ಸುಂಟಿಕೊಪ್ಪ, ಮಾ. ೨೯: ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ ೫೬ನೇ ವರ್ಷದ ತೆರೆ ಮಹೋತ್ಸವ ಪ್ರಯುಕ್ತ ತಾ. ೩೦ ರಿಂದ ಏ. ೧ರವರೆಗೆ ವಿಶೇಷ ಪೂಜೆಗಳು ನಡೆಯಲಿದೆ. ದೇವಸ್ಥಾನ ಸಮಿತಿಯ ಅಧ್ಯಕ್ಷ ಉದಯಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬೆಳಿಗ್ಗೆ ೬.೪೫ ಗಂಟೆಗೆ ಗಣಪತಿ ಹವನ ೭.೧೫ ಗಂಟೆಗೆ ಶುದ್ಧಿ ಪುಣ್ಯಾಹ, ೭.೩೦ ಗಂಟೆಗೆ ಬಾವುಟ ಏರಿಸುವುದು, ಸಂಜೆ ೪ ಗಂಟೆಗೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವಿಕೆ, ರಾತ್ರಿ ೬ ಗಂಟೆಗೆ ಚಂಡೆಮೇಳ, ೭ ಗಂಟೆಗೆ ಶ್ರೀಮುತ್ತಪ್ಪ ವೆಳ್ಳಾಟಂ ನಡೆಯಲಿದೆ.

ತಾ.೩೧ ರಂದು ಬೆಳಿಗ್ಗೆ ೭ ಗಂಟೆಗೆ ವಾದ್ಯಮೇಳ, ೯ ಗಂಟೆಗೆ ವಿಷ್ಣುಮೂರ್ತಿ ವೆಳ್ಳಾಟಂ, ೧೧ ಗಂಟೆಗೆ ಶ್ರೀಶಾಸ್ತಪ್ಪನ ವೆಳ್ಳಾಟಂ ಕಳಿಗ ಪಾಟ್, ಅಂದಿವೇಳೆಕಳಸA ಸ್ವೀಕರಿಸುವುದು ವೆಳ್ಳೆಕಟ್ಟ್, ಮಧ್ಯಾಹ್ನ ೧ ಗಂಟೆಗೆ ಶ್ರೀ ಗುಳಿಗನ ವೆಳ್ಳಾಟಂ, ಶ್ರೀ ಗುಳಿಗನ ಕೋಲ, ೨ ಗಂಟೆಗೆ ಶ್ರೀಶಾಸ್ತಪ್ಪನ ಕೋಲ, ಸಂಜೆ ೪ ಗಂಟೆಗೆ ಅಡಿಯರ ಮೆರವಣಿಗೆ, ೭ ಗಂಟೆಗೆ ಶ್ರೀ ಮುತ್ತಪ್ಪ ವೆಳ್ಳಾಟಂ, ೮ ಗಂಟೆಗೆ ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ರಕ್ತ ಚಾಮುಂಡಿ ವೆಳ್ಳಾಟಂ, ೮.೩೦ ಗಂಟೆಗೆ ಶ್ರೀ ವಸೂರಿಮಾಲೆ ಸ್ನಾನಕ್ಕೆ ಹೊರಡುವುದು, ಬೆಳಗ್ಗಿನ ಜಾವ ೪ ಗಂಟೆಗೆ ಶ್ರೀಮುತ್ತಪ್ಪ ತಿರುವಪ್ಪನ ಕೋಲ ನಡೆಯಲಿದೆ. ೫ ಗಂಟೆಗೆ ಗಂಭೀರ ಪಟಾಕಿ.

ತಾ. ೧. ರಂದು ಬೆಳಿಗ್ಗೆ ೭ ಗಂಟೆಗೆ ಶ್ರೀ ರಕ್ತ ಚಾಮುಂಡಿಕೋಲ, ೮ ಗಂಟೆಗೆ ಶ್ರೀ ಮುತ್ತಪ್ಪ ಮತ್ತು ಶ್ರೀ ತಿರುವಪ್ಪ ದೇವರ ಪಳ್ಳಿವೇಟ, ೯. ಗಂಟೆಗೆ ಶ್ರೀ ವಿಷ್ಣುಮೂರ್ತಿಕೋಲ, ೧೦ ಗಂಟೆಗೆ ಶ್ರೀ ಚಾಮುಂಡೇಶ್ವರಿ ಕೋಲ, ೧೧ ಗಂಟೆಗೆ ಶ್ರೀ ವಸೂರಿ ಮಾಲೆ ಕೋಲ, ಮಧ್ಯಾಹ್ನ ೧೨ ಗಂಟೆಗೆ ಗುರುಶ್ರೀ ದರ್ಪಣ, ಅಪರಾಹ್ನ ೨ ಗಂಟೆಗೆ ಬಾವುಟ ಇಳಿಸಲಾಗುವುದೆಂದು ಅವರು ತಿಳಿಸಿದ್ದಾರೆ.