ಗೋಣಿಕೊಪ್ಪಲು, ಏ. ೧: ಕೊಡಗಿನಲ್ಲಿ ಹಲವು ಸಮಾಜಗಳು ವಿವಿಧ ರೀತಿಯ ಕ್ರೀಡೆಗಳನ್ನು ವಾರ್ಷಿಕವಾಗಿ ನಡೆಸಿಕೊಂಡು ಬರುತ್ತಿವೆ. ಆ ಮೂಲಕ ತಮ್ಮ ಒಗ್ಗಟ್ಟನ್ನು ಕಾಪಾಡುತ್ತಿವೆ, ಅದೇ ರೀತಿಯಲ್ಲಿ ಮೊದಲ ಬಾರಿಗೆ ಸವಿತಾ ಸಮಾಜ ಕ್ರಿಕೆಟ್ ಹಬ್ಬ ಆಚರಿಸುವ ಮೂಲಕ ತಮ್ಮ ಸಮಾಜದ ಬಾಂಧವರನ್ನು ಒಟ್ಟಿಗೆ ಸೇರಿಸುವ ಪ್ರಯತ್ನ ನಡೆಸಿದೆ. ಇದು ಶ್ಲಾಘನೀಯ, ಸಮಾಜದ ಏಳಿಗೆಗೋಸ್ಕರ ದುಡಿಯುವಂತಾಗಬೇಕು, ಸಂಘಟನೆ ಇನ್ನಷ್ಟು ಗಟ್ಟಿಯಾಗಬೇಕು,

ಬಲಿಷ್ಠವಾಗಿ ಬೆಳೆಯಬೇಕು ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ. ಎಸ್.ಪೊನ್ನಣ್ಣ ಕರೆ ನೀಡಿದರು.

ಹಾತೂರಿನ ಶಾಲಾ ಮೈದಾನದಲ್ಲಿ ಸವಿತಾ ಸಮಾಜದ ವತಿಯಿಂದ ಆಯೋಜನೆಗೊಂಡಿದ್ದ ಮೊದಲ ವರ್ಷದ ಕ್ರಿಕೆಟ್ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸವಿತಾ ಸಮಾಜದ ಬಾಂಧವರು ಕೊಡಗಿನ ಹೆಮ್ಮೆಯ ಸುಪುತ್ರರಾಗಿದ್ದಾರೆ. ಸಣ್ಣ ಪ್ರಮಾಣದಲ್ಲಿ ಜನಸಂಖ್ಯೆ ಹೊಂದಿದ್ದರೂ ಸಮಾಜಕ್ಕೆ ವಿಶೇಷ ಕೊಡುಗೆ ನೀಡುತ್ತಿದ್ದಾರೆ. ಎಲ್ಲಾ ಸಮಾಜ ಸೇರಿದರೆ ಮಾತ್ರ ಕೊಡಗು ನಾಡಾಗಲೂ ಸಾಧ್ಯ.

ಯಾರನ್ನು ಹೊರತು ಪಡಿಸಿ ನಾಡನ್ನು ಕಟ್ಟಲು ಸಾಧ್ಯವಿಲ್ಲ. ಎಲ್ಲಾ ವರ್ಗ, ಸಮಾಜ ಒಗ್ಗೂಡಿಸಿ ನಾಡಿನ ಅಭಿವೃದ್ಧಿ ಆದಲ್ಲಿ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲಿದೆ.

ಯಾವುದೇ ಕಾರ್ಯಕ್ರಮ ರೂಪಿಸುವಾಗ ಸಣ್ಣ, ಸಣ್ಣ ಸಮಾಜಗಳ ಅಭಿವೃದ್ಧಿಗೆ ಪೂರಕವಾದ ಅಂಶಗಳನ್ನು ಒಳಗೊಂಡು ಕಾರ್ಯಕ್ರಮ ರೂಪಿಸಲಾಗುತ್ತಿದೆ. ಮೊದಲ ಬಾರಿಗೆ ಸವಿತಾ ಸಮಾಜದ ಐನ್ ಮನೆಗಳ ಅಭಿವೃದ್ಧಿಗೆ ಸರ್ಕಾರದ ವತಿಯಿಂದ ಅನುದಾನ ನೀಡಲಾಗಿದೆ. ಮುಂದೆಯೂ ಅನುದಾನ ನೀಡುವ ಪ್ರಯತ್ನ ಮಾಡಲಾಗುತ್ತದೆ.

ಕ್ಷೇತ್ರದ ಎಂಟು ಹೋಬಳಿಯಲ್ಲಿ ಮೈದಾನವನ್ನು ಅಭಿವೃದ್ಧಿ ಪಡಿಸಿ, ಆ ಮೂಲಕ ಕ್ರೀಡೆಗೆ ಒತ್ತು ನೀಡಲಾಗುತ್ತಿದೆ.

ಸವಿತಾ ಸಮಾಜದ ಜನಸಂಖ್ಯೆ ಕಡಿಮೆ ಇದ್ದರೂ ಎಲ್ಲರೂ ಒಗ್ಗೂಡುವ ಪ್ರಯತ್ನ ಮಾಡಿರುವುದು ಉತ್ತಮ ಬೆಳವಣಿಗೆ ಹಾಗೂ ಶ್ಲಾಘನೀಯ. ಸವಿತಾ ಸಮಾಜ ಕೊಡಗಿನ ಆಚಾರ, ವಿಚಾರ, ಸಂಸ್ಕೃತಿ, ಸಂಪ್ರದಾಯದೊAದಿಗೆ ಮುಂದೆ ಸಾಗುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದರು.

(ಮೊದಲ ಪುಟದಿಂದ) ಪೊನ್ನಂಪೇಟೆ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಪೂಣಚ್ಚಿರ ಎಸ್. ಮನೋಜ್ ಅಧ್ಯಕ್ಷತೆಯಲ್ಲಿ ಜರುಗಿದ ಕ್ರೀಡೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಲ್ಲೀರ ಬೋಪಣ್ಣ, ಗೋಣಿಕೊಪ್ಪ ಗ್ರಾ.ಪಂ.ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ,ಪೊನ್ನಂಪೇಟೆ ಗ್ರಾ.ಪಂ.ಅಧ್ಯಕ್ಷ ಅಣ್ಣಿರ ಹರೀಶ್, ಅಕ್ರಮ,ಸಕ್ರಮ ಸಮಿತಿ ಸದಸ್ಯೆ ತೆರಸ ವಿಕ್ಟರ್, ಸವಿತಾ ಸಮಾಜದ ಜಿಲ್ಲಾ ಅಧ್ಯಕ್ಷ ಕೆ.ಎಸ್. ದೊರೇಶ್, ಹಾತೂರು ವಲಯ ಕಾಂಗ್ರೆಸ್ ಅಧ್ಯಕ್ಷ ಕೊಕ್ಕಂಡ ರೋಷನ್, ಸಮಾಜದ ಉಪಾಧ್ಯಕ್ಷ ನಾಯಂದರ ಆರ್.ಶಿವಾಜಿ, ಬಿ.ಶೆಟ್ಟಿಗೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ತೀತಿಮಾಡ ಸದಾ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಶಾಸಕ ಎ.ಎಸ್.ಪೊನ್ನಣ್ಣನವರನ್ನು ಸವಿತಾ ಸಮಾಜದ ವತಿಯಿಂದ ಸನ್ಮಾನಿಸಿ, ಗೌರವಿಸಿದರು.

ಶಾಸಕ ಪೊನ್ನಣ್ಣ ಸೇರಿದಂತೆ ಗಣ್ಯರನ್ನು ವೇದಿಕೆಗೆ ಕೊಡವ ವಾಲಗದೊಂದಿಗೆ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು. ಸಮಾಜದ ಮಹಿಳೆಯರು, ಪುರುಷರು ಸಾಂಪ್ರದಾಯಿಕ ಶೈಲಿಯ ಉಡುಪಿನೊಂದಿಗೆ ಪಾಲ್ಗೊಂಡಿದ್ದರು.

ಎರಡು ದಿನಗಳ ಕಾಲ ನಡೆಯುವ ಕ್ರಿಕೆಟ್ ಹಬ್ಬದಲ್ಲಿ ಸಮಾಜದ ೧೦ ತಂಡಗಳು ಭಾಗವಹಿಸಿದ್ದವು. ಬ್ಯಾಟ್ ಮಾಡುವ ಮೂಲಕ ಶಾಸಕ ಪೊನ್ನಣ್ಣ ಕ್ರಿಕೆಟ್ ಹಬ್ಬಕ್ಕೆ ಚಾಲನೆ ನೀಡಿದರು.

ಸಮಾಜದ ಅಕ್ಷರ ತಂಗಮ್ಮ ಪ್ರಾರ್ಥಿಸಿ, ರಾಕ್ಮಿ ಪ್ರವೀಣ್ ಸ್ವಾಗತಿಸಿ, ಸುಮನ್ ಮನೋಜ್,ರಾಕ್ಮಿ ನಿರೂಪಿಸಿ, ಸುಮನ್ ವಂದಿಸಿದರು.

ಸಮಾರAಭದಲ್ಲಿ ಸಮಾಜದ ಹಿರಿಯರಾದ ಜಪ್ಪು ಸುಬ್ಬಯ್ಯ, ಬೇಬಿ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

-ಚಿತ್ರ,ವರದಿ ಹೆಚ್.ಕೆ.ಜಗದೀಶ್