫೭೬೦ ಮಂದಿ ಆಟಗಾರರು, ೩೬೦ ಅಥವಾ ಒಂದಷ್ಟು ಹೆಚ್ಚು ಗೋಲ್‌ಕೀಪರ್‌ಗಳು (ಒಂದೊAದು ತಂಡದಲ್ಲಿ ಇಬ್ಬರು ಗೋಲ್‌ಕೀಪರ್), ೩೬೦ ವ್ಯವಸ್ಥಾಪಕರು, ೩೬೦ ಕೋಚ್‌ಗಳು, ಈ ಪಂದ್ಯಾವಳಿ ನಿಭಾಯಿಸಲು ಸುಮಾರು ೨೦ಕ್ಕೂ ಅಧಿಕ ತೀರ್ಪುಗಾರರು, ಸುಮಾರು ೧೦ರಷ್ಟು ಟೆಕ್ನಿಕಲ್ ಅಫಿಷಿಯಲ್ಸ್, ಕಮೆಂಟೇಟರ್‌ಗಳು, ಬಾಲ್‌ಬಾಯ್ಸ್ಗಳು, ಬಹುತೇಕ ಬಗೆಬಗೆಯ ಕಲರ್ಸ್ ಸಹಿತವಾದ ಸಮವಸ್ತçದ ಆಕರ್ಷಣೆಯೊಂದಿಗೆ ಈ ಹಾಕಿ ಪಂದ್ಯಾವಳಿ.... ಅಲ್ಲಲ್ಲ... ‘ಹಾಕಿ ನಮ್ಮೆ’ ಶುರುವಾಗುತ್ತಿದೆ. ಇದು ಈ ಬಾರಿಯ ಹೈಲೈಟ್ಸ್... ಇಂತಹ ವಿಶೇಷತೆಗಳ ಸಹಿತವಾಗಿ ವರ್ಷಂಪ್ರತಿ ಜರುಗುವ ಕೊಡವ ಕೌಟುಂಬಿಕ ಹಾಕಿ ಉತ್ಸವದ ೨೪ನೇಯ ವರ್ಷದ ಪಂದ್ಯಾವಳಿ ಇದಾಗಿದೆ. ಈ ಬಾರಿ ನಡೆಯುತ್ತಿರುವ ಕುಂಡ್ಯೋಳAಡ ಹಾಕಿ ಕಾರ್ನಿವಲ್ ಸಾವಿರಾರು ಸಂಖ್ಯೆಯ ಆಟಗಾರರು, ಇದಕ್ಕೂ ಮಿಗಿಲಾಗಿ ಜಮಾಯಿಸುವ ಸಾವಿರಾರು ಸಂಖ್ಯೆಯ ಹಾಕಿ ಅಭಿಮಾನಿ ಗಳೆಲ್ಲರಿಗೂ ಹಾಕಿ ಹಬ್ಬಕ್ಕೆ ಶುಭ ಕಾಮನೆಗಳು... ೨೪ನೆಯ ವರ್ಷದ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಲು ಶತ ಪ್ರಯತ್ನದಲ್ಲಿ ತೊಡಗಿಸಿಕೊಂಡಿರುವ ಕುಂಡ್ಯೋಳAಡ ಕುಟುಂಬಸ್ಥರಿಗೂ, ಹಾಕಿ ಅಕಾಡೆಮಿಗೂ, ಎಲ್ಲಾ ಆಟಗಾರರಿಗೂ ಆಲ್ ದ ಬೆಸ್ಟ್ ಎಂಬುದು ಆರಂಭದಿAದಲೂ ಹಾಕಿ ಹಬ್ಬಕ್ಕೆ ಪೂರಕವಾಗಿ ಸ್ಪಂದಿಸಿಕೊAಡು ಬರುತ್ತಿರುವ ‘ಶಕ್ತಿ’ಯ ಹಾರೈಕೆಯೂ ಆಗಿದೆ.
ಹತ್ತು - ಹಲವಾರು ಕಾರ್ಯಕ್ರಮಗಳ ಸಮ್ಮಿಲನದೊಂದಿಗೆ ನಾಲ್‌ನಾಡ್‌ನ ನಾಪೋಕ್ಲುವಿನಲ್ಲಿ ಹಾಕಿ ಕಾರ್ನಿವಲ್ ರೀತಿಯಲ್ಲಿ ಈ ವರ್ಷದ ಕುಂಡ್ಯೋಳAಡ ಕಪ್ -೨೦೨೪ ತಾ.೩೦ರಿಂದ ಶುಭಾರಂಭಗೊಳ್ಳುತ್ತಿದ್ದು, ತಿಂಗಳ ಕಾಲ ಚುನಾವಣೆಯ ಭರಾಟೆಯ ನಡುವೆಯೂ ಹಾಕಿ ಪ್ರೇಮಿಗಳಿಗೆ ರಸದೌತಣ ನೀಡಲಿದೆ.
೧೯೯೭ರಲ್ಲಿ ಪಾಂಡAಡ ಕುಟ್ಟಪ್ಪÀ - ಕಾಶಿ ಸಹೋದರರ ಚಿಂತನೆಯAತೆ ೬೦ ಕುಟುಂಬಗಳ ಪಾಲ್ಗೊಳ್ಳುವಿಕೆ ಯೊಂದಿಗೆ ಆರಂಭಗೊAಡು ನಂತರದಲ್ಲಿ ನಿರೀಕ್ಷೆಗೂ ಮೀರಿ ಯಶಸ್ಸು ಕಂಡು ಲಿಮ್ಕಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಾಗಿ, ಇದೀಗ ೩೬೦ ಕುಟುಂಬಗಳ ಮೂಲಕ ಗಿನ್ನಿಸ್ ದಾಖಲೆಯ ಕದ ತಟ್ಟುತ್ತಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವ ನಡೆದು ಬರುತ್ತಿರುವ ಹಾದಿ ವಿಶೇಷತೆಯೊಂದಿಗೆ ಗಮನಾರ್ಹ ವಾಗಿದೆ. ಹತ್ತಾರು ವಿಶೇಷತೆಗಳೊಂದಿಗೆ ಸಹಸ್ರಾರು ಕ್ರೀಡಾಪ್ರೇಮಿಗಳನ್ನು ಒಂದೆಡೆ ಬೆಸೆಯುವಂತೆ ಮಾಡುವ ಹಾಗೂ ಇದರೊಂದಿಗೆ ಆಯಾ ಕುಟುಂಬದವರನ್ನೂ ಒಗ್ಗೂಡಿಸುವ ಕೊಡವ ಕೌಟುಂಬಿಕ ಹಾಕಿ ಉತ್ಸವ ವಿಶ್ವದ ಗಮನವನ್ನು ಸೆಳೆದಿರು ವಂತದ್ದಾಗಿದೆ. ೧೯೯೭ರಿಂದ ಸತತವಾಗಿ ನಡೆದುಕೊಂಡು ಬಂದ ಈ ಹಾಕಿ ಹಬ್ಬ ೨೦೧೯ರಿಂದ ೨೦೨೨ರ ತನಕ ಅನಿರೀಕ್ಷಿತವಾಗಿ ಎದುರಾದ ಪ್ರಾಕೃತಿಕ ದುರಂತ ಹಾಗೂ ಕೊರೊನಾ ಕಾರಣದಿಂದಾಗಿ ನಾಲ್ಕು ವರ್ಷ ನಡೆದಿರಲಿಲ್ಲ.
(ಮೊದಲ ಪುಟದಿಂದ) ಇದೀಗ ೨೦೨೩ರಿಂದ ಅಪ್ಪಚೆಟ್ಟೋಳಂಡ ಕಪ್‌ನ ಮೂಲಕ ಮತ್ತೆ ಪುನರಾರಂಭಗೊAಡಿದ್ದು, ಈ ಬಾರಿ ಕುಂಡ್ಯೋಳAಡ ಕಪ್ -೨೦೨೪ ಜರುಗುತ್ತಿದೆ. ಹಾಕಿ ಕಲರವಕ್ಕಾಗಿ ನಾಲ್‌ನಾಡ್‌ನ ನಾಪೋಕ್ಲು ಸಜ್ಜುಗೊಂಡಿದೆ.
ಊರು ಮೈದಾನ - ಬೃಹತ್ ಗ್ಯಾಲರಿ
ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದ ಆವರಣದ ಮೂರು ಮೈದಾನಗಳು ಪಂದ್ಯಾಟಕ್ಕೆ ಸಜ್ಜಾಗಿವೆ. ಮುಖ್ಯ ಮೈದಾನದಲ್ಲಿ ಈಗಾಗಲೇ ಬೃಹತ್ ಗ್ಯಾಲರಿಯೂ ನಿರ್ಮಾಣವಾಗಿದ್ದು, ೩೦ ಸಾವಿರಕ್ಕೂ ಅಧಿಕ ಮಂದಿ ಗ್ಯಾಲರಿಯಲ್ಲಿ ಕುಳಿತು ಪಂದ್ಯಾಟ ವೀಕ್ಷಿಸಬಹುದು. ತಮ್ಮ ತಮ್ಮ ತಂಡಗಳ ಪರವಾಗಿ ರಾಜ್ಯ - ರಾಷ್ಟçವನ್ನು ಪ್ರತಿನಿಧಿಸುತ್ತಿರುವ ರಾಷ್ಟç - ಅಂತರರಾಷ್ಟಿçÃಯ ಮಟ್ಟದ ಆಟಗಾರರೂ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಕಿ ಉತ್ಸವಕ್ಕೆ ಮೈದಾನದ ಆವರಣ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ.
ಬಿಸಿಲಧಗೆಯ ನಡುವೆಯೂ ಹಾಕಿಯ ರೋಚಕತೆಯನ್ನು ಕಣ್ತುಂಬಿಕೊಳ್ಳಲು ಕ್ರೀಡಾಭಿಮಾನಿಗಳು ಕಾತರದಿಂದಿದ್ದಾರೆ.
ಅಗತ್ಯ ವ್ಯವಸ್ಥೆಗಳು
ಸತತ ಮೂರನೇ ವರ್ಷವೂ ನಾಪೋಕ್ಲುವಿನಲ್ಲೇ ಕೌಟುಂಬಿಕ ಹಾಕಿ ಉತ್ಸವ ಜರುಗುತ್ತಿದ್ದು, ನಾಪೋಕ್ಲುವಿನಲ್ಲಿ ಶನಿವಾರದಿಂದ ಜನ- ವಾಹನ ದಟ್ಟಣೆ ಅಧಿಕವಾಗಲಿದೆ. ಮುಖ್ಯ ದ್ವಾರದಲ್ಲಿ ಬೃಹತ್ ಕಟೌಟ್ ಸೇರಿದಂತೆ ಮುಖ್ಯ ಮೈದಾನದ ಸುತ್ತಲೂ ವ್ಯವಸ್ಥಿತ ರೀತಿಯ ಗ್ಯಾಲರಿ ವಿ.ಐ.ಪಿ. ಗ್ಯಾಲರಿ, ವೇದಿಕೆ, ನೀರಿನ ವ್ಯವಸ್ಥೆ, ಶೌಚಾಲಯ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ವಾಣಿಜ್ಯ ಮಳಿಗೆಗಳೂ ತಲೆ ಎತ್ತುತ್ತಿವೆ.
ಉದ್ಘಾಟನಾ ಸಮಾರಂಭದಲ್ಲಿ ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಕುಂಡ್ಯೋಳAಡ ಕುಟುಂಬದ ಪಟ್ಟೆದಾರ ಎ. ನಾಣಯ್ಯ, ಸಂಸದ ಪ್ರತಾಪ್ ಸಿಂಹ, ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಎಂ.ಎಲ್.ಸಿ. ಸುಜಾ ಕುಶಾಲಪ್ಪ, ಸಾಹಿತಿ ಕಂಬೀರAಡ ಕಾವೇರಿ ಪೊನ್ನಪ್ಪ, ಹಾಕಿ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಡಾ. ಎ.ಬಿ. ಸುಬ್ಬಯ್ಯ, ಮಾಜಿ ಅಂತರರಾಷ್ಟಿçÃಯ ಹಾಕಿ ಆಟಗಾರರಾದ ಪೈಕೇರ ಕಾಳಯ್ಯ, ಒಲಂಪಿಯನ್ ನಿವೃತ್ತ ಲೆ/ಕ ಬಾಳೆಯಡ ಕೆ. ಸುಬ್ರಮಣಿ, ಇಬ್ನಿ ಸ್ಪಾ ರೆಸಾರ್ಟ್ನ ಶರ‍್ರೆ ಸೆಬಾಸ್ಟಿನ್ ಸೇರಿದಂತೆ ಹಾಲಿ, ಮಾಜಿ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ವೆಂಕಟ್‌ರಾಜಾ, ಎಸ್.ಪಿ. ಕೆ. ರಾಮರಾಜನ್, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಬೋಪಣ್ಣ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.