ಪ್ರಕೃತಿಯ ಅಪೂರ್ವ ಚೆಲುವು. ಆ ಹಳ್ಳಿಯನ್ನು ನೋಡುವುದೆಂದರೆ ಹೊಸ ಚೈತನ್ಯ ತುಂಬಿದAತೆ. ಹಸಿರು ನಮ್ಮ ಉಸಿರು ಎಂಬ ನುಡಿಗೆ ಪೂರಕವಾಗಿದ್ದ ಹಳ್ಳಿಯದು. ಹಸಿರು ವನರಾಶಿ ಯಿಂದ ನದಿ, ತೊರೆ, ಝರಿ ಗಳಿಂದ ಕಂಗೊಳಿಸುತ್ತಿದ್ದ ಸ್ವರ್ಗವೇ ಆ ಹಳ್ಳಿ. ತನ್ನನ್ನು ನಂಬಿ ಬಂದ ಊರಿನ ಜನರಿಗೆ ಯಾವುದೇ ಅನ್ಯಾಯವಾಗದಂತೆ ಉದರದೊಳಗಿಟ್ಟು ಸಲಹುತ್ತಿದ್ದ ಭೂಮಿ ತಾಯಿ ಆಕೆ.
ಹೆತ್ತಾಕೆ ಹೆಣ್ಣು, ನಿಂತ ನೆಲ ಹೆಣ್ಣು, ಚೆಂದದ ಹೂವಿಗೆ ಹೆಸರಿಡಲು ಬೇಕು ಇದೇ ಹೆಣ್ಣು. ಆದರೇಕೋ ಈ ಊರ ಪಾದ ಸ್ಪರ್ಶ ಮಾಡಿದ ಚುಕ್ಕಿ ಮಂಕಾಗಿ ದ್ದಳು.
ನಿಂತರೆ ಶಿಲಾಬಾಲಿಕೆ, ಕುಂತರೆ ಮಹಾರಾಣಿ ಎಂಬAತೆ ಅವಳ್ಯಾರಿಗೂ ಕಾಣಲಿಲ್ಲ. ನೀನು ನನ್ನೆದೆಯ ಪಟ್ಟದರಸಿ ಎಂದು ಅದ್ಯಾವ ಮೀಸೆ ಚಿಗುರಿದ ಹೈದ ಅವಳನ್ನು ಹೊಗಳಲೇ ಇಲ್ಲ.
ಸುಟ್ಟ ರೊಟ್ಟಿಯ ಬೂದಿ ಕೈ ಮೇಲೆ ಬಿದ್ದಾಗಲೂ ಅವಳ ಅರಿವಿಗೆ ಬಾರದಷ್ಟು ಕಪ್ಪಾಗಿ ಹುಟ್ಟಿದ್ದೇ ಅವಳಿಗೆ ಶಾಪವಾದಂತೆ ತೋರುತ್ತಿತ್ತು. ಹೃದಯದಲ್ಲಿ ದೋಷವಿದ್ದರೆ ಶಾಸ್ತç ಏನು ಮಾಡಲು ಸಾಧ್ಯವಿಲ್ಲ. ಶಾಸ್ತçದಲ್ಲಿ ದೋಷ ವಿದ್ದರೆ ತಿದ್ದಬಹುದಿತ್ತೇನೋ. ಆದರೆ ಚುಕ್ಕಿಯ ಮುಖ ಚಹರೆ ತಿದ್ದಲು ಸಾಧ್ಯವಿರಲಿಲ್ಲ.
ತೊಟ್ಟಿಲಲ್ಲಿ ತೂಗುವ ಮೊದಲೇ ಬಣ್ಣ ಅವಳ ಜೀವನ ವನ್ನೇ ಮಾಸಿದಂತೆ ಮಾಡಿ ಬಿಟ್ಟಿತ್ತು. ಊರಿಗೆ ಊರೇ ಚುಕ್ಕಿಯ ಬಣ್ಣದ ಕುರಿತು ನಾನಾ ರೀತಿ ಅಪಹಾಸ್ಯ ಮಾಡಿದರೂ, ಆಕೆಯ ಹೆತ್ತವರಿಗೆ ಅವಳು ವiಹಾಲಕ್ಷಿö್ಮಯೇ ಆಗಿದ್ದಳು. ಅವಳು ಮುದ್ದು-ಮುದ್ದಾಗಿ ಬೆಳೆದು ನಿಂತಿರುವುದನ್ನು ನೋಡುವುದೇ ಹೆತ್ತಾಕೆಗೆ ಹಬ್ಬವಾಗಿತ್ತು.
ಶಾಲಾ ದಿನಗಳಲ್ಲಿ ಅದೆಷ್ಟೋ ಟೀಕೆಗಳನ್ನು ಕಿವಿಯೊಳಗೆ ಹಾಕಿಸಿ ಕೊಂಡು, ಹೃದಯವನ್ನು ಕಬ್ಬಿಣದ ಸಲಿಗೆ ಮಾಡಿಕೊಂಡು, ಭಾವನೆ ಗಳನ್ನು ಅದರೊಳಗೆ ಬಂದಿ ಯನ್ನಾಗಿಸಿ ಮನದೊಳಗೆ ನರಳುತ್ತಿದ್ದಳು.
ಹೆತ್ತವರ ಮುಂದೆ ನಗುವೆಂಬ ಮುಖವಾಡವನ್ನು ತನಗೆ ತಾನೆ ತೊಡಿಸಿಕೊಂಡು ನಲಿಯುತ್ತಿದ್ದಳು.
ಲಾವಣ್ಯಗಾರ್ತಿ ಅವಳಾಗಿ ದ್ದರೆ, ಕೆಂಪು ಸೇಬಿನಂತಹ ಗಲ್ಲ ಅವಳಿಗಿದ್ದಿದ್ದರೆ, ಗಲ್ಲದಲ್ಲಿನ ಗುಳಿ ಪಡ್ಡೆ ಹುಡುಗರ ನಿದ್ರೆ ಕೆಡಿಸುತ್ತಿದ್ದರೆ, ಚುಕ್ಕಿ ಹಸೆಮಣೆ ಏರಿಯಾಗುತ್ತಿದ್ದಳೇನೋ !
ಅದೆಷ್ಟೋ ಬಾರಿ ಚುಕ್ಕಿಯ ಅಮ್ಮ ಅವಳ ಬಳಿ ಹೇಳಿದ್ದರು.
“ಚುಕ್ಕಿ ಕಪ್ಪು ಬಣ್ಣ ಶಕ್ತಿ ಸ್ವರೂಪ. ಕಾಳಿ ದೇವಿಯ ಮುಂದೆ ಇಡೀ ಬ್ರಹ್ಮಾಂಡವೇ, ಸಕಲ ದೇವಾನುದೇವತೆಗಳೇ ತಲೆ ಬಗ್ಗಿಸಿ ನಿಲ್ಲುತ್ತಾರೆ. ಆಕೆಯ ಶಕ್ತಿ ಅಪಾರವಾದುದ್ದು. ನಿನ್ನಲ್ಲಿ ಅಂತಹದೊAದು ಶಕ್ತಿ ಅಡಗಿದೆ”.
ಚುಚ್ಚು ಮಾತುಗಳನ್ನೇ ಕೇಳುತ್ತಾ ಬಂದಿದ್ದ ಚುಕ್ಕಿಯ ಹೃದಯ ಕಲ್ಲಾಗಿತ್ತು. ಕಪ್ಪೆಂದರೆ ಶನಿ ಎಂಬ ಮಾತಿಗೆ ಅಂಟಿ ಕೊಂಡAತೆ ಇದ್ದಳಾಕೆ.
ಹಳ್ಳಿಯ ಪಟೇಲರ ಮನೆಯ ಹತ್ತಿರವೇ ಇತ್ತು ಆ ಗ್ರಾಮದ ಆಸ್ಪತ್ರೆ. ಅದೆಷ್ಟೋ ವರುಷಗಳಿಂದ ಸರ್ಕಾರಿ ವೈದ್ಯರಿಗಾಗಿ ಇಲಾಖೆಗೆ ಕಾಗದ ಗೀಚಿ, ಗೀಚಿ ಪಟೇಲ ಪೇಚಾಟಕ್ಕೆ ಸಿಕ್ಕಿದ್ದ. ಊರಿನ ಪುಣ್ಯವೋ, ಊರಿನ ಜನರ ಪುಣ್ಯವೋ ಎಂಬAತೆ ಸರ್ಕಾರಿ ಆಸ್ಪತ್ರೆಯಲ್ಲಿ ಜನರ ಸೇವೆಗೆಂದೇ ಸರ್ಕಾರವು ಡಾ. ರಮೇಶ್ ಎಂಬ ವೈದ್ಯನನ್ನು ಅಲ್ಲಿಗೆ ನೇಮಕ ಮಾಡಿತು. ಬಿಸಿ ರಕ್ತದ, ಉತ್ಸಾಹಿ ಯುವಕ ವೈದ್ಯ ರಮೇಶ್ ಜನರಿಂದಲೇ ಅವನ ವೃತ್ತಿ ಎಂಬುದನ್ನು ಚೆನ್ನಾಗಿ ಅರಿತಿದ್ದ. ಯಾವುದೇ ಒಳಜಂಭ, ಕೀಳರಿಮೆ ಇಲ್ಲದೆ ರೋಗಿಗಳನ್ನು ವಿಚಾರಿಸು ತ್ತಿದ್ದ. ಆ ವೈದ್ಯನ ಮಾತು, ನಗುವಿಗೆ ಹಳ್ಳಿ ಜನರ ಅರ್ಧ ಕಾಯಿಲೆ ವಾಸಿಯಾಗುತ್ತಿತ್ತು.
ಆಸ್ಪತ್ರೆಯ ಅಂಗಳದಲ್ಲಿ ಬೆಳೆದು ನಿಂತಿದ್ದ ಕೆಂಡ ಸಂಪಿಗೆಯ ಮರ ಚುಕ್ಕಿಯನ್ನು ಪ್ರತಿನಿತ್ಯ ಕೈಬೀಸಿ ಕರೆಯುತ್ತಿತ್ತು. ಬೆಳಗಿನ ಸ್ನಾನ ಮುಗಿಸಿ, ಚುಕ್ಕಿ ಲಂಗ ದಾವಣಿ ತೊಟ್ಟು, ಹೂವಿಗಾಗಿ ಆ ಸಂಪಿಗೆ ಮರದ ಬಳಿ ಹೋಗುತ್ತಿದ್ದಳು.
ಚುಕ್ಕಿಗೀಗ ಇಪ್ಪತ್ತೆöÊದು ವರುಷ. ಸುಮಾರು ಆರೇಳು ವರುಷದವಳಿರುವಾಗಲೇ ಚುಕ್ಕಿ ಆ ಮರದ ಸಖಿ. ಹೂವನ್ನು ಹುಡುಕಿ ಹೊರಟ ಭ್ರಮರಾಂಬಿಕೆ.
ಅದೆಷ್ಟೋ ಜನರಿಗೆ ಕೆಂಡ ಸಂಪಿಗೆಯ ಸುವಾಸನೆ ತಲೆನೋವು ತರಿಸುವುದುಂಟು. ಆದರೆ ಚುಕ್ಕಿಗೆ ಸಂಪಿಗೆಯ ಪರಿಮಳ ಬಲು ಇಷ್ಟ. ಬಹುಶಃ ಆಕೆ ಆ ಮರದ ಹೂಗಳನ್ನು ಸ್ಪರ್ಶಿಸದ ದಿನ ಹೂಗಳು ಮುಷ್ಕರ ಹೂಡಿದಂತೆ ಗೋಚರ ವಾಗುತ್ತಿತ್ತು.
ಬೀಸುವ ತಂಗಾಳಿ ಭಿನ್ನ ಮಾಡದೆ ತಾನು ಸಾಗುವ ದಾರಿಯಲ್ಲಿ ಭೇಟಿ ಮಾಡುವ ಪ್ರತೀ ಜೀವಿಯನ್ನು ಮುತ್ತಿಕ್ಕಿ ಹೋಗುವುದು. ಆದರೆ ಮನುಷ್ಯ ಎಂಬ ಜೀವಿಗೆ ಮಾತ್ರ ರೋಮ ರೋಮದಲ್ಲಿ ಭೇದ-ಭಾವ, ಕೀಳರಿಮೆ ಎಂಬ ಕಿಚ್ಚು ಧಗಧÀಗನೆ ಸದಾ ಉರಿಯುತ್ತಿರುವುದು. ಕಪ್ಪು ಎಂಬುದು ಅವಲಕ್ಷಣ ಎಂಬ ಮುದ್ರೆಯನ್ನು ಜನ ತಮ್ಮ ಮನಸ್ಸಿನ ಮೇಲೆ ತಾವೇ ಒತ್ತಿ ಕೊಂಡAತೆ ತೋರುತ್ತಿತ್ತು.
ಸೂರ್ಯನ ಸುವರ್ಣ ಕಿರಣಗಳು ಭೂಮಿಯನ್ನು ಸ್ಪರ್ಶಿಸುತ್ತಿದ್ದ ಹಾಗೆಯೇ ಚುಕ್ಕಿ ಅಯಸ್ಕಾಂತದAತೆ ಕೈಯಲ್ಲೊಂದು ಬುಟ್ಟಿ ಹಿಡಿದು ಕೆಂಡ ಸಂಪಿಗೆಯ ಸುವಾಸನೆಯಲ್ಲಿ ಮೈಮರೆಯಲು ಮರದ ಬುಡಕ್ಕೆ ತಲುಪುತ್ತಾಳೆ. ಸಂಪಿಗೆಯ ಸುವಾಸನೆಯ ಸೆಳೆತ ಅವಳನ್ನು ವಶೀಕರಿಸಿದಂತೆ ಭಾಸವಾಗುತ್ತಿತ್ತು.
ಹುಣ್ಣಿಮೆಯ ಚಂದಿರನAತೆ ಅರಳಿದ ಚಿಕ್ಕಿಯ ಕಣ್ಣು ಕೆಂಡ ಸಂಪಿಗೆಯ ಅಂದವನ್ನು ಸವಿಯುತ್ತಿತ್ತು. ಬುಟ್ಟಿಯೊಳಗೆ ಆಕೆ ಕೇವಲ ಹೂಗಳನ್ನು ತುಂಬುತ್ತಿರಲಿಲ್ಲ. ಅವಳ ದಿನನಿತ್ಯದ ಕನಸುಗಳೇ ಈ ಹೂಗಳಾಗಿದ್ದವು. ಹೂಗಳನ್ನು ಮುತ್ತಿಕ್ಕುತ್ತಾ ಅವಳು ಪೂರ್ತಿ ಯಾಗಿ ಆ ಹೂಗಳಿಗೆ ಶರಣಾ ದಂತೆ ಕಾಣುತ್ತಿತ್ತು.
ಇತ್ತ ಚುಕ್ಕಿ ತನ್ನದೇ ಲೋಕದಲ್ಲಿ ಮುಳುಗಿ ಹೋಗಿದ್ದರೆ ಅತ್ತ ಡಾ. ರಮೇಶ್ ಚುಕ್ಕಿಯ ಮುಗ್ಧತೆಯ ನಗುವಿನಲ್ಲಿ ಕಳೆದೇ ಹೋಗಿದ್ದ. ಚುಕ್ಕಿಯ ಆ ಶುಭ್ರ ನಗುವನ್ನು ನೋಡಿದ ಡಾ. ರಮೇಶ್‌ನ ಮನಸ್ಸು ನಿರಾಳ ವಾಯಿತು. ಚುಕ್ಕಿ ನಗುವಾಗಲೆಲ್ಲಾ ಡಾ. ರಮೇಶ್‌ನ ಒಳ ಮನಸ್ಸು ತನ್ನ ಅರಿವಿಲ್ಲದೆಯೇ ನಗತೊಡಗಿತು.
ಮಾಣಿಕ್ಯದಂತಿದ್ದ ಡಾ. ರಮೇಶ್‌ನ ಒಳ ಮನಸ್ಸಿಗೆ ಕಾಣಸಿಕ್ಕಿದ್ದು ಕೇವಲ ಚುಕ್ಕಿಯ ಆ ನಿಷ್ಕಲ್ಮಶ ಮನಸ್ಸು. ಚುಕ್ಕಿಯನ್ನೇ ನೋಡುತ್ತಾ ಆತ “ನನ್ನವಳು ಅಂದ, ನನ್ನವಳು ಚಂದ” ಎಂದು ಪಿಸುಮಾತಿನಲ್ಲಿ ಕೊಂಚ ನಗೆ ಬೀರಿದ. ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಹಣೆಗೊಂದು ಭರವಸೆಯ ಮುತ್ತಿಕ್ಕುವ ತವಕ. ತನ್ನ ಎದೆಗೂಡಿನ ಪಟ್ಟದರಸಿ ಯನ್ನು ತನ್ನ ಹೃದಯ ತನಗೆ ಅರಿವಿಲ್ಲದೆಯೇ ಹುಡುಕಿತೆಂಬ ತೃಪ್ತಿ ಆತನಿಗೆ.
ಚುಕ್ಕಿಯ ಬಾಳಿನಲ್ಲಿ ಬಂದ ಗಂಡಿನ ಜೀವನ ಸೌಂದರ್ಯ ಯುತವಾಗಿರುತ್ತದೆ ಎಂಬುದು ಡಾ. ರಮೇಶ್‌ನಿಗೆ ತಿಳಿದಿತ್ತು. ಚುಕ್ಕಿಯನ್ನೇ ನೋಡುತ್ತಾ ಆಕೆಯ ಬಳಿ ನಿಲ್ಲುತ್ತಾ ಮೈಮರೆಯುತ್ತಾನೆ. ಅವರು ಮಾತನಾಡಲಿಲ್ಲ. ಆದರೂ ಅವರ ಹೃದಯಗಳು ಮಾತನಾಡಿತು.
ಚುಕ್ಕಿ ಅಂದು ಆದಿ ಅಂತ್ಯವಿಲ್ಲದ ಪ್ರೀತಿಗೆ ಬುನಾದಿ ಹಾಕಿದಳು. ಕಣ್ಣಿಗೆ ಕಾಣುವ ಹೊರ ಸೌಂದರ್ಯಕ್ಕಿAತ ಕಣ್ಣಿಗೆ ಕಾಣದಿರುವ ಒಳ ಸೌಂದರ್ಯ ಮುಖ್ಯ ಎಂಬುದನ್ನು ಆ ಊರಿನ ಜನರು ಅರಿತು ಕೊಂಡರು.