ಕುಶಾಲನಗರ, ಮಾ. ೩೧: ಮೂಲಭೂತ ಸೌಲಭ್ಯಗಳ ಅಗತ್ಯವುಳ್ಳ ಜನರಿಗೆ ಸಹಕಾರ ನೀಡುವುದು ಸಂಘ-ಸAಸ್ಥೆಗಳ ಆದ್ಯ ಕರ್ತವ್ಯವಾಗಬೇಕು ಎಂದು ಇನ್ನರ್ ವೀಲ್ ಡಿಸ್ಟಿçಕ್ ೩೧೮ ರ ಅಧ್ಯಕ್ಷೆ ಪೂರ್ಣಿಮಾ ರವಿ ಹೇಳಿದರು. ಕುಶಾಲನಗರದಲ್ಲಿ ಇನ್ನರ್ವೀಲ್ ಶತಮಾನೋತ್ಸವ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈಗ ವಿಶ್ವದಾದ್ಯಂತ ಇನ್ನರ್ ವೀಲ್ ಕ್ಲಬ್ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದ ಪೂರ್ಣಿಮಾ, ಪ್ರತಿಯೊಬ್ಬ ಸದಸ್ಯರು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಅAತರರಾಷ್ಟಿçÃಯ ಇನ್ನರ್ ವೀಲ್ ಸಂಸ್ಥೆಯ ಶತಮಾನೋತ್ಸವದ ಅಂಗವಾಗಿ ಜಿಲ್ಲೆಯಲ್ಲಿ ನಮ್ಮ ಸಂಸ್ಥೆಯ ಮೂಲಕ ೧ ಕೋಟಿ ರೂಪಾಯಿಗೂ ಅಧಿಕ ವೆಚ್ಚ ಮಾಡಿ ಸೇವಾ ಕಾರ್ಯಗಳನ್ನು ನಡೆಸಿದ್ದೇವೆ. ಆ ಮೂಲಕ ಸಾವಿರಾರು ಜನರು ನಮ್ಮ ಸಂಸ್ಥೆಯ ಫಲಾನುಭವಿಗಳು ಪ್ರಯೋಜನ ಪಡೆದಿರುವುದಾಗಿ ಮಾಹಿತಿ ನೀಡಿದರು.
ಸಂಸ್ಥೆಯ ಶತಮಾನೋತ್ಸವ ಅಂಗವಾಗಿ ವ್ಯಾಪ್ತಿಯಲ್ಲಿ ನೂರು ಹೆಣ್ಣು ಮಕ್ಕಳಿಗೆ ಬೈಸಿಕಲ್ ವಿತರಣೆ ಮಾಡುವ ಮಹತ್ತರ ಯೋಜನೆ ಹಮ್ಮಿಕೊಳ್ಳಲಿದ್ದೇವೆ ಎಂದರು.
‘ಶ್ರೀಮತಿ ಕುಶಾಲನಗರ’ ಎನ್ನುವ ಕಾರ್ಯಕ್ರಮದ ಮೂಲಕ ಮಹಿಳೆಯರ ಪ್ರತಿಭೆಗಳನ್ನು ಗುರುತಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕುಶಾಲನಗರ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ನೇಹಾ ಜಗದೀಶ್, ಉಪಾಧ್ಯಕ್ಷೆ ಚಿತ್ರ ರಮೇಶ್, ಕಾರ್ಯದರ್ಶಿ ಜಾಸ್ಮಿನ್ ಪ್ರಕಾಶ್, ಖಜಾಂಚಿ ಸುಪ್ರಿತಾ ರವಿ, ಮಾಜಿ ಅಧ್ಯಕ್ಷರಾದ ಆರತಿ ಶೆಟ್ಟಿ, ರೂಪ ಉಮಾಶಂಕರ್, ಅಶ್ವಿನಿ ರೈ, ದೀಪ ಪೂಜಾರಿ, ಸಂಧ್ಯಾ ಪ್ರಮೋದ್, ದಿವ್ಯ ಸುಜಯ್ ಮತ್ತಿತರರು ಇದ್ದರು.