ನಾಪೋಕ್ಲು, ಮಾ. ೩೧: ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಕುಂಡ್ಯೋಳAಡ ಕಪ್ ಹಾಕಿ ನಮ್ಮೆಯ ಎರಡನೇ ದಿನದ ಪಂದ್ಯಾಟದಲ್ಲಿ ೧೫ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.
ಬೆಳಿಗ್ಗೆ ನಡೆದ ಬೊಳ್ಳಿಯಂಡ ಮತ್ತು ಅಲ್ಲಪ್ಪಿರ ತಂಡಗಳ ನಡುವಿನ ಪಂದ್ಯದಲ್ಲಿ ಅಲ್ಲಪ್ಪಿರ ತಂಡವು ಪೆನಾಲ್ಟಿ ಸ್ಟೋಕ್‌ನಲ್ಲಿ ೩-೧ ಗೋಲುಗಳ ಅಂತರದಿAದ ಬೊಳ್ಳಿಯಂಡ ತಂಡವನ್ನು ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಪಂದ್ಯAಡ ಮತ್ತು ಕನ್ನಂಬಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕನ್ನಂಬಿರ ತಂಡವು ಪಂದ್ಯAಡ ತಂಡವನ್ನು ೪-೧ ಗೋಲುಗಳಿಂದ ಪರಾಭವಗೊಳಿಸಿತು. ಕೋದಂಡ ಮತ್ತು ಬೊಪ್ಪಡತಂಡ ತಂಡಗಳ ನಡುವಿನ ಪಂದ್ಯದಲ್ಲಿ ಕೋದಂಡ ತಂಡವು ಬೊಪ್ಪಡತಂಡ ತಂಡವನ್ನು ೪-೦ ಗೋಲುಗಳಿಂದ ಮಣಿಸಿತು. ಉದಿಯಂಡ ಮತ್ತು ನಾಟೋಳಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಉದಿಯಂಡ ತಂಡವು ೨-೦ ಗೋಲುಗಳಿದ ನಾಟೋಳಂಡ ತಂಡವನ್ನು ಸೋಲಿಸಿತು. ಕುಕ್ಕೇರ ಮತ್ತು ಪೂದ್ರಿಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಪೂದ್ರಿಮಾಡ ತಂಡವು ಕುಕ್ಕೇರ ತಂಡವನ್ನು ೩-೧ ಗೋಲುಗಳ ಅಂತರದಿAದ ಪರಾಭವಗೊಳಿಸಿತು.
ತಿರೋಡಿರ ಮತ್ತು ಬೊಳ್ಳಿಮಾಡ ತಂಡಗಳ ನಡುವಿನ ಪಂದ್ಯದಲ್ಲಿ ತಿರೋಡಿರ ತಂಡವು ೪-೦ ಗೋಲುಗಳ ಅಂತರದಿAದ ಬೊಳ್ಳಿಮಾಡ ತಂಡವನ್ನು ಮಣಿಸಿತು. ಅನ್ನಡಿಯಂಡ ಮತ್ತು ಬೊಳ್ಳೇರ ತಂಡಗಳ ನಡುವಿನ ಪಂದ್ಯದಲ್ಲಿ ಅನ್ನಡಿಯಂಡ ತಂಡವು ಬೊಳ್ಳೇರ ತಂಡವನ್ನು ೩-೨ ಗೋಲಿನ ಅಂತರದಿAದ ಸೋಲಿಸಿತು. ತಾತಪಂಡ ಮತ್ತು ಚೌರೀರ (ಹೊದವಾಡ) ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೌರೀರ ತಂಡವು ತಾತಪಂಡ ತಂಡವನ್ನು ೨-೦ ಗೋಲಿನಿಂದ ಸೋಲಿಸಿತು. ಚೋಡುಮಾಡ ಮತ್ತು ಅನ್ನಾರ್ಕಂಡ ತಂಡಗಳ ನಡುವಿನ ಪಂದ್ಯದಲ್ಲಿ ಚೋಡುಮಾಡ ತಂಡವು ಅನ್ನಾರ್ಕಂಡ ತಂಡವನ್ನು ೬-೦ ಗೋಲಿನ ಅಂತರದಿAದ ಪರಾಭವಗೊಳಿಸಿತು.
ಕಾವಾಡಿಚಂಡ ಮತ್ತು ಪಾರುವಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಕಾವಾಡಿಚಂಡ ತಂಡವು ೩-೧ ಗೋಲುಗಳಿಂದ ಪಾರುವಂಗಡ ತಂಡವನ್ನು ಪರಾಭವಗೊಳಿಸಿತು. ಕಟ್ಟೇರ ಮತ್ತು ಪುಳ್ಳಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಪುಳ್ಳಂಗಡ ತಂಡವು ೧-೦ ಗೋಲುಗಳಿಂದ ಕಟ್ಟೇರ ತಂಡವನ್ನು ಸೋಲಿಸಿತು. ಗುಮ್ಮಟ್ಟಿರ ಮತ್ತು ಐಯ್ಯಮಂಡ ತಂಡಗಳ ನಡುವಿನ ಪಂದ್ಯದಲ್ಲಿ ಗುಮ್ಮಟ್ಟಿರ ತಂಡವು ೩-೧ ಗೋಲುಗಳ ಅಂತರದಿAದ ಐಯ್ಯಮಂಡ ತಂಡವನ್ನು ಸೋಲಿಸಿತು. ಬೊಳ್ಳಾರ್ಪಂಡ ಮತ್ತು ಅಚ್ಚಾಂಡಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಚ್ಚಾಂಡಿರ ತಂಡವು ಪೆನಾಲ್ಟಿ ಸ್ಟೊçÃಕ್‌ನಲ್ಲಿ ಬೊಳ್ಳಾರ್ಪಂಡ ತಂಡವನ್ನು ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು.
-ಪಿ.ವಿ. ಪ್ರಭಾಕರ್