ಮಡಿಕೇರಿ, ಮಾ. ೩೦: ಪ್ರತಿ ಚುನಾವಣೆ ಸಂದರ್ಭದಲ್ಲಿ ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ನಕ್ಸಲರು ಕಾಣಿಸಿಕೊಳ್ಳುತ್ತಿದ್ದು, ಇದು ರಾಷ್ಟಿçÃಯ ಆಂತರಿಕ ಭದ್ರತೆ ಮತ್ತು ಸಾರ್ವಭೌಮತೆಗೆ ಬೆದರಿಕೆಯಾಗಿದೆ. ನಕ್ಸಲರ ಉಪಟಳವನ್ನು ಚಿಗುರಿನಲ್ಲೇ ಚಿವುಟಿ ಹಾಕಬೇಕು ಮತ್ತು ನಕ್ಸಲ್ ಸಮಸ್ಯೆಯನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಒತ್ತಾಯಿಸಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡಗು ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆಯ ಬೆಳವಣಿಗೆಯ ಕುರಿತು ವಿವರಿಸಿದ್ದಾರೆ. ನಕ್ಸಲಿಸಂ ಮನಸ್ಸು ಮೂಲತಃ ೧೮೦೦ ರಲ್ಲಿ ದೇವಟ್‌ಪರಂಬ ಕೊಡವ ನರಮೇಧದ ಫಲಾನುಭವಿಗಳಿಂದ ಮೊಳಕೆಯೊಡೆಯಿತು. ಇದನ್ನು ೧೮೩೪ ರಿಂದ ೧೮೩೭ ರ ನಡುವೆ ಸ್ಥಳೀಯ ಕೊಡವ ಯೋಧರು ಪರಿಣಾಮಕಾರಿಯಾಗಿ ನಿಗ್ರಹಿಸಿದರು. ಆ ಮೂಲಕ ಕೊಡವರ ತಾಯ್ನಾಡನ್ನು ರಕ್ಷಿಸಿದರು ಮತ್ತು ನಮ್ಮ ಸ್ವ-ನಿರ್ಣಯದ ಹಕ್ಕುಗಳನ್ನು ಬಲವಾಗಿ ನಿರ್ಧರಿಸಿದರು. ಆದರೆ ೧೯೫೬ ರಲ್ಲಿ ಕೂರ್ಗ್ ರಾಜ್ಯವನ್ನು ವಿಶಾಲ ಮೈಸೂರಿನೊಂದಿಗೆ ವಿಲೀನಗೊಳಿಸಿದ ನಂತರ ರಾಜ್ಯ ಮರುಸಂಘಟನೆ ಕಾಯಿದೆ ಜಾರಿಗೆ ಬಂದಾಗ ಮತ್ತೆ ನಕ್ಸಲ್ ಭೀತಿ ಮೊಳಕೆಯೊಡೆಯಿತು. ೧೯೬೯ ರಲ್ಲಿ ಕುಟ್ಟ, ಮಾಕುಟ್ಟ ಮತ್ತು ಕರಿಕೆ ಗಡಿಯಲ್ಲಿ ಅಜಿತಾ ಎಂಬ ಮಹಿಳೆಯ ನೇತೃತ್ವದಲ್ಲಿ ನಕ್ಸಲ್ ಬೆದರಿಕೆ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡಿತು. ಇದನ್ನು ಆಗಿನ ಮೈಸೂರು ರಾಜ್ಯ ಮೀಸಲು ಪೊಲೀಸ್ ಸಂಪೂರ್ಣವಾಗಿ ಅಳಿಸಿಹಾಕಿತು.

ಮತ್ತೆ ಅದು ಬೆಳೆದು ೨೦೦೭-೨೦೦೮ರಲ್ಲಿ ಕೊಡವ ರೈತರಿಗೆ ಬೆದರಿಕೆ ಪತ್ರಗಳನ್ನು ಕಳುಹಿಸುವ ಮೂಲಕ ಹರಡಿತು. ಆ ಕಷ್ಟದ ಸಮಯದಲ್ಲಿ, ನಮ್ಮ ರೈತರ ಸ್ಥೆöÊರ್ಯವನ್ನು ಹೆಚ್ಚಿಸಲು ಸಿಎನ್‌ಸಿ ಕೊಡವ ಪ್ರದೇಶದಾದ್ಯಂತ ಅಸಂಖ್ಯಾತ ಜಾಗೃತಿ ಸಭೆಗಳನ್ನು ನಡೆಸಿತು ಮತ್ತು ಸರ್ಕಾರಕ್ಕೆ ದೇಶದ್ರೋಹಿ ಸಂಚುಕೋರರ ಹೆಸರನ್ನು ಒದಗಿಸಿತು. ನಮ್ಮ ವಿಶೇಷ ಗನ್ ವಿನಾಯಿತಿ ಹಕ್ಕುಗಳನ್ನು ತೆಗೆದುಹಾಕಲು ಪ್ರಯತ್ನಿಸುತ್ತಿರುವವರು ಮತ್ತು ನಮ್ಮ ಪಾರಂಪರಿಕ ಭೂಮಿಯೊಂದಿಗೆ ಮಧ್ಯಪ್ರವೇಶಿಸಲು ಸಂಚು ಹೊಂದಿರುವವರು ನಕ್ಸಲಿಯರೊಂದಿಗೆ ಕೈಜೋಡಿಸಿದ್ದಾರೆ. ನಮ್ಮ "ಸಂಸ್ಕಾರ", ವಿಶೇಷ ಗನ್ ವಿನಾಯಿತಿ ಹಕ್ಕುಗಳನ್ನು ತೆಗೆದು ಹಾಕಿದರೆ, ಈ ಪ್ರಾಚೀನ ಭೂಮಿಗೆ ಸುಲಭವಾಗಿ ನುಸುಳಬಹುದು ಮತ್ತು ಅಡಗಿಕೊಳ್ಳಬಹುದು ಎನ್ನುವ ಷಡ್ಯಂತ್ರವಿದ್ದು, ಇದು ನಮ್ಮ ರಾಷ್ಟಿçÃಯ ಭದ್ರತೆಗೆ ಅಪಾಯ ತಂದೊಡ್ಡಲಿದೆ ಎಂದು ನಾಚಪ್ಪ ಆರೋಪಿಸಿದ್ದಾರೆ.

ಜಿಲ್ಲಾ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ವ್ಯಕ್ತಿಗಳು ಕೇರಳದ ನಕ್ಸಲ್ ರೂಪೇಶ್ ನ ಜಾಮೀನು ಅರ್ಜಿ ವಿಚಾರಣೆಗೆ ಹಾಜರಾಗಿದ್ದರು. ನಕ್ಸಲ್ ಬೆದರಿಕೆಯನ್ನು ಹರಡಲು ರಹಸ್ಯವಾಗಿ ಕುತಂತ್ರ ನಡೆಯುತ್ತಿದೆೆ. ನಕ್ಸಲ್ ಚಟುವಟಿಕೆಗಳ ಹಿಂದೆ ಕೆಲವು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು, ಬೌದ್ಧಿಕ ಮಾಫಿಯಾಗಳು, ಎನ್‌ಜಿಒ ಮಾಫಿಯಾಗಳು ಮತ್ತು ಕೆಲವು ಕಾರ್ಮಿಕ ಒಕ್ಕೂಟದ ಮಾಫಿಯಾಗಳ ಮೈತ್ರಿಯೂ ಇದೆ.

ದೇವಟ್‌ಪರಂಬ್ ಕೊಡವ ನರಮೇಧ ಸ್ಮಾರಕವನ್ನು ವಿರೋಧಿಸುವುದು ಮತ್ತು ನಮ್ಮ ಪುರಾತನ ವಂಶಪಾರAಪರ್ಯ ಭೂಮಿಯನ್ನು ನಿರ್ಧರಿಸುವ ನಮ್ಮ ಹಕ್ಕುಗಳನ್ನು ಪ್ರಶ್ನಿಸುವುದು ನಮ್ಮ ಪವಿತ್ರ ಯಾತ್ರಾಸ್ಥಳ ತಲಕಾವೇರಿ ಪ್ರವೇಶವನ್ನು ವಿರೋಧಿಸುವುದು ನಕ್ಸಲಿಯರ ನಿಜವಾದ ಬೆನ್ನೆಲುಬಿನಂತಿದೆ. ಕೊಡವ ಪರಂಪರೆಯ ಗುರುತುಗಳು ಮತ್ತು ಗುಣಲಕ್ಷಣಗಳನ್ನು ರದ್ದುಗೊಳಿಸಲು ಮತ್ತು ದುಷ್ಟ ಕೂಟವನ್ನು ಸಂಘಟಿಸುವ ಸಲುವಾಗಿ ನಕ್ಸಲಿಸಂಗೆ ಬೆಂಬಲವನ್ನು ವಿಸ್ತರಿಸುವ ಪ್ರಯತ್ನದಲ್ಲಿದ್ದಾರೆ.

ಕೊಡವ ದ್ವೇಷಿ ರಾಜಕೀಯ ವರ್ಗದ ಕೆಲವರಿದ್ದಾರೆ, ಹಗಲಿನಲ್ಲಿ ಅವರು ನಮ್ಮ ಜನರೊಂದಿಗೆ ರಾಷ್ಟಿçÃಯತೆಯ ಬಗ್ಗೆ ಮಾತನಾಡುತ್ತಾರೆ. ಆದರೆ ರಾತ್ರಿಯಲ್ಲಿ ಅವರು ನಕ್ಸಲಿಸಂ ಅನ್ನು ಬೋಧಿಸುತ್ತಾರೆ. ಅವರು ವಿಶ್ವವಿದ್ಯಾನಿಲಯಗಳು, ನ್ಯಾಯಾಲಯಗಳು ಮತ್ತು ಕಂದಾಯ ಇಲಾಖೆಗಳಲ್ಲಿ ನೆಟ್‌ವರ್ಕ್ಗಳನ್ನು ಹೊಂದಿದ್ದಾರೆ ಮತ್ತು ತಮ್ಮನ್ನು ತಾವು ಎನ್‌ಜಿಒ ಎಂದು ಕರೆದುಕೊಳ್ಳುತ್ತಾರೆ ಎಂದು ನಾಚಪ್ಪ ಆರೋಪಿಸಿದ್ದಾರೆ.

ಜಿಲ್ಲೆಯ ಕೆಲವು ಮಾಫಿಯಾಗಳು ನಕ್ಸಲಿಸಂ ಜೊತೆ ಕೈಜೋಡಿಸಿರುವ ಬಗ್ಗೆ ಶಂಕೆ ಇದೆ ಎಂದು ತಿಳಿಸಿರುವ ಅವರು, ನಕ್ಸಲರ ಚಟುವಟಿಕೆಗಳ ಕುರಿತು ಸಿಬಿಐ ಅಥವಾ ಎನ್ ಐಎ ಮೂಲಕ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಈ ಕುರಿತು ಕೇಂದ್ರ ಗೃಹಮಂತ್ರಿಗಳು, ಚುನಾವಣಾ ಆಯೋಗ, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಕೇಂದ್ರದ ಮಾಜಿ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಅವರಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.