(ಕಾಯಪಂಡ ಶಶಿ ಸೋಮಯ್ಯ)
ನಾಪೋಕ್ಲು, ಮಾ. ೩೦: ವರ್ಷಂಪ್ರತಿ ಜಿಲ್ಲೆಯಲ್ಲಿ ಸಂಭ್ರಮೋಲ್ಲಾಸದೊAದಿಗೆ ಜರುಗುವ ಕೊಡವ ಕುಟುಂಬಗಳ ನಡುವೆ ಆಯೋಜಿಸಲ್ಪಡುವ ಕೊಡವ ಕೌಟುಂಬಿಕ ‘ಹಾಕಿ ನಮ್ಮೆ’ ಇಂದು ನಾಲ್ನಾಡ್ ವ್ಯಾಪ್ತಿಯ ನಾಪೋಕ್ಲು ವಿನಲ್ಲಿ ಶುಭಾರಂಭಗೊAಡಿತು.
ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವ ಕೊಡಗಿನ ಮಟ್ಟಿಗೆ ವಿಶ್ವಕಪ್ ಕ್ರಿಕೆಟ್ನ ಮಾದರಿಯಲ್ಲಿಯೇ ಪ್ರತಿಷ್ಠಿತವಾದ ಹಾಕಿ ಪಂದ್ಯಾವಳಿಯೂ, ಕೇವಲ ಒಂದು ಕ್ರೀಡಾಕೂಟ ಮಾತ್ರವಲ್ಲದೆ ಉತ್ಸವದ ರೀತಿಯಲ್ಲಿ ಸುಮಾರು ಒಂದು ತಿಂಗಳ ತನಕ ನಡೆಯುವ ಕೌಟುಂಬಿಕ ಹಾಕಿ ಉತ್ಸವವನ್ನು ವೈಭವಯುತವಾಗಿ ಇಂದು ಉದ್ಘಾಟಿಸುವ ಮೂಲಕ ಚಾಲನೆ ನೀಡಲಾಯಿತು.
ಕೊಡವ ಹಾಕಿ ಅಕಾಡೆಮಿಯ ಸಹಭಾಗಿತ್ವದೊಂದಿಗೆ ವಾರ್ಷಿಕವಾಗಿ ವಿವಿಧ ಕುಟುಂಬಗಳು ಈ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದು, ೨೪ನೇಯ ವರ್ಷದ ಹಾಕಿ ಪಂದ್ಯಾವಳಿಯನ್ನು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಾಪೋಕ್ಲು ಮೂಲದ ಕುಂಡ್ಯೋಳAಡ ಕುಟುಂಬಸ್ಥರು ಆಯೋಜಿಸಿದ್ದಾರೆ. ‘‘ಕುಂಡ್ಯೋಳAಡ ಹಾಕಿ ಕಾರ್ನಿವಾಲ್ - ೨೦೨೪’’ಗೆ ಇಂದು ಸಾಂಪ್ರದಾಯಿಕ ಮೆರವಣಿಗೆ, ೨೪ನೇ ವರ್ಷದ (ಕಾಯಪಂಡ ಶಶಿ ಸೋಮಯ್ಯ)
ನಾಪೋಕ್ಲು, ಮಾ. ೩೦: ವರ್ಷಂಪ್ರತಿ ಜಿಲ್ಲೆಯಲ್ಲಿ ಸಂಭ್ರಮೋಲ್ಲಾಸದೊAದಿಗೆ ಜರುಗುವ ಕೊಡವ ಕುಟುಂಬಗಳ ನಡುವೆ ಆಯೋಜಿಸಲ್ಪಡುವ ಕೊಡವ ಕೌಟುಂಬಿಕ ‘ಹಾಕಿ ನಮ್ಮೆ’ ಇಂದು ನಾಲ್ನಾಡ್ ವ್ಯಾಪ್ತಿಯ ನಾಪೋಕ್ಲು ವಿನಲ್ಲಿ ಶುಭಾರಂಭಗೊAಡಿತು.
ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವ ಕೊಡಗಿನ ಮಟ್ಟಿಗೆ ವಿಶ್ವಕಪ್ ಕ್ರಿಕೆಟ್ನ ಮಾದರಿಯಲ್ಲಿಯೇ ಪ್ರತಿಷ್ಠಿತವಾದ ಹಾಕಿ ಪಂದ್ಯಾವಳಿಯೂ, ಕೇವಲ ಒಂದು ಕ್ರೀಡಾಕೂಟ ಮಾತ್ರವಲ್ಲದೆ ಉತ್ಸವದ ರೀತಿಯಲ್ಲಿ ಸುಮಾರು ಒಂದು ತಿಂಗಳ ತನಕ ನಡೆಯುವ ಕೌಟುಂಬಿಕ ಹಾಕಿ ಉತ್ಸವವನ್ನು ವೈಭವಯುತವಾಗಿ ಇಂದು ಉದ್ಘಾಟಿಸುವ ಮೂಲಕ ಚಾಲನೆ ನೀಡಲಾಯಿತು.
ಕೊಡವ ಹಾಕಿ ಅಕಾಡೆಮಿಯ ಸಹಭಾಗಿತ್ವದೊಂದಿಗೆ ವಾರ್ಷಿಕವಾಗಿ ವಿವಿಧ ಕುಟುಂಬಗಳು ಈ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದು, ೨೪ನೇಯ ವರ್ಷದ ಹಾಕಿ ಪಂದ್ಯಾವಳಿಯನ್ನು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಾಪೋಕ್ಲು ಮೂಲದ ಕುಂಡ್ಯೋಳAಡ ಕುಟುಂಬಸ್ಥರು ಆಯೋಜಿಸಿದ್ದಾರೆ. ‘‘ಕುಂಡ್ಯೋಳAಡ ಹಾಕಿ ಕಾರ್ನಿವಾಲ್ - ೨೦೨೪’’ಗೆ ಇಂದು ಸಾಂಪ್ರದಾಯಿಕ ಮೆರವಣಿಗೆ, ೨೪ನೇ ವರ್ಷದ ಬೋಪಣ್ಣ ಹಾಗೂ ತಂಡದವರು ಸ್ವಾಗತಿಸಿದರು.
ಆರಂಭಿಕವಾಗಿ ಮೈದಾನದ ಪ್ರವೇಶ ದ್ವಾರದ ಬಳಿ ನಿರ್ಮಿಸಿರುವ ಹಾಕಿ ಉತ್ಸವದ ಜನಕ ಪಾಂಡAಡ ಎಂ. ಕುಟ್ಟಪ್ಪ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮೈದಾನಕ್ಕೆ ಪ್ರವೇಶಿಸಲಾಯಿತು. ಇದಾದ ಬಳಿಕ ಕೊಡವ ಹಾಕಿ ಅಕಾಡೆಮಿಯ ಧ್ವಜ ಹಾಗೂ ಕುಂಡ್ಯೋಳAಡ ಕುಟುಂಬದ ಧ್ವಜಾರೋಹಣ ನೆರವೇರಿಸಲಾಯಿತು. ಈ ಸಂದರ್ಭ ೧೯೯೭ರಲ್ಲಿ ಪಾಂಡAಡ ಕಪ್ ಮೂಲಕ ಆರಂಭಗೊAಡು ಇದೀಗ ೨೪ನೇಯ ವರ್ಷದ ಕುಂಡ್ಯೋಳAಡ ಕಪ್ನ ಸವಿನೆನಪಿನಲ್ಲಿ ೨೪ ಸುತ್ತು ಆಗಸಕ್ಕೆ ಗುಂಡು ಹಾರಿಸಲಾಯಿತು. ಪಾಂಡAಡ ಬೋಪಣ್ಣರಿಂದ ಮೊದಲುಗೊಂಡು ಕುಂಡ್ಯೋಳAಡ ಕುಟುಂಬದವರು ಕೊನೆಯ ಗುಂಡು ಹಾರಿಸಿದರು.
ಪ್ರದರ್ಶನ ಪಂದ್ಯ
ಆರAಭಿಕವಾಗಿ ಮಡಿಕೇರಿ ಸಾಯಿ ಹಾಗೂ ಕೂರ್ಗ್ ಇಲವೆನ್ ಬಾಲಕಿಯರ ತಂಡಗಳ ನಡುವೆ ಪ್ರದರ್ಶನ ಪಂದ್ಯವೊAದನ್ನು ಆಯೋಜಿಸಲಾಗಿತ್ತು. ಈ ಪಂದ್ಯದಲ್ಲಿ ಮಡಿಕೇರಿ ಸಾಯಿ ೨-೦ ಗೋಲಿನ ಅಂತರದಿAದ ಜಯಗಳಿಸಿತು.
ಅಧಿಕೃತವಾದ ಉದ್ಘಾಟನೆ
ವೇದಿಕೆ ಸಮಾರಂಭವನ್ನು ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಈ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮದ ನಂತರ ಕುಂಡ್ಯೋಳAಡ ಕಪ್ ಹಾಕಿ ಕಾರ್ನಿವಾಲ್ಗೆ ಅಧಿಕೃತ ಚಾಲನೆ ನೀಡಲಾಯಿತು. ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡAಡ ಬೋಪಣ್ಣ ಅವರು ಬೆಳ್ಳಿಯ ಸ್ಟಿಕ್ನಿಂದ ಬೆಳ್ಳಿಯ ಬಾಲ್ ಅನ್ನು ತಳ್ಳುವ ಮೂಲಕ ೨೪ನೇಯ ವರ್ಷದ ಉತ್ಸವ ಶುಭಾರಂಭಗೊAಡಿತು. ಇವರೊಂದಿಗೆ ಇತರ ಎಲ್ಲಾ ಅತಿಥಿ ಗಣ್ಯರು, ಕುಂಡ್ಯೋಳAಡ ಕುಟುಂಬದ ಪ್ರಮುಖರು, ಹಾಕಿಕೂರ್ಗ್ನ ಪದಾಧಿಕಾರಿಗಳು, ತೀರ್ಪುಗಾರರ ಸಂಘದವರು, ತಾಂತ್ರಿಕ ಸಿಬ್ಬಂದಿಗಳು ಜತೆಗಿದ್ದರು.
(ಮೊದಲ ಪುಟದಿಂದ) ಈ ವೇಳೆ ಆಗಸಕ್ಕೆ ಬೆಲೂನ್ ಹಾಗೂ ಕುಂಡ್ಯೋಳAಡ ಕುಟುಂಬದ ಧ್ಜಜದ ಮಾದರಿಯ ಬೃಹತ್ ಗಾಳಿಪಟವನ್ನು ಹಾರಿ ಬಿಡಲಾಯಿತು.
ಪಾಲ್ಗೊಂಡಿದ್ದ ಪ್ರಮುಖರು
ಉದ್ಘಾಟನಾ ಸಮಾರಂಭ ಕುಂಡ್ಯೋಳAಡ ಕುಟುಂಬದ ಪಟ್ಟೆದಾರ ಎ. ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದವು. ಸಮಾರಂಭದಲ್ಲಿ ಹಾಕಿ ಉತ್ಸವ ಸಮಿತಿ ಅಧ್ಯಕ್ಷ ರಮೇಶ್ ಮುದ್ದಯ್ಯ, ಸಂಚಾಲಕ ದಿನೇಶ್ ಕಾರ್ಯಪ್ಪ ಸೇರಿದಂತೆ ಶಾಸಕ ಎ.ಎಸ್. ಪೊನ್ನಣ್ಣ, ಎಂಎಲ್ಸಿ ಸುಜಾ ಕುಶಾಲಪ್ಪ, ಪಾಂಡAಡ ಬೋಪಣ್ಣ, ಜಿಲ್ಲಾಧಿಕಾರಿ ವೆಂಕಟ್ರಾಜಾ, ಎಎಸ್ಪಿ ಸುಂದರ್ರಾಜ್, ಹಾಕಿಕರ್ನಾಟಕದ ಕಾರ್ಯದರ್ಶಿ ಒಲಂಪಿಯನ್ ಡಾ. ಎ.ಬಿ. ಸುಬ್ಬಯ್ಯ, ಒಲಂಪಿಯನ್ ಲೆ.ಕ. ಬಾಳೆಯಡ ಕೆ. ಸುಬ್ರಮಣಿ, ಅಂತರರಾಷ್ಟಿçÃಯ ಆಟಗಾರ ಪೈಕೇರ ಕಾಳಯ್ಯ, ಸಾಹಿತಿ ಕಂಬೀರAಡ ಕಾವೇರಿ ಪೊನ್ನಪ್ಪ, ಪ್ರಾಯೋಜಕರಾದ ಇಬ್ನಿಸ್ಪಾ ರೆಸಾರ್ಟ್ನ ಶರ್ರಿ ಸಬಾಸ್ಟಿನ್ ಪರವಾಗಿ ಕುಪ್ಪಂಡ ವಿನು ಮುದ್ದಪ್ಪ, ಪ್ರಿಯಾಂಕ, ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡAಡ ಸಿ. ನಾಣಯ್ಯ, ಹಾಕಿ ಕೂರ್ಗ್ನ ಅಧ್ಯಕ್ಷ ಪಳಂಗAಡ ಲವ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೆರ ಬಾಂಡ್ ಗಣಪತಿ, ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ವೆಸ್ಟ್ಕೊಳಕೇರಿ ಗ್ರಾಮಾಭಿವೃದ್ಧಿ ಸಂಘದ ಅಧ್ಯಕ್ಷ ಕೇಟೋಳಿರ ಕುಟ್ಟಪ್ಪ, ಕೆಪಿಎಸ್ ಶಾಲಾ ಪ್ರಾಂಶುಪಾಲ ಮೇದುರ ವಿಶಾಲ್, ನಾಪೋಕ್ಲು ಗ್ರಾ.ಪಂ. ಅಧ್ಯಕ್ಷೆ ವನಜಾಕ್ಷಿ, ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಪಂದ್ಯಾವಳಿ ನಿರ್ದೇಶಕ ಅಂಜಪರವAಡ ಕುಶಾಲಪ್ಪ, ಅಂಪರ್ಸ್ ಮ್ಯಾನೇಜರ್ ಬಡಕಡ ದೀನಾ ಪೂವಯ್ಯ ಮತ್ತಿತರರು ಹಾಜರಿದ್ದರು.ಕೊಡವರಿಗೂ ಹಾಕಿ ಆಟಕ್ಕೂ ಭಾವನಾತ್ಮಕ ಸಂಭAಧವಿದೆ. ಹಾಕಿ ಕೊಡವ ಪರಂಪರೆಯ ಒಂದು ಭಾಗ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು.
೨೪ನೇ ವರ್ಷದ ಕೊಡವ ಕೌಟುಂಬಿಕ ಕುಂಡ್ಯೋಳAಡ ಕಪ್ ಹಾಕಿ ನಮ್ಮೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೊಡವ ಸಂಸ್ಕೃತಿ, ಆಚಾರ, ವಿಚಾರ, ಪರಂಪರೆಯ ಬೆಳವಣಿಗೆಯೊಂದಿಗೆ ಸೂರ್ಯ, ಚಂದ್ರ ಇರುವವರೆಗೆ ಹಾಕಿಯನ್ನು ಕೂಡ ಮುನ್ನಡೆಸಬೇಕು ಎಂದು ಅವರು ಸಲಹೆ ನೀಡಿದರು.
ಕೊಡವ ಹಾಕಿ ಅಕಾಡೆಮಿ ಶಾಶ್ವತ ಹಾಕಿ ಮೈದಾನ ನಿರ್ಮಿಸಲು ಜಾಗ ನೀಡುವಂತೆ ಮನವಿ ಮಾಡಿದ ಹಿನ್ನಲೆಯಲ್ಲಿ ವೀರಾಜಪೇಟೆ ಸಮೀಪದ ತೋರದಲ್ಲಿ ಐದು ಎಕರೆ ಜಾಗವನ್ನು ಗುರುತಿಸಿ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪ್ರಕ್ರಿಯೆ ಹಲವು ಸಮಯದ ಹಿಂದೆಯೇ ನಡೆದಿದ್ದು, ಪ್ರಗತಿಯಲ್ಲಿದೆ ಎಂದು ಮಾಹಿತಿಯಿತ್ತರು.
ಜಿಲ್ಲೆಯಲ್ಲಿ ಹೆಚ್ಚಿನ ಪ್ರತಿಭಾವಂತರಿದ್ದಾರೆ. ಆದರೆ ಅವರಿಗೆ ಸರಿಯಾದ ಮೂಲಭೂತ ಸೌಲಭ್ಯಗಳ ಕೊರತೆಯಿದೆ. ಅದನ್ನು ನೀಗಿಸುವ ಉದ್ದೇಶದಿಂದ ಹಾಕಿಯೊಂದಿಗೆ ಟೆನ್ನಿಸ್, ಬಾಕ್ಸಿಂಗ್ಗೆ ಪ್ರೊತ್ಸಾಹ ನೀಡುವ ಚಿಂತನೆಯಿದೆ. ಟೆನ್ನಿಸ್ ಅಕಾಡೆಮಿ ಆರಂಭದೊAದಿಗೆ ಎಲ್ಲಾ ಹೋಬಳಿಗಳಲ್ಲಿ ಒಂದೊAದು ಮೈದಾನ ಗುರುತಿಸಿ ಅದನ್ನು ಪುನಶ್ಚೇತನಗೊಳಿಸುವುದರ ಮೂಲಕ ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ವಿಚಾರವೂ ಹಲವು ಸಮಯದಿಂದ ನಡೆದಿದೆ ಎಂದರು.
ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಬೋಪಣ್ಣ ಮಾತನಾಡಿ ೧೯೯೫ರಲ್ಲಿ ಪಾಡಂಡ ಕುಟ್ಟಪ್ಪರವರು ಬ್ಯಾಂಕ್ ಉದ್ಯೋಗದಿಂದ ನಿವೃತ್ತಿಯಾದ ಬಳಿಕ ಕೊಡವ ಕುಟುಂಬಗಳ ಒಗ್ಗಟ್ಟು ಮತ್ತು ರಾಷ್ಟç ಮತ್ತು ಅಂತರಾಷ್ಟಿçÃಯ ಮಟ್ಟದಲ್ಲಿ ಪ್ರತಿನಿಧಿಸುತ್ತಿರುವ ಕೊಡವ ಆಟಗಾರರ ಪ್ರತಿಭೆಯನ್ನು ತಮ್ಮ ಜಿಲ್ಲೆಯಲ್ಲಿ ತೋರಿಸುವ ಮೂಲಕ ಯುವ ಪೀಳಿಗೆಗೆ ಹಾಕಿ ಆಟದ ಬಗ್ಗೆ ಒಲವು ಮೂಡಿಸಲು ೧೯೯೭ರಲ್ಲಿ ಮೊದಲ ಬಾರಿಗೆ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟಕ್ಕೆ ಚಾಲನೆ ನೀಡಿದರು. ಆ ಸಂದರ್ಭದಲ್ಲಿ ಅದಕ್ಕೆ ಹಲವು ಅಪಸ್ವರಗಳು ಕೇಳಿ ಬಂತು. ಆದರೆ ಅವರು ಅಂದು ಮಾಡಿದ ದೃಢ ನಿರ್ಧಾರ ಇದು ೩೬೦ ಕೊಡವ ಕುಟುಂಬ ತಂಡಗಳು ಭಾಗವಹಿಸುವಂತಾಗಿದೆ ಎಂದರು. ಇದು ಇನ್ನೂ ಹೆಮ್ಮರವಾಗಿ ಬೆಳೆಯಲು ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ವೆಂಕಟರಾಜಾ ಮಾತನಾಡಿ ನಾನು ಈ ಕಾರ್ಯಕ್ರಮಕ್ಕೆ ಹಾಕಿ ಆಟಗಾರನಾಗಿ ಆಗಮಿಸಿದ್ದೇನೆ. ಹಾಕಿ ಆಟವನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತಿ ರುವುದು ಹೆಮ್ಮೆಯೆನಿಸಿದೆ. ಈ ಅದ್ಧೂರಿ ಕ್ರೀಡಾಕೂಟಕ್ಕೆ ಜಿಲ್ಲಾಡಳಿತದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಬ್ಯಾAಕ್ ಉದ್ಯೋಗದಿಂದ ನಿವೃತ್ತಿಯಾದ ಬಳಿಕ ಕೊಡವ ಕುಟುಂಬಗಳ ಒಗ್ಗಟ್ಟು ಮತ್ತು ರಾಷ್ಟç ಮತ್ತು ಅಂತರಾಷ್ಟಿçÃಯ ಮಟ್ಟದಲ್ಲಿ ಪ್ರತಿನಿಧಿಸುತ್ತಿರುವ ಕೊಡವ ಆಟಗಾರರ ಪ್ರತಿಭೆಯನ್ನು ತಮ್ಮ ಜಿಲ್ಲೆಯಲ್ಲಿ ತೋರಿಸುವ ಮೂಲಕ ಯುವ ಪೀಳಿಗೆಗೆ ಹಾಕಿ ಆಟದ ಬಗ್ಗೆ ಒಲವು ಮೂಡಿಸಲು ೧೯೯೭ರಲ್ಲಿ ಮೊದಲ ಬಾರಿಗೆ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟಕ್ಕೆ ಚಾಲನೆ ನೀಡಿದರು. ಆ ಸಂದರ್ಭದಲ್ಲಿ ಅದಕ್ಕೆ ಹಲವು ಅಪಸ್ವರಗಳು ಕೇಳಿ ಬಂತು. ಆದರೆ ಅವರು ಅಂದು ಮಾಡಿದ ದೃಢ ನಿರ್ಧಾರ ಇದು ೩೬೦ ಕೊಡವ ಕುಟುಂಬ ತಂಡಗಳು ಭಾಗವಹಿಸುವಂತಾಗಿದೆ ಎಂದರು. ಇದು ಇನ್ನೂ ಹೆಮ್ಮರವಾಗಿ ಬೆಳೆಯಲು ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ವೆಂಕಟರಾಜಾ ಮಾತನಾಡಿ ನಾನು ಈ ಕಾರ್ಯಕ್ರಮಕ್ಕೆ ಹಾಕಿ ಆಟಗಾರನಾಗಿ ಆಗಮಿಸಿದ್ದೇನೆ. ಹಾಕಿ ಆಟವನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತಿ ರುವುದು ಹೆಮ್ಮೆಯೆನಿಸಿದೆ. ಈ ಅದ್ಧೂರಿ ಕ್ರೀಡಾಕೂಟಕ್ಕೆ ಜಿಲ್ಲಾಡಳಿತದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ತAಡದಲ್ಲಿ ಕೊಡವ ಹಾಕಿ ಆಟಗಾರರ ಕೊರತೆಯಿದೆ ಈ ಬಗ್ಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಮನ್ ಸುಬ್ರಮಣಿ ಮಾತನಾಡಿ ಆಟದಲ್ಲಿ ಸೋಲು, ಗೆಲುವು ಸಹಜ. ಎಲ್ಲರೂ ಸೌಹಾರ್ಧಯುತವಾಗಿ ಪಾಲ್ಗೊಳ್ಳುವುದರ ಮೂಲಕ ಹಾಕಿ ನಮ್ಮೆಗೆ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು. ಕುಂಡ್ಯೋಳAಡ ಹಾಕಿ ನಮ್ಮೆಯ ಸಂಚಾಲಕ ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ ಹಾಕಿ ನಮ್ಮೆ ಆಯೋಜನೆ ಹಾಗೂ ಚಿಂತನೆಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂಡ್ಯೋಳAಡ ಕುಂಟುAಬದ ಪಟ್ಟೆದಾರ ನಾಣಯ್ಯ ವಹಿಸಿದ್ದರು.
ಕುಂಡ್ಯೋಳAಡ ಹೇಮಾ ಪೂವಣ್ಣ ಪ್ರಾರ್ಥನೆ, ಕುಂಡ್ಯೋಳAಡ ಹಾಕಿ ಸಮಿತಿ ಅಧ್ಯಕ್ಷ ರಮೇಶ್ ಮುದ್ದಯ್ಯ ಸ್ವಾಗತ, ಚೋಕಿರ ಅನಿತಾ ಪ್ರವೀಣ್ ನಿರೂಪಿಸಿ, ಕುಂಡ್ಯೋಳAಡ ಹಾಕಿ ಸಮಿತಿ ಕಾರ್ಯದರ್ಶಿ ವಿಶೂ ಪೂವಯ್ಯ ವಂದಿಸಿದರು.
- ಪಿ.ವಿ ಪ್ರಭಾಕರ್,
ದುಗ್ಗಳ ಸದಾನಂದ, ಚಿತ್ರ ಸಹಕಾರ ಕುಶಾಲ್ ಫ್ರೋಟೋಗ್ರಾಫಿ
ರೋಮಾಂಚಕ ಪ್ರದರ್ಶನ ಪಂದ್ಯ
ಉದ್ಘಾಟನಾ ಕಾರ್ಯಕ್ರಮದ ಪ್ರಯುಕ್ತ ಇಂಡಿಯನ್ ನೇವಿ ಹಾಗೂ ಕೂರ್ಗ್ ಇಲವೆನ್ ತಂಡದ ನಡುವೆ ಏರ್ಪಡಿಸಿದ್ದ ಪ್ರದರ್ಶನ ಪಂದ್ಯ ರೋಮಾಂಚಕವಾಗಿತ್ತು.
ಇAಡಿಯನ್ ನೇವಿ ತಂಡದಲ್ಲಿ ಕೊಡಗಿನ ಆಟಗಾರರು ಸೇರಿದ್ದರು. ಕೂರ್ಗ್ಇಲವೆನ್ ಪರ, ಮಾಜಿ ಒಲಂಪಿಯನ್ಗಳಾದ ಸಣ್ಣುವಂಡ ಕೆ. ಉತ್ತಪ್ಪ, ಚೇಂದAಡ ನಿಕಿನ್ ತಿಮ್ಯಯ್ಯ, ಕಳೆದ ಬಾರಿಯ ಕೌಟುಂಬಿಕ ಹಾಕಿ ಉತ್ಸವದ ಸರಣಿ ಪುರುಷೋತ್ತಮ ಕುಪ್ಪಂಡ ಸೋಮಯ್ಯ ಸೇರಿದಂತೆ ಹಲವು ಖ್ಯಾತನಾಮ ಆಟಗಾರರು ಭಾಗವಹಿಸಿದ್ದರು.
ಸಮಬಲದ ಹೋರಾಟದ ಈ ಪಂದ್ಯ ೨-೨ ಗೋಲಿನಿಂದ ಡ್ರಾ ಆಯಿತು. ಕೂರ್ಗ್ ಇಲವೆನ್ ಪರ ಮೇಚಂಡ ಚಿರನ್ ಮೇದಪ್ಪ ಗೋಲು ಬಾರಿಸಿದರು. ಎರಡು ಪಂದ್ಯಗಳ ತೀರ್ಪುಗಾರರಾಗಿ ಬೊಟ್ಟಂಗಡ ಕೌಶಿಕ್, ಪಾಂಡಿರ ಸುಬ್ರಮಣಿ, ಕರವಂಡ ಅಪ್ಪಣ್ಣ, ಅಪ್ಪಚೆಟ್ಟೋಳಂಡ ಅಯ್ಯಪ್ಪ ಕಾರ್ಯನಿರ್ವಹಿಸಿದರು.
ವೀಕ್ಷಕ ವಿವರಣೆ
ಸಮಾರಂಭ ಹಾಗೂ ಪಂದ್ಯದ ವೀಕ್ಷಕ ವಿವರಣೆಯನ್ನು ಚೆಪ್ಪುಡೀರ ಕಾರ್ಯಪ್ಪ, ಮಾಳೇಟಿರ ಶ್ರೀನಿವಾಸ್, ಚೋಕಿರ ಅನಿತಾ, ಕುಲ್ಲೇಟಿರ ಅರುಣ್ ಬೇಬ, ಅಜ್ಜೇಟಿರ ವಿಕ್ರಂ ಉತ್ತಪ್ಪ, ಮಣವಟ್ಟಿರ ದಯಾ, ಮೂಡೆರ ಕಾಳಯ್ಯ ವಿವಿಧ ಮಾಹಿತಿಗಳ ಸಹಿತವಾಗಿ ನೀಡಿದರು.ಮುಕ್ಕೋಡ್ಲು ವ್ಯಾಲಿಡ್ಯೂ ಅಸೋಸಿಯೇಷನ್ನ ತಂಡದಿAದ ಕತ್ತಿಯಾಟ್ನಂತಹ ಸಾಂಸ್ಕೃತಿಕ ಪ್ರದರ್ಶನ ನಡೆಯಿತು.