ಮಡಿಕೇರಿ, ಮಾ. ೨೯: ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯಿAದ ಖೇಲೋ ಇಂಡಿಯಾ, ಯೂಥ್ ಗೇಮ್ಸ್, ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್, ಖೇಲೋ ಇಂಡಿಯಾ ಮಹಿಳಾ ಲೀಗ್ಸ್, ನ್ಯಾಷನಲ್ ಗೇಮ್ಸ್, ಪೊಲೀಸ್ ಗೇಮ್ಸ್ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕ್ರೀಡೆಯಂತಹ ಹಲವಾರು ಯೋಗಾಸನ ಸ್ಪರ್ಧೆಗಳನ್ನು ಅಲ್ಲದೆ ರಾಷ್ಟ್ರೀಯ, ಏಷ್ಯನ್, ಅಂತರ ರಾಷ್ಟ್ರೀಯ ಹಾಗೂ ವಿಶ್ವ ಯೋಗಾಸನ ಸ್ಪರ್ಧೆಗಳಿಗೆ ನಿರ್ಣಾಯಕರಾಗಲು ಮೊದಲನೇಯ ಹಂತದಿAದ ಮೂರನೇ ಹಂತದವರೆಗಿನ ನಿರ್ಣಾಯಕರ ಕಾರ್ಯಾಗಾರವನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಬೆಂಕಿ ಪುಟ್ಟಮ್ಮ ಲಕ್ಷ್ಮಯ್ಯ ಸಭಾ ಭವನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ .
ಆಸಕ್ತರು ತಾ.೩೧ರ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ , ಮೊ ನಂ: ೭೦೦೯೮೬೫೧೧೯ ನ್ನು ಸಂಪರ್ಕಿಸಬಹುದು.
ಎಂದು ಯೋಗಾಸನ ಭರತ್ ಕಾರ್ಯಕಾರಿ ಸಮಿತಿಯ ರಾಷ್ಟ್ರೀಯ ಕನ್ವಿನಿಯರ್ ಆಗಿರುವ ಡಾ. ಎಂ. ನಿರಂಜನ ಮೂರ್ತಿ ತಿಳಿಸಿದ್ದಾರೆ.