ಸುಂಟಿಕೊಪ್ಪ, ಮಾ. ೩೧: ನಾಡಿ ನಾದ್ಯಂತ ಪ್ರಭು ಯೇಸು ಕ್ರಿಸ್ತರ ಪುನರುತ್ಥಾನದ ಪಾಸ್ಕಕಾಲದ (ಈಸ್ಟರ್) ಹಬ್ಬವನ್ನು ಶ್ರದ್ಧಾಭಕ್ತಿ ಯಿಂದ ಆಚರಿಸಲಾಯಿತು. ಸುಂಟಿ ಕೊಪ್ಪದ ಸಂತ ಅಂತೋಣಿ ದೇವಾ ಲಯದ ವತಿಯಿಂದ ಸಂತ ಮೇರಿ ಶಾಲಾವರಣದಲ್ಲಿ ವಿವಿಧ ಸಾಂಘ್ಯಗಳ ಮೂಲಕ ಬಲಿಪೂಜೆ ಹಾಗೂ ವಿಶೇಷ ಪ್ರಾರ್ಥನೆಯನ್ನು ಕ್ರೆöÊಸ್ತ ಬಾಂಧವರು ನೇರವೇರಿಸುವ ಮೂಲಕ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿ ಕೊಂಡು ಈಸ್ಟರ್ ಹಬ್ಬವನ್ನು ಸಡಗರ ಸಂಭ್ರಮದಿAದ ಮನೆಗಳಲ್ಲಿ ಆಚರಿಸಿ ಕೊಂಡರು. ಹಬ್ಬದ ಅಂಗವಾಗಿ ಶನಿವಾರ ಸಂಜೆ ೭ ಗಂಟೆಗೆ ಸಂತ ಮೇರಿ ಶಾಲಾವರಣದಲ್ಲಿ ಸಂತ ಅಂತೋಣಿ ದೇವಾಲಯದ ಧರ್ಮ ಗುರುಗಳಾದ ರೇ.ಪಾ.ಅರುಳ್ ಸೆಲ್ವ ಕುಮಾರ್ ಅವರು ನೂತನ ಬೆಂಕಿ ಯನ್ನು ಆಶೀರ್ವಚಿಸಿ, ಜೇನುಮೇಣ ದಿಂದ ತಯಾರಿಸಲಾದ ದೊಡ್ಡ ಮೊಂಬತ್ತಿಯನ್ನು ಆಶೀರ್ವಚಿಸಿ ಸಂತ ಮೇರಿ ಶಾಲಾವರಣದಿಂದ ಅದನ್ನು ಬೆಳಗಿಸಿಕೊಂಡು ಭಕ್ತಾದಿ ಗಳೊಂದಿಗೆ ಮೆರವಣಿಗೆಯೊಂದಿಗೆ ಪೀಠದಲ್ಲಿ ತಂದು ಗುರುಗಳು ಪ್ರತಿ ಷ್ಠಾಪಿಸಿ ಆಚರಣೆಗೆ ಮುನ್ನುಡಿ ಇತ್ತರು. ನಂತರ ನಡೆದ ಪ್ರಾರ್ಥನಾ ಕೂಟ ಹಾಗೂ ಆಡಂಬರ ದಿವ್ಯ ಬಲಿಪೂಜೆಯಲ್ಲಿ ಮರಣ ಹೊಂದಿದ ಸಮಾಧಿಗೊಳಿಸಲಾದ ಯೇಸುವು ಸಮಾಧಿಯಿಂದ ಪುನರುತ್ಥಾನ ಗೊಂಡಿರುವ ರೂಪಕ ದೃಶ್ಯದ ಅಂಗವಾಗಿ ಪ್ರಭು ಕ್ರಿಸ್ತರ ಪ್ರತಿಮೆ ಯನ್ನು ಪ್ರತಿಷ್ಠಾಪಿಸಿ ಬಲಿಪೂಜೆಯನ್ನು ಸಮ ರ್ಪಿಸಿದರು.

(ಮೊದಲ ಪುಟದಿಂದ) ಬಲಿಪೂಜೆಯಲ್ಲಿ ಸಹಾಯಕ ಧರ್ಮ ಗುರುಗಳಾದ ರೆ.ಫಾ. ನವೀನ್‌ಕುಮಾರ್, ಸಂತ ಕ್ಲಾರ ಕನ್ಯಾಸ್ತಿçà ಕಾನ್ವೆಂಟಿನÀÀ ಕನ್ಯಾಸ್ತಿçÃಯರು, ಗಾಯನ ವೃಂದದೊAದಿಗೆ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳು ದೇವಾಲಯದಲ್ಲಿ ಪುನರುತ್ಥಾನದ ಆಡಂಬರ ಬಲಿಪೂಜೆ ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡರು.

ಮಡಿಕೇರಿ: ನಗರದ ಸಂತ ಮೈಕಲರ ಚರ್ಚ್ನಲ್ಲಿ ಈಸ್ಟರ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಧರ್ಮಗುರು ದೀಪಕ್ ಅವರ ನೇತೃತ್ವದಲ್ಲಿ ಬೆಂಕಿಯನ್ನು ಆಶೀರ್ವಚಿಸುವುದು, ನೀರು ಪವಿತ್ರಗೊಳಿಸುವುದು, ಸ್ನಾನದೀಕ್ಷೆ ವಾಗ್ದಾನದ ಪುನರೀಕರಣ ಸೇರಿದಂತೆ ಇನ್ನಿತರ ಆಚರಣೆಗಳು ನಡೆದವು. ಭಕ್ತಾದಿಗಳು ಆಚರಣೆಯಲ್ಲಿ ಪಾಲ್ಗೊಂಡು ಪ್ರಾರ್ಥನೆ ನೆರವೇರಿಸಿದರು.