ಕೊಡವ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿದ್ದ, ಸಂಶೋಧಕಿಯೂ ಆಗಿದ್ದ ಬೊವ್ವೇರಿಯಂಡ ನಂಜಮ್ಮ ಚಿಣ್ಣಪ್ಪ (೮೯) ಅವರು ಮಾ.೩೧ರಂದು ನಿಧನರಾದರು. ಪಟ್ಟೋಳೆ ಪಳಮೆ ಕೊಡವ ಗ್ರಂಥ ರಚಿಸಿರುವ ಸಾಹಿತಿ ನಡಿಕೇರಿಯಂಡ ಚಿಣ್ಣಪ್ಪ ಅವರ ಮೊಮ್ಮಗಳಾಗಿದ್ದ ಇವರು, ಪತಿ ದಿವಂಗತ ಬೊವ್ವೇರಿಯಂಡ ಚಿಣ್ಣಪ್ಪ ಅವರೊಂದಿಗೆ ಈ ಹಿಂದೆ ಐನ್‌ಮನೆ ಸೇರಿದಂತೆ ಹಲವು ಸಂಶೋಧನೆ ನಡೆಸಿ ಪುಸ್ತಕ ಹೊರತಂದಿದ್ದರು. ಪಟ್ಟೋಳೆ ಪಳಮೆ ಕೃತಿಯ ಇಂಗ್ಲಿಷ್ ಅನುವಾದಕರೂ ಆಗಿದ್ದರು. ಮೈಸೂರಿನಲ್ಲಿ ನೆಲೆಸಿದ್ದ ಇವರು, ತಾ.೩೧ರ ಬೆಳಿಗ್ಗೆ ವಿಧಿವಶರಾಗಿದ್ದು, ಮೃತದೇಹವನ್ನು ಆಸ್ಪತ್ರೆಗೆ ನೀಡಲಾಗುತ್ತದೆ. ಮೃತರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಸಂತಾಪ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ನಂಜಮ್ಮ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.