ಮಡಿಕೇರಿ, ಮಾ. ೩೧: ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಆಶ್ರಯದಲ್ಲಿ ಅಮ್ಮತ್ತಿಯ ಫ್ರೌಢ ಶಾಲಾ ಮೈದಾನದಲ್ಲಿ ಕಳೆದ ಆರು ದಿನಗಳ ಕಾಲ ನಡೆದ ಕೊಡಗು ಜಿಲ್ಲಾ ಮಟ್ಟದ ನೋಂದಾಯಿತ ಫುಟ್ಬಾಲ್ ಕ್ಲಬ್‌ಗಳ ನಡುವಿನ ಫುಟ್ಬಾಲ್ ಲೀಗ್ ಪಂದ್ಯಾವಳಿಯಲ್ಲಿ ಬಿ.ಎಫ್.ಸಿ ಬೋಯಿಕೇರಿ ಚಾಂಪಿಯನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ರನ್ನರ್ಸ್ ಪ್ರಶಸ್ತಿಗೆ ಮಿಲನ್ಸ್ ಎಫ್.ಸಿ ಅಮ್ಮತ್ತಿ ತೃಪ್ತಿಪಟ್ಟುಕೊಂಡಿತ್ತು.
೩೦+೩೦ ನಿಮಿಷಗಳ ಫೈನಲ್ ಪಂದ್ಯದ ಆರಂಭದಿAದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಬಿ.ಎಫ್.ಸಿ ತಂಡವು ತನ್ನ ಸ್ಟೆçöÊಕರ್ ಆಟಗಾರ ವಿಜು ಅವರು ಏಳನೇ ನಿಮಿಷದಲ್ಲಿ ಬಾರಿಸಿದ ಗೋಲಿನ ನೆರವಿನ ಮೂಲಕ ಮುನ್ನಡೆ ಪಡೆದುಕೊಂಡಿತ್ತು.
ಮೊದಲಾರ್ಧದಲ್ಲಿ ಮಿಲನ್ಸ್ ಎಫ್.ಸಿ ತಂಡವು ಕೂಡ ಆಕ್ರಮಣಕಾರಿ ಆಟಕ್ಕೆ ಮುಂದಾದರು ಕೂಡ ಸಮಬಲ ಗಳಿಸಲು ಸಾಧ್ಯವಾಗಲಿಲ್ಲ.
ದ್ವಿತೀಯಾರ್ಧದ ೪೦ನೇ ನಿಮಿಷದಲ್ಲಿ ಬಿ.ಎಫ್.ಸಿ ತಂಡದ ಪಾಂಡಿಯನ್ ಅವರು ಗೋಲು ಗಳಿಸುವುದರ ಮೂಲಕ ೨-೦ ಗೋಲುಗಳ ಮುನ್ನಡೆ ಪಡೆದುಕೊಂಡ ಬಿ.ಎಫ್.ಸಿ ತಂಡವು ಮತ್ತಷ್ಟು ಆಕ್ರಮಣಕಾರಿ ಆಟಕ್ಕೆ ಮುಂದಾಗಿ,೫೫ ನಿಮಿಷದಲ್ಲಿ ಅಣ್ಣಪ್ಪ ಮತ್ತು ೫೮ನೇ ನಿಮಿಷದಲ್ಲಿ ವಿಜು ಅವರು ತಮ್ಮ ಎರಡನೇ ಗೋಲು ಬಾರಿಸುವುದರ ಮೂಲಕ ೪-೦ ಗೋಲುಗಳ ಅಂತರದಿAದ ಗೆಲುವು ಪಡೆಯುವುದರ ಮೂಲಕ ಕೊಡಗು ಜಿಲ್ಲಾಮಟ್ಟದ ಫುಟ್ಬಾಲ್ ಪಂದ್ಯಾವಳಿಯ ಚಾಂಪಿಯನ್ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಅತ್ಯುತ್ತಮ ಮಿಲನ್ಸ್ ಎಫ್.ಸಿ ಅಮ್ಮತ್ತಿ ತಂಡವು ರನ್ನರ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿತ್ತು.
ಚಾAಪಿಯನ್ ತಂಡಕ್ಕೆ ರೂ.೨೫ ಸಾವಿರ ನಗದು ಮತ್ತು ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ೧೫ ಸಾವಿರ ರೂ. ಮತ್ತು ಟ್ರೋಫಿ ನೀಡಲಾಯಿತು.
ಇದಕ್ಕೂ ಮೊದಲು ನಡೆದ ಮೊದಲನೇ ಸೆಮಿಫೈನಲ್ ಪಂದ್ಯವು ಬಿ.ಎಫ್.ಸಿ ಬೋಯಿಕೇರಿ ಮತ್ತು ಅಮಿಟಿ ಎಫ್.ಸಿ ಗದ್ದೆಹಳ್ಳ ತಂಡಗಳ ನಡುವೆ ನಡೆಯಿತು.
ಬಿ.ಎಫ್.ಸಿ ತಂಡವು ದಿವಾಕರ್ ಮತ್ತು ತನ್ವೀರ್ ಅವರು ತಲಾ ಒಂದು ಗೋಲುಗಳ ನೆರವಿನಿಂದ ೨-೦ ಗೋಲುಗಳ ಅಂತರದಿAದ ಗೆದ್ದು ಇದೇ ಮೊದಲ ಬಾರಿಗೆ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಲೀಗ್ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸಿತು.
ಎರಡನೇ ಸೆಮಿಫೈನಲ್ ಪಂದ್ಯವು ಸಹರಾ ಯೂತ್ ಅಸೋಸಿಯೇಷನ್ ಒಂಟಿಯAಗಡಿ ಮತ್ತು ಮಿಲನ್ಸ್ ಎಫ್.ಸಿ ಅಮ್ಮತ್ತಿ ತಂಡಗಳ ನಡುವೆ ನಡೆಯಿತು.
ಮಿಲನ್ಸ್ ಎಫ್.ಸಿ ತಂಡವು ಮಂಜು ಮತ್ತು ರಾಜೇಶ್ ಅವರು ತಲಾ ಒಂದು ಗೋಲುಗಳ ಬಲದಿಂದ ೨-೧ ಗೋಲುಗಳ ಅಂತರದಿAದ ಗೆದ್ದಿತು. ಸಹರಾ ತಂಡದ ಪರವಾಗಿ ಸುನಿಲ್ ಏಕೈಕ ಗೋಲು ಗಳಿಸಿದರು.
ಫೈನಲ್ ಪಂದ್ಯದ ಮುಖ್ಯ ತೀರ್ಪು ಗಾರರಾಗಿ ಧೀರಜ್ ರೈ, ಸಹ ತೀರ್ಪು ಗಾರರಾಗಿ ಇಬ್ರಾಹಿಂ, ಪವನ್ ದರ್ಶನ್ ಸುಕುಮಾರ್ ಕಾರ್ಯನಿರ್ವಹಿಸಿದರು.
ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಸದಸ್ಯ ಮಹೇಂದ್ರ ಸುಂಟಿಕೊಪ್ಪ ಅವರು ಕೊಡಗು ಜಿಲ್ಲಾ ಫುಟ್ಬಾಲ್ ತಂಡದ ೨೨ ಆಟಗಾರರಿಗೆ ಕೊಡುಗೆಯಾಗಿ ನೀಡಿರುವ ಜರ್ಸಿಯನ್ನು ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಮಹಾಪೋಷಕ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ, ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಅಲ್ಲಾರಂಡ ದೀಪಕ್ ಅಪ್ಪಯ್ಯ ಬಿಡುಗಡೆ ಮಾಡಿದರು.
ಸಮಾರೋಪ ಸಮಾರಂಭ
ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಜಿಲ್ಲಾಮಟ್ಟದ ಲೀಗ್ ಪಂದ್ಯಾವಳಿಯ ಫೈನಲ್ ಪಂದ್ಯದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಮಹಾಪೋಷಕ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ, ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಅಲ್ಲಾರಂಡ ದೀಪಕ್ ಅಪ್ಪಯ್ಯ, ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಉಪಾಧ್ಯಕ್ಷ ಕ್ರಿಸ್ಟೋಫರ್ ಮಡಿಕೇರಿ, ರಾಜ್ಯ ಫುಟ್ಬಾಲ್ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಜಗದೀಶ್ ಕೊಡಗರಹಳ್ಳಿ, ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಕೋಶಾಧಿಕಾರಿ ದೀಪು ಮಾಚಯ್ಯ, ಸದಸ್ಯ ಲಿಜೇಶ್ ಅಮ್ಮತ್ತಿ ಇದ್ದರು.
ಅಸೋಸಿಯೇಷನ್ ಕಾರ್ಯದರ್ಶಿ ಪಂದಿಕAಡ ನಾಗೇಶ್ (ಈಶ್ವರ್) ಸ್ವಾಗತಿಸಿದರೆ, ತೀರ್ಪುಗಾರ ಅರುಣ್ ಅಮ್ಮತ್ತಿ ನಿರೂಪಿಸಿ, ರಾಜ್ಯ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರ ಇಸ್ಮಾಯಿಲ್ ಕಂಡಕರೆ ವಂದಿಸಿದರು.
-ಕೆ.ಎA. ಇಸ್ಮಾಯಿಲ್ ಕಂಡಕರೆ