ಕೋವರ್ ಕೊಲ್ಲಿ ಇಂದ್ರೇಶ್
ಕಾಸರಗೋಡು, ಮಾ. ೩೦: ಹತ್ಯೆಗೀಡಾಗಿದ್ದ ಮದರಸ ಶಿಕ್ಷಕ ರಿಯಾಜ್ ಮೌಲ್ವಿ (೩೪) ಅವರ ಕೊಲೆ ಪ್ರಕರಣದ ವಿಚಾರಣೆಯನ್ನು ನಡೆಸಿದ ಕಾಸರಗೋಡು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶನಿವಾರ ಮೂವರೂ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.
ಮಾರ್ಚ್ ೨೦, ೨೦೧೭ ರ ಮುಂಜಾನೆ ವೀರಾಜಪೇಟೆ ಮೂಲದ ಮದರಸಾ ಶಿಕ್ಷಕ ರಿಯಾಜ್ ಮೌಲ್ವಿ (೩೪) ಅವರು ಏಕಾಂಗಿಯಾಗಿ ವಾಸವಾಗಿದ್ದ ಕಾಸರಗೋಡಿನ ಮಸೀದಿಯ ಬಳಿಯಿರುವ ಅವರ ಮನೆಯೊಳಗೆ ನುಗ್ಗಿ ಚಾಕುವಿನಿಂದ ಇರಿದು ಕೊಲ್ಲಲಾಗಿತ್ತು. ಕೊಲೆ ಆರೋಪಿಗಳ ಪತ್ತೆಗೆ ಪೋಲೀಸರು ವಿಶೇಷ ತಂಡ ರಚಿಸಿದ್ದರು. ಈ ತಂಡವು ಮಾರ್ಚ್ ೨೪ ರಂದು ಆರೆಸ್ಸೆಸ್ ಕಾರ್ಯಕರ್ತರಾದ ಅಜೇಶ್ (೨೪), ನಿಧಿನ್ ಕುಮಾರ್ (೨೨) ಮತ್ತು ಕೂಡ್ಲುವಿನ ಅಖಿಲೇಶ್ (೨೬) ಅವರನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದರು.
ಈ ಪ್ರಕರಣದ ಆರೋಪಿಗಳ ಪರ ವಾದ ಮಂಡಿಸಿದ ವಕೀಲ ಬಿನು ಕುಳಮ್ಮಕಾಡ್, ''ಮೂವರಿಗೆ ಜಾಮೀನು ನೀಡದೆ ಅನ್ಯಾಯವಾಗಿ ಏಳು ವರ್ಷಗಳ ಕಾಲ ಜೈಲಿನಲ್ಲಿ ಇರಿಸಲಾಗಿದೆ. ಮೊದಲಿನಿಂದಲೂ ಪೊಲೀಸರು ಈ ಕೊಲೆಯನ್ನು ಆರ್‌ಎಸ್‌ಎಸ್ ಮಾಡಿದ್ದು ಎಂಬ ಊಹೆಯಿಂದಲೇ ತನಿಖೆ ಆರಂಭಿಸಿದ್ದರು. ಆರೋಪಿಗಳು ಮೃತರೊಂದಿಗೆ ಯಾವುದೇ ಪೂರ್ವ ಸಂಪರ್ಕವನ್ನು ಹೊಂದಿರಲಿಲ್ಲ ಮತ್ತು ಘಟನೆ ನಡೆದ ಸ್ಥಳದಲ್ಲಿ ಇರಲಿಲ್ಲ ಮತ್ತು ಆ ಸ್ಥಳದ ಪರಿಚಯವಿರಲಿಲ್ಲ ಎಂದು ವಾದಿಸಿದ್ದರು.
ಪಬ್ಲಿಕ್ ಪ್ರಾಸಿಕ್ಯೂಟರ್ ಟಿ ಶಾಜಿತ್ ಅವರು ವಾದ ಮಂಡಿಸಿ ಆರೋಪಿಗಳ ವಿರುದ್ಧ ದೃಢವಾದ ಸಾಕ್ಷಾö್ಯಧಾರಗಳಿವೆ. ಆರೋಪಿಗಳ ಮೊಬೈಲ್ ಗೋಪುರದ ಸ್ಥಳವು ಆ ಪ್ರದೇಶದಲ್ಲಿ ಅವರ ಉಪಸ್ಥಿತಿಯನ್ನು ತೋರಿಸುತ್ತದೆ, ಇದರ ಜೊತೆಗೆ, ಬಲವಾದ ಡಿಎನ್‌ಎ ಪುರಾವೆಗಳು ಇವೆ ಎಂದು ಹೇಳಿದ್ದರು. "ಮೊದಲ ಆರೋಪಿಯ ಉಡುಪಿನ ಮೇಲೆ ಮೃತರ ರಕ್ತದ ಕಲೆಗಳು ಪತ್ತೆಯಾಗಿವೆ.
(ಮೊದಲ ಪುಟದಿಂದ) ಬಲವಾದ ಡಿಎನ್‌ಎ ಮತ್ತು ವೈಜ್ಞಾನಿಕ ಪುರಾವೆಗಳಿವೆ. ೧೦೦ ಕ್ಕೂ ಹೆಚ್ಚು ಸಾಂದರ್ಭಿಕ ಸಾಕ್ಷö್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ವಾದಿಸಿದ್ದರು.
ಈ ಪ್ರಕರಣದಲ್ಲಿ ನ್ಯಾಯಾಲಯವು ೯೭ ಸಾಕ್ಷಿಗಳ ವಿಚಾರಣೆ ನಡೆಸಿದ್ದು ೨೧೫ ದಾಖಲಾತಿಗಳು ಮತ್ತು ೪೫ ಸಾಕ್ಷ್ಯದ ವಸ್ತುಗಳನ್ನು ಪರಿಶೀಲನೆಗೆ ಒಳಪಡಿಸಲಾಗಿತ್ತು. ಕಳೆದ ೭ ವರ್ಷಗಳಿಂದ ೭ ನ್ಯಾಯಾಧೀಶರು ಇದರ ವಿಚಾರಣೆ ನಡೆಸಿದ್ದರು.
ಕಾಸರಗೋಡು ಕೋಮು ಸೂಕ್ಷö್ಮ ಪ್ರದೇಶವಾಗಿದ್ದುದರಿಂದ ಮೌಲ್ವಿ ಅವರ ಮೃತದೇಹವನ್ನು ಕೊಡಗಿಗೆ ತಂದು ಮಣ್ಣು ಮಾಡಲಾಗಿತ್ತು. ೨೦೧೮ ರಲ್ಲಿ ಕೇರಳ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಮಸೀದಿಯ ಆಡಳಿತ ಮಂಡಳಿ ಹಾಗೂ ಮೃತರ ಪತ್ನಿ ಸೈದಾ ಅವರು ಆರೋಪಿಗಳನ್ನು ಯುಎಪಿಎ (Uಟಿಟಚಿತಿಜಿuಟ ಂಛಿಣiviಣies Pಡಿeveಟಿಣioಟಿ ಂಛಿಣ) ಅಡಿಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ನ್ಯಾಯಾಲಯ ಇದನ್ನು ಮಾನ್ಯ ಮಾಡಿರಲಿಲ್ಲ. ಈ ಕೊಲೆ ಪ್ರಕರಣದ ಎಲ್ಲಾ ಮೂವರೂ ಆರೋಪಿಗಳೂ ಕಳೆದ ೭ ವರ್ಷಗಳಿಂದ ಜೈಲಿನಲ್ಲಿಯೇ ಇದ್ದಾರೆ. ಸಾಕ್ಷಾö್ಯಧಾರ ಕೊರತೆಯಿಂದ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ.
ಕೋರ್ಟು ಖುಲಾಸೆ ಮಾಡಿರುವ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸದಿದ್ದರೆ ಆರೋಪಿಗಳು ಬಿಡುಗಡೆ ಆಗಲಿದ್ದಾರೆ.