ಮಡಿಕೇರಿ, ಏ. ೧: ದೇಹದಾರ್ಢ್ಯ (ಬಾಡಿ ಬಿಲ್ಡಿಂಗ್) ಎಂಬದು ಸಾಹಸಮಯವಾದ ಅಪಾರ ಪರಿಶ್ರಮದ ವಿಭಾಗ ಈ ಕ್ಷೇತ್ರದಲ್ಲಿ ಇದೀಗ ಕೊಡಗಿನ ಯುವಪ್ರತಿಭೆಯೊಬ್ಬರು ಸಾಧನೆ ತೋರುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಮೈಸೂರಿನಲ್ಲಿ ಜರುಗಿದ ಮೈಸೂರು ಸಿಟಿ ಇಂಟರ್ ಕಾಲೇಜಿಯೇಟ್ ಸ್ಪರ್ಧೆಯಲ್ಲಿ ಕೊಡಗಿನ ಯುವಕ ಕಂಬೆಯAಡ ಸ್ವಾಗತ್ ಬೋಪಣ್ಣ ಮೊದಲಿಗರಾಗಿ ಹೊರ ಹೊಮ್ಮಿದ್ದಾರೆ. ಮೈಸೂರಿನ ಸೆಂಟ್‌ಜೋಸೆಫ್ ಕಾಲೇಜಿನಲ್ಲಿ ಬಿಸಿಎ ವಿದ್ಯಾರ್ಥಿಯಾಗಿರುವ ೨೦ ರ ಹರೆಯದ ಸ್ವಾಗತ್ ೬೦ ಸ್ಪರ್ಧಿಗಳ ಪೈಕಿ ಪ್ರಥಮ ಸ್ಥಾನದೊಂದಿಗೆ ಟ್ರೋಫಿಗಳಿಸುವ ಮೂಲಕ ಈ ಕ್ಷೇತ್ರದಲ್ಲಿ ಮಿಂಚು ಹರಿಸಿದ್ದಾರೆ.
ಈ ಹಿಂದೆ ಮೈಸೂರು ವಿ.ವಿ.ಯಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದ ಸ್ವಾಗತ್ ಈ ಸಾಧನೆಯಿಂದಾಗಿ ಕೆಲ ಸಮಯದ ಹಿಂದೆ ಕ್ಯಾಲಿಕಟ್‌ನಲ್ಲಿ ನಡೆದ ಆಲ್ ಇಂಡಿಯಾ ಯೂನಿವರ್ಸಿಟಿ ಟೂರ್ನ್ಮೆಂಟ್ ನಲ್ಲೂ ಪಾಲ್ಗೊಂಡಿದ್ದರು. ಇವರ ಆಸಕ್ತಿಗೆ ಇದು ಕೂಡ ಉತ್ತಮ ಅವಕಾಶವಾಗಿತ್ತು. ಇದೀಗ ಮೈಸೂರು ಸಿಟಿ ಇಂಟರ್ ಕಾಲೇಜ್ ಸ್ಪರ್ಧೆಯಲ್ಲಿ ಮೊದಲಿಗರಾಗಿದ್ದಾರೆ. ಮೈಸೂರ ನಗರದ ಎಲ್ಲಾ ಕಾಲೇಜುಗಳಿಂದ ೬೦ ಸ್ಪರ್ಧಿಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು.
ಪ್ರದೀಪ್ ಪೂವಯ್ಯರ ಗರಡಿ
ಮಡಿಕೇರಿಯ ನವೋದಯ ಶಾಲೆಯ ವಿದ್ಯಾರ್ಥಿಯಾಗಿದ್ದ ಇವರು ಮಡಿಕೇರಿಯ ಜಿಮ್‌ಮಾಸ್ಟರ್ ಕೂರ್ಗ್ ಹೆಲ್ತ್ ಅಂಡ್ ಫಿಟ್‌ನೆಸ್ ಕ್ಲಬ್‌ನ ಚೆಪ್ಪುಡೀರ ಪ್ರದೀಪ್ ಪೂವಯ್ಯ ಅವರ ಗರಡಿಯಲ್ಲಿ ಪಳಗುತ್ತಿದ್ದಾರೆ. ಮಡಿಕೇರಿಯಲ್ಲೇ ತರಬೇತಿ ಹೊಂದಿದ್ದು, ಇದೀಗ ಮೈಸೂರಿನಲ್ಲ್ಲಿದ್ದರೂ ಆಗಾಗ್ಗೆ ಜಿಮ್‌ಮಾಸ್ಟರ್ ಪ್ರದೀಪ್ ಬಳಿ ಆಗಮಿಸುತ್ತಿರುವದಲ್ಲದೆ, ಫೋನ್ ಮೂಲಕವೇ ಅಗತ್ಯ ಸಲಹೆಯೊಂದಿಗೆ ಮೈಸೂರಿನಲ್ಲೂ ಇದನ್ನು ಮುಂದುವರಿಸುತ್ತಿದ್ದಾರೆ. ತನ್ನ ಸಾಧನೆಗೆ ಪ್ರದೀಪ್ ಪೂವಯ್ಯ ಅವರೇ ಪ್ರೇರಣೆ ಎನ್ನುವ ಸ್ವಾಗತ್ ಭವಿಷ್ಯದಲ್ಲಿ ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.
ಶಿಷ್ಯನ ಸಾಧನೆ ಬಗ್ಗೆ ಪ್ರತಿಕ್ರಿಯಿಸಿರುವ ಪ್ರದೀಪ್ ಪೂವಯ್ಯ ಅವರು ತಾವು ನ್ಯಾಚುರಲ್ ಬಾಡಿ ಬಿಲ್ಡಿಂಗ್‌ಗೆ ಮಾತ್ರ ಉತ್ತೇಜನ ನೀಡುತ್ತಿದ್ದು, ಸ್ವಾಗತ್ ಇದರಲ್ಲಿ ಕಠಿಣ ಪರಿಶ್ರಮ ತೋರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇವರಿಗೆ ಉತ್ತಮ ಭವಿಷ್ಯವಿದೆ ಎಂದಿದ್ದಾರೆ.
ಖ್ಯಾತ ಹಾಕಿಪಟು ಎಸ್.ವಿ. ಸುನಿಲ್ ಕೂಡ ಪ್ರದೀಪ್ ಅವರ ತರಬೇತಿ ಪಡೆದವರು. ಈ ಹಿಂದೊಮ್ಮೆ ಅವರು ಭಾರತ ಹಾಕಿ ತಂಡದೊAದಿಗೆ ಆಸ್ಟೆçÃಲಿಯಾ ದಲ್ಲಿದ್ದಾಗ ಗಾಯಗೊಂಡ ಸಂದರ್ಭ ನೇರವಾಗಿ ಚಿಕಿತ್ಸೆಗೆ ಆಗಮಿಸಿದ್ದು, ಪ್ರದೀಪ್ ಅವರ ಬಳಿಗೆ. ಬ್ಯಾಡ್‌ಮಿಂಟನ್ ಸಾಧಕಿ ತಾತಪಂಡ ಜ್ಯೋತಿ ಸೋಮಯ್ಯ ಅವರು ಕೂಡ ಇವರ ಮೂಲಕವೇ ಜಿಮ್ ತರಬೇತಿ ಹೊಂದುತ್ತಿದ್ದಾರೆ.
ಇದೀಗ ದೇಹದಾರ್ಢ್ಯತೆಯಲ್ಲಿ ಛಾಪು ಮೂಡಿಸುತ್ತಿರುವ ಸ್ವಾಗತ್ ಸೋಮಣ್ಣ ಮೂಲತಃ ಕಕ್ಕಬ್ಬೆಯವರಾದ ಮಡಿಕೇರಿಯಲ್ಲಿ ನೆಲೆಸಿರುವ ಕಂಬೆಯAಡ ಮುದ್ದಯ್ಯ ಹಾಗೂ ಕೌಶಿಕ ಮುತ್ತಮ್ಮ ಅವರ ಪುತ್ರ.
- ಶಶಿ ಸೋಮಯ್ಯ