ಮಡಿಕೇರಿ: ಜಿಲ್ಲಾ ಕಾನೂನು ಪ್ರಾಧಿಕಾರ, ವಕೀಲರ ಸಂಘ ಮತ್ತು ನ್ಯಾಯಾಂಗ ಇಲಾಖಾ ನೌಕರರ ಸಂಘದ ಸಂಯುಕ್ತ ಆಶ್ರಯದಲ್ಲಿ ನ್ಯಾಯಾಲಯದ ಆವರಣದಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರಾದ ಹೆಚ್.ಸಿ. ಶಾಮ್ ಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ವಿಶೇಷ ಆಹ್ವಾನಿತರಾಗಿ ಗೀತಾ ಶಾಮ್ ಪ್ರಸಾದ್ ಅವರು ಆಗಮಿಸಿದ್ದರು. ವಕೀಲೆ ಮೀನಾ ಕುಮಾರಿ ಅವರು ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ ಪ್ರಸಾದ್ ಕೆ.ಬಿ., ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿ.ಜೆ.ಎಂ. ಎನ್.ಬಿ. ಜಯಲಕ್ಷಿö್ಮ, ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ಮುನಿರತ್ನಮ್ಮ ಸಿ.ಎನ್. ಅಪರ ಸಿವಿಲ್ ನ್ಯಾಯಾಧೀಶರಾದ ನಾಗೇಶ್ ಎನ್.ಎ., ವಕೀಲರ ಸಂಘದ ನಿರ್ದೇಶಕ ಡಿ.ಎನ್. ಡೊಮಿನಿಕ್ ಉಪಸ್ಥಿತರಿದ್ದರು. ಆಡಳಿತಾಧಿಕಾರಿ ಕೆಂಪಯ್ಯ, ಹಿರಿಯ ವಕೀಲ ಸಿ.ಟಿ. ಜೋಸೆಫ್, ನ್ಯಾಯಾಂಗ ನೌಕರರ ಸಂಘದ ಅಧ್ಯಕ್ಷ ಶಮ್ಮಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎಲ್ಲ ಗಣ್ಯರು ಮಹಿಳೆಯರ ಸ್ಥಾನ, ಗೌರವ, ಸಾಧನೆ, ರಕ್ಷಣೆಯ ಬಗ್ಗೆ ಸ್ಫೂರ್ತಿದಾಯಕ ಮಾತುಗಳನ್ನಾಡಿ ಮಹಿಳೆಯರಲ್ಲಿ ಹುರುಪು ತುಂಬಿದರು.
ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳಾ ವಕೀಲರಿಗೂ ಮತ್ತು ಮಹಿಳಾ ಸಿಬ್ಬಂದಿಯವರಿಗೂ ವಿವಿಧ ಮನರಂಜನಾ ಸ್ಪರ್ಧೆ, ಬೆಂಕಿ ಇಲ್ಲದೆ ಅಡುಗೆ, ಹಾಡುಗಾರಿಕೆ, ರಂಗೋಲಿ, ಹೂಗುಚ್ಚ ಜೋಡಣೆ, ರಸಪ್ರಶ್ನೆ ಸ್ಪರ್ಧೆ ಯನ್ನು ಏರ್ಪಡಿಸಿದ್ದು, ವಿಜೇತರಿಗೆ ಬಹುಮಾನ ವಿತರಿಸ ಲಾಯಿತು. ಕಾನೂನು ಸೇವೆಗಳ ಪ್ರಾಧಿಕಾರದ ಜಯಪ್ಪ, ವಕೀಲರು ಹಾಗೂ ನ್ಯಾಯಾಲಯದ ಸಿಬ್ಬಂದಿ ವರ್ಗದವರು ಪಾಲ್ಗೊಂಡರು. ದಯಾ ಹೊನ್ನಪ್ಪ ಪ್ರಾರ್ಥಿಸಿ, ಶೀತಲ್ ಸ್ವಾಗತಿಸಿದರು. ಮೀನಾ ಕುಮಾರಿ ವಂದಿಸಿದರು. ಮೀನ ನಿರೂಪಿಸಿದರು.