ಸೋಮವಾರಪೇಟೆ, ಏ.೧ : ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಪಕ್ಷದ ಶಾಸಕರಿದ್ದು, ಕೊಡಗಿನಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ೫ ಗ್ಯಾರಂಟಿ ಯೋಜನೆಗಳೊಂದಿಗೆ, ಅಭಿವೃದ್ಧಿ ಕಾಮಗಾರಿಗಳಿಗೆ ಕಾಂಗ್ರೆಸ್ ಸರ್ಕಾರ ಹೆಚ್ಚಿನ ಅನುದಾನ ನೀಡಿದೆ. ಲೊಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ. ಕಾರ್ಯಕರ್ತರು ಸರಕಾರದ ಯೋಜನೆಗಳನ್ನು ಪ್ರತಿ ಮನೆಗೂ ತಲುಪಿಸಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ಹೇಳಿದರು.

ಪಟ್ಟಣದ ಮಹಿಳಾ ಸಮಾಜದಲ್ಲಿ ನಗರ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೊಡಗಿನ ಒಂದೂವರೆ ಲಕ್ಷ ಮಹಿಳೆಯರಿಗೆ ಗೃಹಲಕ್ಷಿ ಯೋಜನೆ ಯಿಂದ ತಲಾ ೨ ಸಾವಿರ ರೂ. ಗಳು ಖಾತೆಗೆ ಬರುತ್ತಿದೆ. ಕಾಂಗ್ರೆಸ್, ಬಿಜೆಪಿ ಸೇರಿದಂತೆ ಇನ್ನಿತರ ಪಕ್ಷಗಳ ಕುಟುಂಬಗಳಿಗೂ ಗ್ಯಾರಂಟಿ ಹಣ ಹೋಗುತ್ತಿದೆ. ಯೋಜನೆಯ ಹಣವನ್ನು ಮಹಿಳೆಯರು ಸದು ಯೋಗಪಡಿಸಿಕೊಳ್ಳುತ್ತಿದ್ದಾರೆ. ಬಡ ಕುಟುಂದವರಿಗೆ ಮಾಸಿಕ ೪ ಸಾವಿರ ರೂ. ಗಳಷ್ಟು ಹಣ ಸರ್ಕಾರ ಜನಕಲ್ಯಾಣಕ್ಕಾಗಿ ಮಾಡಿರುವ ಯೋಜನೆಗಳಿಂದ ಸಿಗುತ್ತಿದೆ ಎಂದು ಶಾಸಕರು ಹೇಳಿದರು.

ಇಂತಹ ಮಹಾನ್ ಯೋಜನೆ ಯನ್ನು ರೂಪಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಮಹಿಳೆಯರು ಮತ್ತು ಕುಟುಂಬದವರು ಆಶೀರ್ವಾದ ಮಾಡೇ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಸೋಮವಾರಪೇಟೆ ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆಗಾಗಿ ೧೧ಕೋಟಿ ರೂ.ಗಳಷ್ಟು ಹಣವನ್ನು ಸರ್ಕಾರ ನೀಡಿದೆ. ಪಟ್ಟಣದ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನಕ್ಕೆ ರಾಜ್ಯ ಸರ್ಕಾರ ೪೦ ಲಕ್ಷ ರೂ.ಗಳನ್ನು ಬಿಡುಗಡೆಗೊಳಿಸಿ ಸರ್ಕಾರ ಬಂದು ಕಡಿಮೆ ಸಮಯದಲ್ಲೇ ಟರ್ಫ್ ಉದ್ಘಾಟನೆಗೊಂಡು, ರಾಷ್ಟçಮಟ್ಟದ ಪಂದ್ಯಾವಳಿ ನಡೆದಿದೆ. ಹಲವು ದಶಕಗಳಿಂದ ನಿರ್ಮಾಣವಾಗದ ಕಕ್ಕೆಹೊಳೆ ಹಾಗೂ ಐಗೂರು ಕಬ್ಬಿಣ ಸೇತುವೆ ಕಾಮಗಾರಿಗೆ ಸರ್ಕಾರ ಹಣ ಬಿಡುಗಡೆಗೊಳಿಸಿದೆ ಎಂದರು.

ಕಾAಗ್ರೆಸ್ ಪಕ್ಷ ದೇಶಕ್ಕೆ ಕೊಟ್ಟ ಕೊಡುಗೆಯನ್ನು ಇದುವರೆಗೆ ಯಾರಿಗೂ ಕೊಡಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ ದೇವರಾಜು ಅರಸ್ ಅವರ ಅವಧಿ ಬಿಟ್ಟರೆ, ಈಗ ೧೩೬ ಸ್ಥಾನ ಬಂದಿದೆ. ಕಾಂಗ್ರೆಸ್ ಗ್ಯಾರೆಂಟಿ ಹೆಸರನ್ನು ಪ್ರಧಾನಿ ಮೋದಿ ಅವರೂ ನಕಲು ಮಾಡಿದ್ದಾರೆ. ಆದರೆ ಮೋದಿ ಗ್ಯಾರಂಟಿ ಬರೀ ಸುಳ್ಳು ಎಂದು ಅರೋಪಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್ ಮಾತನಾಡಿ ಕಕ್ಕೆಹೊಳೆ ಕಾಂಗ್ರೆಸ್ ಎಂದು ಮೂದಲಿಸಿದವರು ಮನೆಯಲ್ಲಿ ಕುಳಿತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ರೈತರು, ಕಾರ್ಮಿಕರು, ಬಡವರು, ಶ್ರೀಮಂತರು ಎಲ್ಲರಿಗೂ ಗ್ಯಾರಂಟಿ ಮೂಲಕ ಸೌಲಭ್ಯ ಒದಗಿಸಿದೆ. ಅಂತಹ ಸರ್ಕಾರಗಳಿಗೆ ಮತದಾರರು ಆಶೀರ್ವಾದ ಮಾಡಲಿದ್ದಾರೆ ಎಂದು ಹೇಳಿದರು

ಪಕ್ಷದ ಪ್ರಮುಖರಾದ ಕೆ.ಎಂ. ಲೋಕೇಶ್, ಕೆ.ಎ.ಯಾಕೂಬ್, ಎಚ್.ಸಿ.ನಾಗೇಶ್, ಎಚ್.ಆರ್. ಸುರೇಶ್, ಕೆ.ಎ.ಆದಂ, ಎಚ್.ಎ. ನಾಗರಾಜ್ ಮಾತನಾಡಿದರು. ಶೀಲಾ ಡಿಸೋಜ, ಬಿ.ಈ.ಜಯೇಂದ್ರ, ಚೇತನ್, ಜನಾರ್ಧನ್ ವೇದಿಕೆಯಲ್ಲಿದ್ದರು.