ಮಡಿಕೇರಿ, ಮಾ. ೩೧: ಪದ್ಮ ಭೂಷಣ ಜನರಲ್ ತಿಮ್ಮಯ್ಯ ಅವರ ೧೧೮ನೇ ಜನ್ಮದಿನದ ಅಂಗವಾಗಿ ಹಲವೆಡೆ ಇಂದು ವೀರಸೇನಾನಿಗೆ ಗೌರವ ನಮನ ಸಲ್ಲಿಸಲಾಯಿತು. ಜಿಲ್ಲಾಡಳಿತ, ಮಡಿಕೇರಿ ಕೊಡವ ಸಮಾಜ ಸೇರಿದಂತೆ ತಿಮ್ಮಯ್ಯ ಅವರ ಅಭಿಮಾನಿ ಬಳಗದ ಮೂಲಕ ಪ್ರತ್ಯೇಕ ಕಾರ್ಯಕ್ರಮಗಳು ನಡೆದವು.

ಜಿಲ್ಲಾಡಳಿತ ವತಿಯಿಂದ: ಜಿಲ್ಲಾ ಡಳಿತದ ವತಿಯಿಂದ ಪದ್ಮಭೂಷಣ, ವೀರಸೇನಾನಿ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ೧೧೮ನೇ ಜನ್ಮ ದಿನಾಚರಣೆಯು ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನ(ಸನ್ನಿಸೈಡ್) ದಲ್ಲಿ ಭಾನುವಾರ ನಡೆಯಿತು.

ಜನರಲ್ ತಿಮ್ಮಯ್ಯ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ.ಸಿಇಒ ವರ್ಣಿತ್ ನೇಗಿ, ಸುಬೇದಾರ್ ಗೌಡಂಡ ತಿಮ್ಮಯ್ಯ ಅವರು ಪುಷ್ಪಾರ್ಚನೆ ಮಾಡಿ, ಗೌರವ ನಮನ ಸಲ್ಲಿಸಿದರು.

ವಿದ್ಯಾರ್ಥಿನಿ ಶ್ರೀಷ ಮಾತನಾಡಿ ಭಾರತೀಯ ಸೇನಾ ಕ್ಷೇತ್ರಕ್ಕೆ ಜನರಲ್ ತಿಮ್ಮಯ್ಯ ಅವರ ಕೊಡುಗೆ ಅಪಾರ ಎಂದು ಹೇಳಿದರು. ರಾಷ್ಟçದ ಮಹಾ ದಂಡ ನಾಯಕರಾಗಿ ಸೇನಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ತಿಳಿಸಿದರು. ಜನರಲ್ ತಿಮ್ಮಯ್ಯ ಅವರು ರಾಷ್ಟ್ರಕಂಡ ಮಹಾನ್ ವೀರ ಸೇನಾನಿಯಾಗಿದ್ದು, ಜನರಲ್ ತಿಮ್ಮಯ್ಯ ಅವರ ಸೇನಾ ಕ್ಷೇತ್ರದಲ್ಲಿನ ಅಪ್ರತಿಮ ಸಾಧನೆ, ಛಲ, ಸಾಮರ್ಥ್ಯ ಮತ್ತು ಪ್ರಬುದ್ಧತೆಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದು ವಿವರಿಸಿದರು. ಜಿ.ಪಂ. ಸಿಇಒ ವರ್ಣಿತ್ ನೇಗಿ, ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅಭಿಮಾನಿ ಬಳಗದ ಮುನೀರ್ ಮಾಚರ್ ಇತರರು ಇದ್ದರು. ತಿಮ್ಮಯ್ಯ ಅವರ ಅಭಿ ಮಾನಿಗಳಾದ

(ಮೊದಲ ಪುಟದಿಂದ) ಕೆಲವರು ಮಡಿಕೇರಿ ನಗರದ ಪೊಲೀಸ್ ಠಾಣೆ, ‘ಶಕ್ತಿ’ ಕಚೇರಿಗೆ ಭೇಟಿಯಿತ್ತು ಸಿಹಿ ವಿತರಿಸಿದರು.

ಹಾಕಿ ಮೈದಾನದಲ್ಲಿ

ಬಳಿಕ ಈ ಸದಸ್ಯರು ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಆರಂಭಗೊAಡಿರುವ ಕುಂಡ್ಯೋಳAಡ ಕಪ್ ಕೊಡವ ಹಾಕಿ ನಮ್ಮೆ ಸ್ಥಳಕ್ಕೆ ತೆರಳಿ ಆಯೋಜಕ ರೊಂದಿಗೆ ಸೇರಿ ತಿಮ್ಮಯ್ಯ ಅವರನ್ನು ಸ್ಮರಿಸಿ ನಮನ ಸಲ್ಲಿಸಲಾಯಿತು.

ವೇದಿಕೆಯಲ್ಲಿ ತಿಮ್ಮಯ್ಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವದರೊಂದಿಗೆ ಮೈದಾನದಲ್ಲಿ ನೆರೆದಿದ್ದವರೂ ಸೇನಾನಿಗೆ ಗೌರವ ಸೂಚಿಸಿದರು. ಬಳಿಕ ನೆರೆದಿದ್ದವರಿಗೆ ಸಿಹಿ ವಿತರಿಸಲಾಯಿತು.

ಕುಂಡ್ಯೋಳAಡ ರಮೇಶ್ ಮುದ್ದಯ್ಯ ಸೇರಿದಂತೆ ಪದಾಧಿಕಾರಿ ಗಳು, ಚೊಟ್ಟೆರ ಸಂಜು, ಅಜ್ಜಮಕ್ಕಡ ವಿನು ಕುಶಾಲಪ್ಪ, ಚೋಕಿರ ಅನಿತಾ, ಹೊಟ್ಟೆಯಂಡ ಸಚಿನ್, ಶಾಂತೆಯAಡ ನಿರನ್ ಮತ್ತಿತರರು ಪಾಲ್ಗೊಂಡಿದ್ದರು.ಮಡಿಕೇರಿ: ಮಡಿಕೇರಿ ಕೊಡವ ಸಮಾಜ ಹಾಗೂ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವತಿಯಿಂದ ಮಡಿ ಕೇರಿಯಲ್ಲಿರುವ ಜನರಲ್ ತಿಮ್ಮಯ್ಯ ಪ್ರತಿಮೆಗೆ ಕೊಡವ ಸಮಾಜ ಅಧ್ಯಕ್ಷ ಮಂಡುವAಡ ಪಿ.ಮುತ್ತಪ್ಪ ಅವರು ಪುಷ್ಪಾರ್ಚನೆ ಮಾಡುವ ಮೂಲಕ ೧೧೮ನೇ ಜನರಲ್ ತಿಮ್ಮಯ್ಯ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ತಿಮ್ಮಯ್ಯ ಪ್ರತಿಮೆಗೆ ಪುಷ್ಪನಮನ ಮೂಲಕ ಗೌರವ ಸಲ್ಲಿಸಿದರು. ನಂತರದಲ್ಲಿ ಮಡಿಕೇರಿ ಕೊಡವ ಸಮಾಜದ ಪದಾಧಿಕಾರಿಗಳು, ಶಾಲಾ ಆಡಳಿತ ಮಂಡಳಿ ಸದಸ್ಯರು, ಶಾಲಾ ಶಿಕ್ಷಕರು, ಎನ್‌ಸಿಸಿ, ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಗೌರವ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮಡಿಕೇರಿ ಕೊಡವ ಸಮಾಜದ ಉಪಾಧ್ಯಕ್ಷÀ ಕೇಕಡ ವಿಜುದೇವಯ್ಯ, ಜಂಟಿ ಕಾರ್ಯದರ್ಶಿ ನಂದಿನೆರವAಡ ದಿನೇಶ್, ನಿರ್ದೇಶಕರುಗಳಾದ ಪುತ್ತರಿರ ಕರುಣ್ ಕಾಳಯ್ಯ, ನಂದಿನೆರವAಡ ರವಿಬಸಪ್ಪ, ಕಾಳಚಂಡ ಅಪ್ಪಣ್ಣ, ಮಂಡಿರ ಸದಾಮುದ್ದಪ್ಪ , ಕನ್ನಂಡ ಕವಿತಾಬೊಳ್ಳಪ್ಪ, ಬೊಪ್ಪಂಡ ಸರಳಾ ಕರುಂಬಯ್ಯ, ಜನರಲ್ ತಿಮ್ಮಯ್ಯ ಶಾಲೆಯ ಪಾಂಶುಪಾಲೆ ಕಲ್ಮಾಡಂಡ ಸರಸ್ವತಿ, ಆಡಳಿತಾಧಿಕಾರಿ ಮುಕ್ಕಾಟಿರ ಪೊನ್ನಮ್ಮ, ಚೌರಿರ ಕಾವೇರಿ ಪೂವಯ್ಯ, ಕೊಡವ ಮಕ್ಕಡ ಕೂಡದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ,ಚೊಟ್ಟೆಯಂಡ ಸಂಜು, ಅಜ್ಜಮಕ್ಕಡ ವಿನು, ಚೋಕಿರ ಅನಿತಾ, ತೆನ್ನಿರ ಮೈನಾ ಕೊಕ್ಕಲೆರ ತಿಮ್ಮಯ್ಯ, ಓಡಿಯಂಡ ತಿಮ್ಮಯ್ಯ, ಶಾಂತೆಯAಡ ನಿರನ್, ಪುರಸಭಾ ಸದಸ್ಯ ಸತೀಶ್, ರಾಜೇಶ್ ಯಲ್ಲಪ್ಪ, ಮಾಜಿ ಸದಸ್ಯರಾದ ಅಪ್ಪನೆರವಂಡ ಚುಮ್ಮಿದೇವಯ್ಯ, ಸಾಮಾಜಿಕ ಕಾರ್ಯಕರ್ತೆ ಹೊಟ್ಟೆಯಂಡ ಫ್ಯಾನ್ಸಿ, ಅಂಬೆಕಲ್ ಜೀವನ್ ಹಾಗೂ ಮಾಜಿ ಸೈನಿಕರು ಭಾಗವಹಿಸಿದ್ದರು.