ಮಡಿಕೇರಿ, ಮಾ. ೩೧: ಮಂಥನ ಕೊಡಗು ಹಾಗೂ ರಂಗಭೂಮಿ ಪ್ರತಿಷ್ಠಾನ ಕೊಡಗು ಆಶ್ರಯದಲ್ಲಿ ಅಡ್ಡಂಡ ಕಾರ್ಯಪ್ಪ ರಚಿತ ಕರಿನೀರ ವೀರ ಕೃತಿ ತಾ.೨ರಂದು (ನಾಳೆ) ಲೋಕಾರ್ಪಣೆಗೊಳ್ಳಲಿದೆ. ನಗರದ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಸಂಜೆ ೫:೩೦ಕ್ಕೆ ಕೃತಿ ಲೋಕಾರ್ಪಣೆಗೊಳ್ಳಲಿದೆ. ಭಾರತೀಯ ವಿದ್ಯಾಭವನದ ಅಧ್ಯಕ್ಷ ಕೆ.ಎಸ್ ದೇವಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವೀರ ಸಾವರ್ಕರ್ ಕುರಿತು ಲೇಖಕ, ಚಿಂತಕ ನಿತ್ಯಾನಂದ ವಿವೇಕವಂಶಿ ಮಾತನಾಡಲಿದ್ದಾರೆ. ಕೃತಿ ಲೇಖಕ ಅಡ್ಡಂಡ ಕಾರ್ಯಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಸಾವರ್ಕರ್ ಚರಿತ್ರೆ ಕುರಿತಾದ ಈ ಕೃತಿ ಆಧಾರಿತ ನಾಟಕ ರಾಜ್ಯದಲ್ಲಿ ೪೦ ಪ್ರದರ್ಶನ ಕಂಡಿದೆ. ಈ ಕೃತಿಯನ್ನು ಅಯೋಧ್ಯೆ ಪ್ರಕಾಶನ ಪ್ರಕಟಿಸಿದೆ.