ಶನಿವಾರಸಂತೆ, ಮಾ. ೩೧: ಗಡಿಭಾಗ ಹೊಸೂರು ಗ್ರಾಮದ ಹೊಸಕೋಟೆ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆ ವಿರೋಧಿಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರಿಸರ ಹೋರಾಟಗಾರರು, ರೈತರು, ಗ್ರಾಮಸ್ಥರ ಹಾಗೂ ಕೊಡಗಿನ ಪುಷ್ಪಗಿರಿ ಪಶ್ಚಿಮ ಘಟ್ಟ ಸಾಲಿನ ಪರಿಸರ ಹೋರಾಟಗಾರರ ವಿಶೇಷ ಸಭೆ ನಡೆಯಿತು.

ಹೊಸಕೋಟೆ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆಗೆ ನೀಡಿರುವ ಅನುಮತಿಯನ್ನು ರದ್ದುಪಡಿಸಬೇಕು. ಕೊಡಗು-ಹಾಸನ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲು ಮನವಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಇಲ್ಲವಾದಲ್ಲಿ ಬೆಟ್ಟದಲ್ಲಿ ಅಳವಡಿಸಿರುವ ಪರವಾನಗಿ ಸೂಚನಾ ಫಲಕಕ್ಕೆ ಮಂಗಳವಾರ ಮಸಿ ಬಳಿಯುವುದು ಹಾಗೂ ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಣಯಿಸಲಾಯಿತು.

ಸಭೆಯಲ್ಲಿ ಪರಿಸರ ಹೋರಾಟಗಾರ ಆರ್.ಪಿ. ವೆಂಕಟೇಶ್ ಮೂರ್ತಿ ಮಾತನಾಡಿ, ಪರಿಸರ ನಾಶವೇ ತಾಪಮಾನ ಹೆಚ್ಚಳಕ್ಕೆ ಕಾರಣ ಎಂದು ಹೇಳುವವರು ಹೊಸಕೋಟೆ ಬೆಟ್ಟ ಹಾಗೂ ಪಶ್ಚಿಮ ಘಟ್ಟ ಸಾಲಿನ ಬೆಟ್ಟದಲ್ಲಿ ಗಣಿಗಾರಿಕೆ ಮಾಡಲು ಪರವಾನಗಿ ನೀಡಿರುವುದು ದುರಂತ ಎಂದರು.

ಹಸಿರು ಸೇನಾ ಹೋರಾಟಗಾರ ನಿವೃತ್ತ ಪ್ರಾಧ್ಯಾಪಕ ಎಚ್.ಟಿ. ಪುಟ್ಟೇಗೌಡ ಮಾತನಾಡಿ, ಪಶ್ಚಿಮ ಘಟ್ಟ ಸಾಲಿನಲ್ಲಿರುವ ಹೊಸಕೋಟೆ ಬೆಟ್ಟದ ಕೆಳಗೆ ನದಿ ಹರಿಯುತ್ತಿರುವುದರಿಂದ ನಿತ್ಯ ಹಸಿರು ಪ್ರದೇಶವಾಗಿದೆ. ಆದರೆ, ಸರ್ಕಾರ ಗಣಿಗಾರಿಕೆಗೆ ಪರವಾನಗಿ ನೀಡುತ್ತಿರುವುದರಿಂದ ಹಸಿರು ಪ್ರದೇಶದ ಮೇಲೆ ಹೊಡೆತ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರಿಸರ ಹೋರಾಟಗಾರ ಹೊಸೂರು ರಮೇಶ್ ಮಾತನಾಡಿ, ಗಣಿಗಾರಿಕೆಗೆ ಸಂಬAಧಿಸಿದAತೆ ಎಲ್ಲಾ ಮಾಹಿತಿಯನ್ನು ಜಿಲ್ಲಾಧಿಕಾರಿ, ಗಣಿಗಾರಿಕಾ ಇಲಾಖೆ, ಸರ್ಕಾರಕ್ಕೆ ಸಲ್ಲಿಸಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಪರಿಸರ ಹೋರಾಟಗಾರರಾದ ಡಾ.ರಾಮಚಂದ್ರ, ಎಚ್.ಸಿ. ವಿಠಲ್, ಕೂತಿ ದಿವಾಕರ್, ಹೊಸಬೀಡು ಶಶಿಕುಮಾರ್, ಗುಂಡೇಗೌಡ, ಪುರುಷೋತ್ತಮ್ ಮಾತನಾಡಿದರು.

ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಜಾನಕಿ, ಪ್ರಮುಖರಾದ ಶಶಿಕುಮಾರ್, ಜಯಣ್ಣ, ಜಯರಾಜ್, ಶಿವಣ್ಣ, ರವಿ, ತಿಮ್ಮಣ್ಣ, ಇತರರು ಉಪಸ್ಥಿತರಿದ್ದರು.