ಮಡಿಕೇರಿ, ಏ. ೧: ದಕ್ಷಿಣ ಕೊಡಗಿನ ಶ್ರೀ ಪಾಕೇರಿ ನಾಡು ಬಿರುನಾಣಿಯ ಶ್ರೀ ಪುತ್ತು ಭಗವತಿ ದೇವಸ್ಥಾನದ ವಿಶೇಷತೆಯಾದ ‘ಪೊಮ್ಮಂಗಲ’ ಕಾರ್ಯ ನಿನ್ನೆ ವಿಜೃಂಭಣೆಯೊAದಿಗೆ ನಡೆಯಿತು. ದೇವಸ್ಥಾನದ ವಾರ್ಷಿಕ ಉತ್ಸವದ ಸಂದರ್ಭ ಈ ದೈವಿಕ ಕಾರ್ಯ ಶ್ರದ್ಧಾಭಕ್ತಿಯೊಂದಿಗೆ ಸಂಭ್ರಮ-ಸಡಗರದೊAದಿಗೆ ಆಚರಿಸಲ್ಪಡುತ್ತದೆ. ದೇವಸ್ಥಾನದ ವಾರ್ಷಿಕ ಉತ್ಸವ ಮಾರ್ಚ್ ೨೪ ರೊಂದಿಗೆ ಆರಂಭಗೊAಡಿದ್ದು ವಿವಿಧ ಧಾರ್ಮಿಕ ಕೈಂಕರ್ಯಗಳಲ್ಲಿ ನಾಡಿನ ಭಕ್ತರು ಪಾಲ್ಗೊಂಡಿದ್ದಾರೆ. ಉತ್ಸವ ೧೦ ದಿನಗಳ ಕಾಲ ಸಂಪ್ರದಾಯ ಬದ್ಧವಾಗಿ ಆಚರಿಸಲ್ಪಡುತ್ತದೆ. ಈ ದೇವಸ್ಥಾನದ ವಿಶೇಷ ಹರಕೆಯಾದ ಪೊಮ್ಮಂಗಲ ಕಾರ್ಯ ನಿನ್ನೆ ನಡೆದಿದ್ದು ೩೭ ಮಂದಿ ಈ ಬಾರಿ ಹರಕೆ ಒಪ್ಪಿಸಿದರು. ಕೊಡವ ಸಂಪ್ರದಾಯದಲ್ಲಿನ ಮದುವೆ ಪದ್ಧತಿಯಂತೆ ಈ ಹರಕೆ ಒಪ್ಪಿಸಲಾಗುತ್ತದೆ. ಆದರೆ ಇಲ್ಲಿರುವ ವಿಶೇಷತೆಯೆಂದರೆ ಬಾಲಕಿಯರು, ವರನ ವೇಷದಲ್ಲಿ ಹಾಗೂ ಬಾಲಕರು ವಧುವಿನ ವೇಷದಲ್ಲಿ ಬದಲಾಗುವುದು. ಬಾಲಕಿಯರು ಪ್ರಾಯಕ್ಕೆ ಬರುವ ಮುನ್ನ ಹಾಗೂ ಬಾಲಕರು ಮದುವೆಯಾಗುವ ಮುನ್ನ ಈ ಹರಕೆಯನ್ನು ಹೊತ್ತವರು ಇದನ್ನು ನೆರವೇರಿಸಬೇಕಾಗುತ್ತದೆ. ಪುರಾತನ ಕಾಲದಿಂದಲೇ ಇದು ನಡೆದು ಬಂದಿದ್ದು, ಹಲವು ರೀತಿಯ ಸಂಕಷ್ಟಗಳ ನಿವಾರಣೆಗಾಗಿ ಈ ಹರಕೆ ಹೊತ್ತುಕೊಳ್ಳಲಾಗುತ್ತದೆ. ವೃತಧಾರಿಗಳು ಅವರವರ ಮನೆಯಲ್ಲಿ ಕೊಡವ ಮದುವೆ ಪದ್ಧತಿಯಂತೆ ಶಾಸ್ತç ಮಾಡಿ ಅಪರಾಹ್ನ ದೇವಾಲಯಕ್ಕೆ ಆಗಮಿಸುತ್ತಾರೆ. ಅಲ್ಲಿ ದುಡಿಕೊಟ್ಟ್ಪಾಟ್ ಸಹಿತವಾಗಿ ದೇವಾಲಯಕ್ಕೆ ಪ್ರದಕ್ಷಿಣೆ ಬಂದು ಪ್ರಸಾದ ಸ್ವೀಕರಿಸಿದ ಬಳಿಕ ಈ ಕಾರ್ಯ ಮುಕ್ತಾಯಗೊಳ್ಳುತ್ತದೆ. ಧಾರ್ಮಿಕ ಭಕ್ತಭಾವದೊಂದಿಗೆ ವಿಜೃಂಭಣೆಯಿAದಲೂ ಇದು ಆಚರಿಸಲ್ಪಡುತ್ತದೆ. ಸಂಜೆ ನೆರಪು ದೇವರ ದರ್ಶನ ರಾತ್ರಿ ಪಳ್ಳಿ ಬೇಟೆ (ಶಯನ) ಕಾರ್ಯ ನಡೆಯಿತು. ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಕಾಳಿಮಾಡ ಮುತ್ತಣ್ಣ, ಕಾರ್ಯದರ್ಶಿ ಕಳಕಂಡ ಜಿತು ಕುಶಾಲಪ್ಪ, ದೇವತಕ್ಕ ಅಣ್ಣಳಮಾಡ ಗಿರೀಶ್, ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿಯವರು ಪಾಲ್ಗೊಂಡಿದ್ದರು. ಅರ್ಚಕ ದೀಕ್ಷಿತ್ ನೇತೃತ್ವದಲ್ಲಿ ವಿಧಿ-ವಿಧಾನಗಳು ನೆರವೇರಿದವು.
ವಾರ್ಷಿಕ ಉತ್ಸವದ ಅಂತಿಮ ದಿನವಾದ ಏ.೧ ರಂದು ಬೆಳಿಗ್ಗೆ ೧೧ ಗಂಟೆಗೆ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ, ಸಂಜೆ ದೇವರ ದರ್ಶನ, ಅವಭೃತ ಸ್ನಾನ, ದೇವರ ನೃತ್ಯ, ವಸಂತಪೂಜೆ, ಅನ್ನದಾನದಂತಹ ಕಾರ್ಯಗಳು ಜರುಗಿದವು. ಅಪಾರ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.