ಸಿದ್ದಾಪುರ, ಏ.೧: ಬಾಡಗ-ಬಾಣಂಗಾಲ ಗ್ರಾಮದ ಹುಂಡಿಯ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಶ್ರೀ ಮುತ್ತಪ್ಪ ದೇವರ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ೪೧ನೇ ವರ್ಷದ ವಾರ್ಷಿಕೋತ್ಸವ ತೆರೆ ಮಹೋತ್ಸವ ವಿಜೃಂಭಣೆ ಯಿಂದ ನಡೆಯಿತು.
ಹುಂಡಿಯ ಶ್ರೀ ಮುತ್ತಪ್ಪ ದೇವಾಲಯದಲ್ಲಿ ನಾಲ್ಕು ದಿನಗಳ ಕಾಲ ನಡೆದ ವಿವಿಧ ಪೂಜಾ ಕೈಂಕರ್ಯಗಳು ಹಾಗೂ ತೆರೆ ಮಹೋತ್ಸವಗಳಾದ ಭಗವತಿ ಸೇವೆ, ಮಹಾಗಣಪತಿ ಹೋಮ, ಶ್ರೀ ಮುತ್ತಪ್ಪ ದೇವರ ಪ್ರತಿಷ್ಠಾಪನೆ ಹಾಗೂ ಉಪದೇವತೆಗಳ ಪ್ರತಿಷ್ಠಾಪನೆ ದೀಪಾರಾಧನೆ ಪಯಂಕುಟ್ಟಿ ವೆಳ್ಳಾಟಂ, ಕಂಡಕರ್ಣ ವೆಳ್ಳಾಟಂ ಜರುಗಿತು. ಹುಂಡಿಯ ಹನಿಫಾರಂ ತೋಟದ ಕೆರೆಯಿಂದ ಶ್ರೀ ವಸೂಲಿಮಲದೇವಿಯನ್ನು ಚಂಡೆ ವಾದ್ಯದೊಂದಿಗೆ ದೇವಾಲಯಕ್ಕೆ ಕರೆ ತರಲಾಯಿತು. ಉತ್ಸವದ ಕೊನೆಯ ದಿನದ ರಾತ್ರಿ ಗುಳಿಗನ ತೆರೆ, ಕಂಡಕರ್ಣ ತೆರೆ, ತಿರುವಪ್ಪನತೆರೆ, ಶಾಸ್ತಪ್ಪನ ತೆರೆ, ಪೊಟ್ಟನ್ ತೆರೆ ವಸೂರಿಮಲ, ವಿಷ್ಣು ಮೂರ್ತಿ ತೆರೆಗಳು ನಡೆಯಿತು. ನಾಲ್ಕು ವಿನಗಳ ಕಾಲ ಭಕ್ತಾದಿಗಳಿಗೆ ಪ್ರಸಾದ ವಿತರಣೆ ವಿತರಿಸಲಾಯಿತು.