ನಾಪೋಕ್ಲು, ಏ. ೧: ಕೊಡಗಿನ ಪ್ರಪ್ರಥಮ ಶ್ರೀ ಪೊನ್ನು ಮುತ್ತಪ್ಪ ದೇವಸ್ಥಾನ ಹಾಗೂ ಎರಡನೇ ಪರಶಿನಿ ಎಂದು ಪ್ರಖ್ಯಾತವಾಗಿರುವ ಇಲ್ಲಿನ ಪೊನ್ನು ಮುತ್ತಪ್ಪ ದೇವಾಲಯದ ವಾರ್ಷಿಕ ಉತ್ಸವ ತಾ.೩ರಿಂದ ತಾ.೫ ರವರೆಗೆ ನಡೆಯಲಿದೆ.

ತಾ.೩ರಂದು ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮ ಹಾಗೂ ಶುದ್ಧ ಕಳಸದೊಂದಿಗೆ ಕಾರ್ಯಕ್ರಮ ಆರಂಭವಾಗಲಿದ್ದು ರಾತ್ರಿ ೮.೩೦ ಕ್ಕೆ ಗುರು ಪೂಜೆ ಮತ್ತು ಶ್ರೀದೇವಿ ಪೂಜೆ ನಡೆಯಲಿದೆ. ೪ರಂದು ಮಧ್ಯಾಹ್ನ ೩ ಗಂಟೆಗೆ ಪೈಂಗುತ್ತಿ, ೬ ಗಂಟೆಗೆ ಮುತ್ತಪ್ಪ ದೇವರ ಕಳಸ ಕಾವೇರಿ ನದಿಯಲ್ಲಿ ಸ್ನಾನದ ಬಳಿಕ ಕೇರಳದ ಚಂಡೆÀ ವಾದ್ಯದೊಂದಿಗೆ ನಾಪೋಕ್ಲು ಪಟ್ಟಣದ ಮುಖ್ಯಬೀದಿಯಲ್ಲಿ ಮೆರವಣಿಗೆ ಸಾಗಲಿದೆ .ಸಂಜೆ ೭:೩೦ಕ್ಕೆ ಮುತ್ತಪ್ಪ ದೇವರ ವೆಳ್ಳಾಟಂ ಬಳಿಕ ಕುಟ್ಟಿಚಾತ ದೇವರ ಹಾಗೂ ಗುಳಿಗ ವೆಳ್ಳಾಟಂ, ತಾ.೫ರಂದು ಗುಳಿಗ, ಕುಟ್ಟಿಚಾತ ಕೋಲ ಹಾಗೂ ಶ್ರೀ ತಿರುವಪ್ಪ ಮತ್ತು ಮುತ್ತಪ್ಪ ತೆರೆಗಳು ನಡೆಯಲಿವೆ.