ನಾಪೋಕ್ಲು, ಏ. ೧: ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಕುಂಡ್ಯೋಳAಡ ಕಪ್‌ಹಾಕಿ ನಮ್ಮೆಯ ಮೂರನೇ ದಿನದ ಪಂದ್ಯಾಟದಲ್ಲಿ ೧೮ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.

ಬೆಳಿಗ್ಗೆ ಐಚಂಡ ಮತ್ತು ಮುಕ್ಕಾಟಿರ (ಬೇತ್ರಿ) ತಂಡಗಳ ನಡುವೆ ನಡೆದ ಮೊದಲ ಪಂದ್ಯದಲ್ಲಿ ಐಚಂಡ ತಂಡವು ಮುಕ್ಕಾಟಿರ ತಂಡವನ್ನು ೪-೧ ಗೋಲುಗಳ ಅಂತರದಿAದ ಪರಾಭವಗೊಳಿಸಿ ಮುಂದಿನ ಸುತ್ತು ಪ್ರವೇಶಿಸಿತು. ತಾಪಂಡ ಮತ್ತು ಚೋಕಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೋಕಿರ ತಂಡವು ಪೆನಾಲ್ಟಿ ಸ್ಟೊçÃಕ್‌ನಲ್ಲಿ ೩-೨ ಗೋಲುಗಳ ಅಂತರದಿAದ ಮುಂದಿನ ಸುತ್ತು ಪ್ರವೇಶಿಸಿತು. ನಾಳಿಯಂಡ ಮತ್ತು ಪೂಳಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನಾಳಿಯಂಡ ತಂಡವು ಪೂಳಂಡ ತಂಡವನ್ನು ೫-೦ ಗೋಲುಗಳಿಂದ ಸೋಲಿಸಿ ಭರ್ಜರಿ ಜಯ ದಾಖಲಿಸಿತು. ಮಾಚೇಟಿರ ಮತ್ತು ಬೊಳಕಾರಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬೊಳಕಾರಂಡ ತಂಡವು ಮಾಚೇಟಿರ ತಂಡವನ್ನು ೪-೦ ಗೋಲುಗಳಿಂದ ಪರಾಭವಗೊಳಿಸಿತು.

ಕೇತಿರ ಮತ್ತು ಚೆಯ್ಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೆಯ್ಯಂಡ ತಂಡವು ೨-೦ ಗೋಲುಗಳಿಂದ ಕೇತಿರ ತಂಡವನ್ನು ಸೋಲಿಸಿತು. ಗಾಂಡAಗಡ ಮತ್ತು ಮಚ್ಚೂರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ೫-೪ ಗೋಲುಗಳ ಅಂತರದಿAದ ಮಚ್ಚೂರ ತಂಡವನ್ನು ಮಣಿಸಿತು. ಕಾಳಿಮಾಡ ಮತ್ತು ಮಾದೇಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಾಳಿಮಾಡ ತಂಡವು ಮಾದೆಯಂಡ ತಂಡವನ್ನು ೨-೦ ಗೋಲಿನಿಂದ ಸೋಲಿಸಿತು. ಕೊಣಿಯಂಡ ಮತ್ತು ಮಂಡೀರ (ಮಾದಾಪುರ) ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೊಣಿಯಂಡ ತಂಡವು ಮಂಡೀರ ತಂಡವನ್ನು ೧-೦ ಗೋಲಿನಿಂದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು.

ಪಾಲೇಂಗಡ ಮತ್ತು ಮೇದೂರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪಾಲೆಂಗಡ ತಂಡವು ಮೇದೂರ ತಂಡವನ್ನು ೧-೦ ಗೋಲಿನಿಂದ ಪರಾಭವಗೊಳಿಸಿತು. ತೆನ್ನೀರ ಮತ್ತು ಮೂಕಚಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೂಕಚಂಡ ತಂಡವು ತೆನ್ನೀರ ತಂಡವನ್ನು ೩-೦ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಅಣ್ಣೀರ ಮತ್ತು ಬೊಟ್ಟಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಬೊಟ್ಟಂಗಡ ತಂಡವು ಅಣ್ಣೀರ ತಂಡವನ್ನು ೩-೦ ಗೋಲುಗಳ ಅಂತರದಿAದ ಸೋಲಿಸಿತು.

ಕುಯಿಮಂಡ ಮತ್ತು ಮಾಣಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಾಣೀರ ತಂಡವು ಕುಯಿಮಂಡ ತಂಡವನ್ನು ೧-೦ ಗೋಲಿನ ಅಂತರದಿAದ ಸೋಲಿಸಿತು. ಆಚೆಯಡ ಮತ್ತು ಪುಗ್ಗೇರ ತಂಡಗಳ ನಡುವೆ ನಡೆಯ ಬೇಕಿದ್ದ ಪಂದ್ಯವು ಆಚೆಯಡ ತಂಡದ ಗೈರುಹಾಜರಿನ ಹಿನ್ನೆಲೆಯಲ್ಲಿ ಪುಗ್ಗೇರ ತಂಡ ಮುಂದಿನ ಸುತ್ತು ಪ್ರವೇಶಿಸಿತು. ಕೊಳುಮಾಡಂಡ ಮತ್ತು ಅಕ್ಕಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಕೊಳುಮಾಡಂಡ ತಂಡವು ಅಕ್ಕಪಂಡ ತಂಡವನ್ನು ೧-೦ ಗೋಲಿನಿಂದ ಸೋಲಿಸಿತು.

ಬಾದುಮಂಡ ಮತ್ತು ಚನ್ನಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಬಾದುಮಂಡ ತಂಡವು ಚನ್ನಪ್ಪಂಡ ತಂಡವನ್ನು ೪-೦ ಗೋಲಿನಿಂದ ಪರಾಭವಗೊಳಿಸಿತು. ಬೊಳ್ಳಚಂಡ ಮತ್ತು ಮುಕ್ಕಾಟಿರ(ಮೂವತ್ತೊಕ್ಲು) ತಂಡಗಳ ನಡುವಿನ ಪಂದ್ಯದಲ್ಲಿ ಮುಕ್ಕಾಟಿರ ತಂಡವು ಟೈಬ್ರೇಕರ್‌ನಲ್ಲಿ ಬೊಳ್ಳಚಂಡ ತಂಡವನ್ನು ೯-೮ ಗೋಲುಗಳಿಂದ ಪರಾಭವಗೊಳಿಸಿತು. ಕೊಲ್ಲಿರ ಮತ್ತು ಮಲ್ಲೇಂಗಡ ತಂಡಗಳ ನಡುವಿನ ಪಂದ್ಯಾಟ ಮಲ್ಲೇಂಗಡ ತಂಡದ ಗೈರುಹಾಜರಿನ ಹಿನ್ನೆಲೆಯಲ್ಲಿ ಕೊಲ್ಲಿರ ತಂಡ ಮುಂದಿನ ಸುತ್ತು ಪ್ರವೇಶಿಸಿತು. ಪಡಿಯೆಟ್ಟಿರ ಹಾಗೂ ಕನ್ನಿಕಂಡ ತಂಡಗಳೆರಡೂ ಗೈರಾಗಿದ್ದರಿಂದ ಪಂದ್ಯಾವಳಿಯಿAದ ಹೊರಗುಳಿಯುವಂತಾಯಿತು. -ಪಿ.ವಿ.ಪ್ರಭಾಕರ್