ಮೆಕ್ಸಿಕೊ, ಏ. ೧: ಮೆಕ್ಸಿಕೊ ದೇಶದಲ್ಲಿ ನಡೆದ ಸ್ಯಾನ್ ಲುವಿ ಟೆನ್ನಿಸ್ ಓಪನ್ (ರೆಡ್ ಕ್ಲೇ ಕೋರ್ಟ್) ನಲ್ಲಿ ಮೂಲತಃ ಕೊಡಗಿನ ವರಾದ ಕಲಿಯಂಡ ನಿಕ್ಕಿ ಪೂಣಚ್ಚ (೨೮) ಹಾಗೂ ರಿತ್ವಿಕ್ ಬೊಳ್ಳಿಪಳ್ಳಿ ಜೋಡಿ ಭಾರತವನ್ನು ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರತಿನಿಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಎ.ಟಿ.ಪಿ ಚಾಲೆಂಜರ್ನ ಭಾಗವಾದ ಮೆಕ್ಸಿಕೊದಲ್ಲಿ ಪ್ರತಿವರ್ಷ ನಡೆಯುವ ಈ ಟೂರ್ನಿಯ ಫೈನಲ್ನಲ್ಲಿ ನಿಕ್ಕಿ ಪೂಣಚ್ಚ-ರಿತ್ವಿಕ್ ಜೋಡಿ ಸ್ವಿಟ್ಜರ್ ಲ್ಯಾಂಡ್ನ ಅಂಟೊಯ್ನ್-ಮಾರ್ಕ್ ಜೋಡಿಯನ್ನು ೨ ನೇರ ಸೆಟ್ಗಳಲ್ಲಿ ೬-೩, ೬-೨ ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ನಿಕ್ಕಿ ಪೂಣಚ್ಚ ಅವರು, ಮೂಲತಃ ಕೊಡಗಿನವರಾದ ಇದೀಗ ಆಂಧ್ರ ಪ್ರದೇಶದ ಅನಂತಪುರದಲ್ಲಿ ನೆಲೆಸಿರುವ ಕಲಿಯಂಡ ಪೂಣಚ್ಚ ಹಾಗೂ ವೀಣಾ ದಂಪತಿಯ ಪುತ್ರ.